ಚಿಕ್ಕನಾಯಕನಹಳ್ಳಿ: ತುಮಕೂರು ಜಿಲ್ಲೆ, ಚಿಕ್ಕನಾಯಕನಹಳ್ಳಿ ನಗರದಲ್ಲಿ, ಡಾ.ಬಾಬು ಜಗಜೀವನರಾಂ ಪರಿಶಿಷ್ಟ ಜಾತಿಯ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆಯನ್ನು ನಡೆಸಲಾಯಿತು.
ಈ ವಾರ್ಷಿಕ ಮಹಾಸಭೆಯನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟನೆಯನ್ನು ಮಾಡಲಾಯಿತು. ಈ ಮಹಾಸಭೆಯ ಅಧ್ಯಕ್ಷತೆಯನ್ನು ಆಡಳಿತಾಧಿಕಾರಿಗಳಾದ ಮಹಾಂತೇಶ್ ರವರು ವಹಿಸಿದ್ದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಸಂಸ್ಥಾಪಕ ಅಧ್ಯಕ್ಷರಾದ ಶಿವಣ್ಣ, ನಾವು ಸೊಸೈಟಿಯನ್ನು 2009 ರಲ್ಲಿ ಪ್ರಾರಂಭಿಸಿ, ಇಲ್ಲಿಯವರೆಗೂ ಮುನ್ನಡೆಸಿಕೊಂಡು ಬಂದಿದ್ದೇವೆ. ಇದೇ ರೀತಿ ಇನ್ನು ಮುಂದೆಯೂ ಕೂಡ, ಮುಂದೆ ಆಯ್ಕೆಯಾಗುವ ಕಾರ್ಯಕಾರಿ ಮಂಡಳಿಯೂ ಸಹ ಯಾವುದೇ ಲೋಪ ದೋಷಗಳನ್ನು ತರದಂತೆ, ನಮ್ಮ ಮಾದಿಗ ಸಮಾಜದ ಶ್ರೇಯೋಭಿವೃದ್ಧಿಗೆ ಪೂರಕವಾಗಿ ಕಾರ್ಯಯೋಜನೆಗಳನ್ನು ರೂಪಿಸಿಕೊಂಡು, ಸಮಾಜಮುಖಿಯಾಗಿ ಕೆಲಸ ಮಾಡಿಕೊಂಡು ಹೋಗಬೇಕೆಂದು ಹೇಳಿದರು.
ಇಡೀ ಸಂದರ್ಭದಲ್ಲಿ ಕಾತ್ರಿಕೇಹಾಲ್ ಗೋವಿಂದರಾಜು ಮಾತನಾಡಿ, ನಾವು ಇನ್ನು ಮುಂದೆ ಈ ಸೊಸೈಟಿಯನ್ನು, ನಮ್ಮ ಜಿಲ್ಲೆಯಲ್ಲಿಯೇ ಒಂದು ಮಾದರಿ ಪತ್ತಿನ ಸಹಕಾರ ಸಂಘವನ್ನಾಗೀ ಮಾಡುವತ್ತ, ಎಲ್ಲಾ ನಿರ್ದೇಶಕರುಗಳು ಪಣತೊಟ್ಟು ಕೆಲಸ ಮಾಡಬೇಕೆಂದು ಕರೆ ನೀಡಿದರು.
ಕಂಟಲಗೆರೆ ನಂಜುಂಡಯ್ಯನವರು ಮಾತನಾಡಿ, ಸಂಘದ ಬೆಳವಣಿಗೆಯ ಕುಂಠಿತವಾಗುವುದು, ಹೆಚ್ಚು ಖರ್ಚು ವೆಚ್ಚಗಳು. ಹಾಗಾಗಿ ನಾವು ನಾವು ಖರ್ಚು ವೆಚ್ಚಗಳನ್ನು ಆದಷ್ಟೂ ಮಟ್ಟಿಗೆ ಕಡಿಮೆ ಮಾಡಿ, ಆದಾಯವನ್ನು ಹೆಚ್ಚಿಸುವುದರ ಬಗ್ಗೆ ಹೆಚ್ಚಿನ ಒತ್ತನ್ನು ನೀಡುವುದರ ಮೂಲಕ ಸಂಘವನ್ನು ಚೆನ್ನಾಗಿ ಬೆಳೆಸಬಹುದು ಎಂದು ಸಲಹೆ ನೀಡಿದರು.
ಹಾಗೆಯೇ ಮಾಜಿ ನಿರ್ದೇಶಕರಾದ ತರಬೇನಹಳ್ಳಿ ಚಿದಾನಂದಮೂರ್ತಿ ಮಾತನಾಡಿ, ನಾವು ಸಾಲ ವಸೂಲಾತಿಯನ್ನು ಕಟ್ಟುನಿಟ್ಟಿನ ಕ್ರಮಗಳನ್ನು ಮೂಲಕ ವಸೂಲು ಮಾಡಿ ಸಂಘದ ಶೇರುದಾರರಿಗೆ, ಲಾಭಾಂಶವನ್ನು ನೀಡುವುದರ ಜೊತೆಜೊತೆಗೆ ಮಾದಿಗ ಸಮಾಜದ ಅಭಿವೃದ್ದಿಗೆ ಅನುಕೂಲಕರವಾಗುವಂತಹ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನಗೊಳಿಸುವುದು ಇಂದಿನ ಕಾಲಘಟ್ಟದಲ್ಲಿ ಅತ್ಯಂತ ಅವಶ್ಯಕವಾಗಿದೆ ಎಂದು ವಿವರಿಸಿದರು.
ಬಾಬು ಜಗಜೀವನರಾಂ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷರುಗಳಾದ, ಶಿವಣ್ಣ, ಅಶೋಕ್, ಮಾಜಿ ನಿರ್ದೇಶಕರುಗಳಾದ ನರಸಿಂಹಯ್ಯ, ತರಬೇನಹಳ್ಳಿ ಚಿದಾನಂದ ಮೂರ್ತಿ, ಕಾತ್ರಿಕೇಹಾಲ್ ಗೋವಿಂದರಾಜು, ಹನುಮಯ್ಯ, ಗಂಗಾಧರಯ್ಯ, ಮಾಜಿ ಪುರಸಭಾ ಸದಸ್ಯರಾದ ಶಿವಕುಮಾರ್, ಕಂಟಲಗೆರೆ ನಂಜುಂಡಯ್ಯ, ಶ್ರೀನಿವಾಸ್, ಕಾರ್ಯದರ್ಶಿ ಮಂಜುಳಾ, ಕೆ ಇ ಬಿ ಶಿವಯ್ಯ, ನಿವೃತ್ತ ಪೊಲೀಸ್ ಅಧಿಕಾರಿ ಲಕ್ಷ್ಮಣ್, ಚಂದ್ರಯ್ಯ, ಪಂಕಜನಹಳ್ಳಿ ರಂಗಸ್ವಾಮಿ, ಬಲ್ಲೇನಹಳ್ಳಿ ಚನ್ನಕೇಶವ ಹಾಗೂ ಸಂಘದ ಪದಾಧಿಕಾರಿಗಳು ಹಾಗೂ ಷೇರುದಾರರು ಭಾಗವಹಿಸಿದರು.
ವರದಿ: ಚಿದಾನಂದಮೂರ್ತಿ ತರಬೇನ ಹಳ್ಳಿ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy