nammatumakuru

    Subscribe to Updates

    Get the latest creative news from FooBar about art, design and business.

    What's Hot

    ಬೇರೆಯವರಿಗೂ ಅವಕಾಶ ಸಿಗಲಿ: ಸಚಿವ ಸಂಪುಟ ಪುನಾರಚನೆಗೆ ದಿನೇಶ್ ಗುಂಡೂರಾವ್ ಬೆಂಬಲ

    April 28, 2026

    ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: ಕಾಮುಕನಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ, ₹1.25 ಲಕ್ಷ ದಂಡ

    April 28, 2026

    ಭ್ರಷ್ಟಾಚಾರದಿಂದ ದೂರ ಇರಿ, ಮಧ್ಯವರ್ತಿಗಳಿಗೆ ಕಚೇರಿಯಲ್ಲಿ ಅವಕಾಶ ನೀಡಬೇಡಿ: ಕೆಎಎಸ್ ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಕಿವಿಮಾತು

    April 28, 2026
    Facebook Twitter Instagram
    ಟ್ರೆಂಡಿಂಗ್
    • ಬೇರೆಯವರಿಗೂ ಅವಕಾಶ ಸಿಗಲಿ: ಸಚಿವ ಸಂಪುಟ ಪುನಾರಚನೆಗೆ ದಿನೇಶ್ ಗುಂಡೂರಾವ್ ಬೆಂಬಲ
    • ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: ಕಾಮುಕನಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ, ₹1.25 ಲಕ್ಷ ದಂಡ
    • ಭ್ರಷ್ಟಾಚಾರದಿಂದ ದೂರ ಇರಿ, ಮಧ್ಯವರ್ತಿಗಳಿಗೆ ಕಚೇರಿಯಲ್ಲಿ ಅವಕಾಶ ನೀಡಬೇಡಿ: ಕೆಎಎಸ್ ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಕಿವಿಮಾತು
    • ರಾಯಚೂರು: ಉದ್ಯೋಗ ಖಾತ್ರಿ ಕೆಲಸ ಮುಗಿಸಿ ವಾಪಸ್ಸಾಗುತ್ತಿದ್ದ ವ್ಯಕ್ತಿ ಸಾವು; ಬಿಸಿಲ ತಾಪಕ್ಕೆ ಬಲಿಯಾದ ಶಂಕೆ
    • SSLC ಪರೀಕ್ಷೆ: 45 ಸಾವಿರ ವಿದ್ಯಾರ್ಥಿಗಳು ಅನುತ್ತೀರ್ಣರಾಗಲು ಕಾರಣ ಬಿಚ್ಚಿಟ್ಟ ಸಚಿವ ಮಧು ಬಂಗಾರಪ್ಪ
    • ಕುರ್ಚಿ ಕಿತ್ತಾಟದ ನಡುವೆಯೇ ಒಂದೇ ಕಾರಿನಲ್ಲಿ ಸಿಎಂ–ಡಿಸಿಎಂ ಪ್ರಯಾಣ
    • ಮುಂದೆ ರಾಜ್ಯದಲ್ಲಿ ದಲಿತ ಸಿಎಂ ಆಗಬೇಕು: ಕೆ.ಎನ್. ರಾಜಣ್ಣ ಸ್ಫೋಟಕ ಹೇಳಿಕೆ
    • ಶಾಸಕ ಪ್ರಭು ಚವ್ಹಾಣ್ ದಲಿತರ ದಾರಿ ತಪ್ಪಿಸುತ್ತಿದ್ದಾರೆ: ಕಾಂಗ್ರೆಸ್ ವಕ್ತಾರ ಸುಧಾಕರ್ ಕೊಳ್ಳುರ್ ಗಂಭೀರ ಆರೋಪ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಜಾಯಿಕಾಯಿ ಮಹಿಮೆ: ಹಲವಾರು ರೋಗಗಳಿಗೆ ರಾಮಬಾಣ!
    ರಾಜ್ಯ ಸುದ್ದಿ June 10, 2024

    ಜಾಯಿಕಾಯಿ ಮಹಿಮೆ: ಹಲವಾರು ರೋಗಗಳಿಗೆ ರಾಮಬಾಣ!

    By adminJune 10, 2024No Comments2 Mins Read
    nutmug

    ಸುವಾಸನೆ ಭರಿತವಾದ ಜಾಕಾಯಿಯನ್ನು ಭಾರತ, ಬರ್ಮಾ, ಮಲೇಷಿಯಾ, ಇಂಡೋನೇಷಿಯಾ ಮುಂತಾದ ದೇಶಗಳಲ್ಲಿ ವಾಣಿಜ್ಯ ಬೆಳೆಯಾಗಿ ಬೆಳೆಯುತ್ತಾರೆ. ಜಾಕಾಯಿಗೆ ಸುಗಂಧ ದ್ರವ್ಯಗಳಲ್ಲಿ ಪ್ರತ್ಯೇಕ ಸ್ಥಾನವಿದೆ. ಆಹಾರಕ್ಕೆ ರುಚಿ, ಸುವಾಸನೆ ಹೆಚ್ಚಿಸುತ್ತೆ. ವಿಶೇಷವಾದ ಪರಿಮಳ ಹಾಗೂ ಔಷಧೀಯ ಗುಣಗಳಿಂದ ಆಯುರ್ವೇದದಲ್ಲಿ ಜಾಕಾಯಿಗೆ ಮಹತ್ವದ ಸ್ಥಾನ ನೀಡಲಾಗಿದೆ. ಪ್ರಪಂಚದಲ್ಲಿ ಎಲ್ಲಾ ಕಡೆ ಬಳಸುವ ಮಸಾಲೆ ಪದಾರ್ಥ ಇದಾಗಿದೆ.

    ಜಾಯಿಕಾಯಿಯನ್ನು ಅಡಿಗೆಗೆ ಮಾತ್ರವಲ್ಲದೆ, ಆಯುರ್ವೇದ ಔಷಧೀಯವಾಗಿಯೂ, ಆರೋಗ್ಯ ರಕ್ಷಣೆಯಲ್ಲೂ ಬಳಸುತ್ತಾರೆ. ಈ ವೃಕ್ಷ ಸುಮಾರು 25 ರಿಂದ 60 ಅಡಿ ಎತ್ತರ ಬೆಳೆಯುತ್ತದೆ. ಇನ್ನು ಜಾಪತ್ರೆ ಅಥವಾ ಜಾಯಿಕಾಯಿ ಸಾಮಾನ್ಯವಾಗಿ ಆಗ್ನೇಯ ಏಶಿಯಾ ಖಂಡದಲ್ಲಿ ಬೆಳೆಯುವ ಸದಾ ಹಸಿರಾಗಿರುವ ಮರಗಳಲ್ಲೊಂದು. ಇದನ್ನು ಸಾಂಬಾರು ಪದಾರ್ಥವಾಗಿ ಬಳಸುತ್ತಾರೆ. ಇದರ ಎಣ್ಣೆ ಸುಗಂಧ ದ್ರವ್ಯಗಳನ್ನು ತಯಾರಿಸುವಲ್ಲಿ, ಔಷಧಗಳಲ್ಲಿ ಬಳಸುತ್ತಾರೆ.


    Provided by
    Provided by

    ಜಾಯಿಕಾಯಿ ಮಾನಸಿಕ ಒತ್ತಡವನ್ನು ತಗ್ಗಿಸುತ್ತದೆ, ಕಾಮ ವಾಂಛೆಯನ್ನು ಹೆಚ್ಚಿಸುತ್ತದೆ, ವೀರ್ಯ ಕಣಗಳ ಉತ್ಪತ್ತಿಯನ್ನು ವೃದ್ಧಿ ಮಾಡುತ್ತೆ. ಜಾಕಾಯಿ ನೀರಿನಲ್ಲಿ ಬೇಯಿಸಿ, ನೆರಳಲ್ಲಿ ಒಣಗಿಸಿ, ಚೂರ್ಣ ಮಾಡಿಟ್ಟುಕೊಂಡು, ಬೆಳಗ್ಗೆ ಮತ್ತು ಸಂಜೆ 5 ಗ್ರಾಂ ನಂತೆ 1 ಲೋಟ ಉಗುರು ಬೆಚ್ಚಗಿನ ಹಸುವಿನ ಹಾಲಿನಲ್ಲಿ ಕಲಸಿ ಕುಡಿದರೆ ಪುರುಷರಲ್ಲಿ ನಪುಂಸಕತ್ವ ದೂರವಾಗಿ ವೀರ್ಯಾಣು ವೃದ್ಧಿಸುತ್ತೆ. ದೇಹದಲ್ಲಿ ನರಗಳ ಬಲಹೀನತೆಯನ್ನು ದೂರ ಮಾಡುತ್ತೆ.

    ಬೇಕಾದ್ರೆ 1 ಚಮಚ ಶುದ್ಧ ಜೇನುತುಪ್ಪ ಅಥವಾ ಕೆಂಪು ಕಲ್ಲು ಸಕ್ಕರೆ ಬೆರಸಿಕೊಳ್ಳಿ). ತವ್ವ ಮೇಲೆ 1 ಚಮಚ ನಾಟಿ ಹಸುವಿನ ತುಪ್ಪ ಹಾಕಿ, ಐದಾರು ಜಾಕಾಯಿ ಹಾಕಿ, ಹುರಿದುಕೊಂಡು, ಕಲಾಬತ್ತಿನಲ್ಲಿ ಹಾಕಿ ನುಣ್ಣಗೆ ಕುಟ್ಟಿ ಪುಡಿ ಮಾಡಿ, ಒಂದು ಗಾಜಿನ ಸೀಸೆಯಲ್ಲಿ ಹಾಕಿ ಭದ್ರ ಪಡಿಸಿ, 200 ml ನಾಟಿ ಹಸುವಿನ ಹಾಲಿಗೆ 1 ಚಮಚ ಚೂರ್ಣ ಹಾಕಿ, ಮಂದದ ಉರಿಯಲ್ಲಿ ಚೆನ್ನಾಗಿ ಕಾಯಿಸಿ, 100ml ಆದಾಗ ಕೆಳಗಿಳಿಸಿ, ಅದಕ್ಕೆ ಬೆಲ್ಲ 1 ಚಮಚ ಕಲಸಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯುತ್ತಾ ಬಂದಲ್ಲಿ, ವೀರ್ಯಾಣು ವೃದ್ಧಿಯಾಗಿ, ಕಾಮವಾಂಛೆ ಹೆಚ್ಚಿ, ನಪುಂಸಕತ್ವ ದೂರವಾಗುತ್ತೆ. ತಾಂಬೂಲದಲ್ಲಿ ಜಾಯಿಕಾಯಿ ಸೇರಿಸಿ ಜಗಿದರೆ ಬಾಯಿ ದುರ್ವಾಸನೆ ದೂರವಾಗುತ್ತೆ. ಹಲ್ಲುಗಳ ಮೇಲಿನ ಕಲೆಗಳು ಮಾಯವಾಗುತ್ತೆ. ಅಲ್ಲದೇ ಕ್ರಿಮಿಗಳು ಸಾಯುತ್ತವೆ. ಜಾಕಾಯಿ ಚೂರ್ಣವನ್ನು ಹಸುವಿನ ಹಾಲಿನಲ್ಲಿ ಕಲಸಿ ಸೇವಿಸುತ್ತಿದ್ದರೆ ಹೃದಯದಲ್ಲಿನ ನೋವು ಶಮನವಾಗುತ್ತೆ. ಜಾಯಿಕಾಯಿ ಚೂರ್ಣವನ್ನು ಒಂದು ಲೋಟ ಹಾಲಿನಲ್ಲಿ 1 ಚಮಚ ಕಲಸಿ ದಿನವೂ ಕುಡಿಯುತ್ತಿದ್ದರೆ, ದೇಹದ ಚರ್ಮವು ಕಾಂತಿಯಿಂದ ಹೊಳೆಯುತ್ತೆ. ದೇಹದ ಚರ್ಮ ಸುಕ್ಕುಗಟ್ಟುವುದಿಲ್ಲ.

    ಅಧಿಕ ದಾಹವನ್ನು ತಣಿಸುತ್ತೆ. ಮನದಲ್ಲಿನ ಆಂದೋಲನ, ಉದ್ರೇಕವನ್ನು ತಗ್ಗಿಸಿ ಮನಸ್ಸು ಪ್ರಶಾಂತವಾಗಿರಲು ಸಹಕರಿಸುತ್ತೆ. ಚಿಟಿಕೆ ಜಾಯಿಕಾಯಿ ಚೂರ್ಣವನ್ನು ಹಸುವಿನ ಹಾಲಿನಲ್ಲಿ ಕಲಸಿ ಸೇವಿಸಿದರೆ ಮಾನಸಿಕ ಒತ್ತಡ ಕೆಡಿಮೆಯಾಗಿ, ಮನಸ್ಸು ಪ್ರಶಾಂತವಾಗುತ್ತದೆ. ಕೆಮ್ಮು, ಕಫ ದೂರವಾಗಿ, ಮೆದಳು ಚುರುಕಾಗಿ ಕೆಲಸ ಮಾಡಲು ಅನವುಮಾಡಿಕೊಡುತ್ತೆ. ಮೂತ್ರ ಪಿಂಡಗಳಲ್ಲಿನ ಕಲ್ಲು ಕರಗಿಸುವುದಲ್ಲದೆ, ಮೂತ್ರ ಪಿಂಡಗಳು ಸುಗುಮವಾಗಿ ಕಾರ್ಯ ನಿರ್ವಹಿಸಲು ಸಹಕಾರಿಯಾಗುತ್ತೆ. ನಿದ್ರಾಹೀನತೆಯಿಂದ ಬಳಲುವವರು ಮಲಗುವ 15 ನಿಮಿಷ ಮುನ್ನ ಜಾಯಿಕಾಯಿ ಚೂರ್ಣ 1/2 ಚಮಚ, ಜೇನುತುಪ್ಪದಲ್ಲಿ ರಂಗಳಿಸಿ ನೆಕ್ಕಿದರೆ ನಿದ್ರೆ ಚೆನ್ನಾಗಿ ಬರುತ್ತೆ.

    ಕಿವಿ ನೋವಿದ್ದಾಗ ಜಾಯಿಕಾಯಿ ಗಂಧ ತೇಯ್ದು 2-3 ತೊಟ್ಟು ಕಿವಿಯಲ್ಲಿ ಹಾಕಿದ್ರೇ ನೋವು ಶಮನವಾಗುತ್ತೆ. ಮಕ್ಕಳಿಗೆ ಅತಿಸಾರ ಬೇಧಿ ಇದ್ದಾಗ ತಾಯಿ ಹಾಲಿನಲ್ಲಿ ಗಂಧ ತೇಯ್ದು ದಿನಕ್ಕೆ ಮೂರು ಬಾರಿ ನೆಕ್ಕಿಸುತ್ತಿದ್ದರೆ ಶೀಘ್ರ ಉಪಶಮನವಾಗುತ್ತೆ. ಮುಖದಮೇಲೆ ಬಂಗು ಬಂದಾಗ ಹಸುವಿನ ಹಾಲಿನಲ್ಲಿ ಜಾಕಾಯಿ ಗಂಧ ತೇಯ್ದು, ದಿನಕ್ಕೆ ಮೂರ್ನಾಲ್ಕು ಬಾರಿ ಲೇಪಿಸುತ್ತಾ, 2-3 ತಿಂಗಳು ಪಾಲಿಸಿದರೆ ಸಮಸ್ಯೆ ನಿವಾರಣೆಯಾಗುತ್ತೆ.

    ಜಾಯಿಕಾಯಿ 1/2 ಚಮಚ ಚೂರ್ಣವನ್ನು ಬೆಳಗ್ಗೆ ಮತ್ತು ಸಂಜೆ ಬಿಸಿನೀರಿನಲ್ಲಿ ಕಲಸಿ ಕುಡಿಯುತ್ತಿದ್ದರೆ ಹೊಟ್ಟೆನೋವು ನಿವಾರಣೆಯಾಗುತ್ತೆ. ದೇಹದ ಚರ್ಮ ಒರಟಾಗಿ ಇದ್ದವರು, ಜಾಕಾಯಿ ಎಣ್ಣೆಯಲ್ಲಿ ಮಸಾಜ್ ಮಾಡಿಕೊಂಡು 1 ಗಂಟೆಯ ನಂತರ ಸ್ನಾನ ಮಾಡಿದರೆ ಚರ್ಮವು ಮೃದುವಾಗಿ ಕಾಂತಿಯಿಂದ ಹೊಳೆಯುತ್ತೆ. ಗರ್ಭಿಣಿಯರು ಇದನ್ನು ಉಪಯೋಗಿಸಬಾರದು. ಆದರೆ, ಆಯುರ್ವೇದ ಪಂಡಿತರ ಸಲಹೆ ಪಡೆದು ಉಪಯೋಗಿಸಿ.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

     

     

    admin
    • Website

    Related Posts

    ಬೇರೆಯವರಿಗೂ ಅವಕಾಶ ಸಿಗಲಿ: ಸಚಿವ ಸಂಪುಟ ಪುನಾರಚನೆಗೆ ದಿನೇಶ್ ಗುಂಡೂರಾವ್ ಬೆಂಬಲ

    April 28, 2026

    ಭ್ರಷ್ಟಾಚಾರದಿಂದ ದೂರ ಇರಿ, ಮಧ್ಯವರ್ತಿಗಳಿಗೆ ಕಚೇರಿಯಲ್ಲಿ ಅವಕಾಶ ನೀಡಬೇಡಿ: ಕೆಎಎಸ್ ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಕಿವಿಮಾತು

    April 28, 2026

    ರಾಯಚೂರು: ಉದ್ಯೋಗ ಖಾತ್ರಿ ಕೆಲಸ ಮುಗಿಸಿ ವಾಪಸ್ಸಾಗುತ್ತಿದ್ದ ವ್ಯಕ್ತಿ ಸಾವು; ಬಿಸಿಲ ತಾಪಕ್ಕೆ ಬಲಿಯಾದ ಶಂಕೆ

    April 28, 2026

    Comments are closed.

    Our Picks

    ಸಂವಿಧಾನ ಮುಗಿಸುವುದೇ ಆರ್‌ ಎಸ್‌ ಎಸ್–ಬಿಜೆಪಿ ಉದ್ದೇಶ: ರಾಹುಲ್ ಗಾಂಧಿ ತೀವ್ರ ವಾಗ್ದಾಳಿ

    April 12, 2026

    ಗಾನ ಕೋಗಿಲೆ ಆಶಾ ಭೋಂಸ್ಲೆ ನಿಧನ: ಸಪ್ತ ದಶಕಗಳ ಗಾಯನ ಪಯಣ ಅಂತ್ಯ

    April 12, 2026

    ಎಲ್‌ ಪಿಜಿ ಸಂಕಷ್ಟ: ವಿದೇಶಾಂಗ ನೀತಿ ಬದಲಿಸಿ ಬೇರೆ ದೇಶಗಳಿಂದ ಅನಿಲ ಆಮದು ಮಾಡಿಕೊಳ್ಳಿ: ಕೇಂದ್ರಕ್ಕೆ ಮಲ್ಲಿಕಾರ್ಜುನ ಖರ್ಗೆ ಆಗ್ರಹ

    April 5, 2026

    ವರ್ಷಾಂತ್ಯಕ್ಕೆ ಮೋದಿ ಆಡಳಿತ ಅಂತ್ಯ: ಅರವಿಂದ ಕೇಜ್ರಿವಾಲ್ ಭವಿಷ್ಯ

    March 24, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ರಾಜ್ಯ ಸುದ್ದಿ

    ಬೇರೆಯವರಿಗೂ ಅವಕಾಶ ಸಿಗಲಿ: ಸಚಿವ ಸಂಪುಟ ಪುನಾರಚನೆಗೆ ದಿನೇಶ್ ಗುಂಡೂರಾವ್ ಬೆಂಬಲ

    April 28, 2026

    ಹುಬ್ಬಳ್ಳಿ: ಕರ್ನಾಟಕದಲ್ಲಿ ಸಚಿವ ಸಂಪುಟ ಪುನಾರಚನೆಯ ಚರ್ಚೆಗಳು ಮತ್ತೆ ಮುನ್ನೆಲೆಗೆ ಬಂದಿದ್ದು, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಇದಕ್ಕೆ…

    ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: ಕಾಮುಕನಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ, ₹1.25 ಲಕ್ಷ ದಂಡ

    April 28, 2026

    ಭ್ರಷ್ಟಾಚಾರದಿಂದ ದೂರ ಇರಿ, ಮಧ್ಯವರ್ತಿಗಳಿಗೆ ಕಚೇರಿಯಲ್ಲಿ ಅವಕಾಶ ನೀಡಬೇಡಿ: ಕೆಎಎಸ್ ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಕಿವಿಮಾತು

    April 28, 2026

    ರಾಯಚೂರು: ಉದ್ಯೋಗ ಖಾತ್ರಿ ಕೆಲಸ ಮುಗಿಸಿ ವಾಪಸ್ಸಾಗುತ್ತಿದ್ದ ವ್ಯಕ್ತಿ ಸಾವು; ಬಿಸಿಲ ತಾಪಕ್ಕೆ ಬಲಿಯಾದ ಶಂಕೆ

    April 28, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.