ಬೆಂಗಳೂರು: ಎಂಇಎಸ್ ಸಂಘಟನೆಯನ್ನು ಬ್ಯಾನ್ ಮಾಡಬೇಕು ಎಂದು ಕನ್ನಡ ಪರ ಸಂಘಟನೆಗಳು ಪಟ್ಟು ಹಿಡಿದು ನೀಡಿರುವ ಗಡುವು ಮುಗಿಯಲು ಇನ್ನು ಎರಡು ದಿನಗಳು ಮಾತ್ರವೇ ಬಾಕಿ ಇದೆ. ಡಿ.29ರೊಳಗೆ ಸರ್ಕಾರ ಯಾವುದೇ ನಿರ್ಧಾರ ಕೈಗೊಳ್ಳದಿದ್ದರೆ ಕರ್ನಾಟಕ ಬಂದ್ ನಡೆಯುತ್ತದೆ. ಬಂದ್ ನಿಂದ ಹಿಂದೆ ಸರಿಯುವ ಮಾತೇ ಇಲ್ಲ ಎಂದು ವಾಟಾಳ್ ನಾಗರಾಜ್ ಖಚಿತ ಪಡಿಸಿದ್ದಾರೆ.
ವಾಟಾಳ್ ನೇತೃತ್ವದಲ್ಲಿ ಕನ್ನಡಪರ ಸಂಘಟನೆಗಳು ರಾಜ್ಯ ಬಂದ್ ಮಾಡಲಿದ್ದು, ಸರ್ಕಾರ ಮಾತ್ರ ವಾಟಾಳ್ ನಾಗರಾಜ್ ರನ್ನು ಇನ್ನೂ ಕೂಡ ಮಾತುಕತೆಗೆ ಆಹ್ವಾನಿಸಿಲ್ಲ. ಸದ್ಯ ವಾಟಾಳ್ ತಮ್ಮ ಬಂದ್ ಯಶಸ್ವಿಯಾಗಲೆಂದು ಪ್ರತಿ ದಿನ ಹೋರಾಟಕ್ಕೆ ಇಳಿದಿದ್ದಾರೆ. ಮೊನ್ನೆ ಫಿಲ್ಮ್ ಚೇಂಬರ್ ವಿರುದ್ಧ ಹೋರಾಟ ಮಾಡಿದರು. ನಿನ್ನೆ ಮಾಲ್ ಗಳಿಗೆ ತೆರಳಿ ಬಂದ್ ಗೆ ಬೆಂಬಲ ಸೂಚಿಸುವಂತೆ ಮನವಿ ಮಾಡಿದ್ದಾರೆ.
ಬೆಳಗ್ಗೆ 6 ರಿಂದ ಸಂಜೆ 6ರ ತನಕ ಬಂದ್ ಮಾಡುವಂತೆ ಆಗ್ರಹಿಸಿದ್ದಾರೆ. ಸದ್ಯ ಈಗ ಬಂದ್ ಗೆ ಬೇಕಾದ ಸಿದ್ಧತೆಗಳಲ್ಲಿ ಸಂಘಟನೆಗಳು ತೊಡಗಿಕೊಂಡಿವೆ. ನೈತಿಕ ಬೆಂಬಲ ಅನ್ನೋರಿಂದ ಪೂರ್ಣ ಬೆಂಬಲ ಸ್ವೀಕರಿಸೋಕೆ ನಾನಾ ಕಸರತ್ತು ಮಾಡಲಾಗುತ್ತಿದೆ. ಫಿಲ್ಮ್ ಚೇಂಬರ್ ಗೆ ಇಂದು ಕೆಲ ಕನ್ನಡಪರ ಸಂಘಟನೆಗಳು ಭೇಟಿ ಮಾಡಿ ಬಂದ್ ಗೆ ಬೆಂಬಲ ಸೂಚಿಸುವಂತೆ ಮನವಿ ಮಾಡಲಿದ್ದಾರೆ ಎನ್ನಲಾಗಿದೆ.
ವಾಟಾಳ್ ನಾಗರಾಜ್, ಸಾರಾ ಗೋವಿಂದು, ಶಿವರಾಮೇಗೌಡ, ಪ್ರವೀಣ್ ಗೌಡ ಸೇರಿದಂತೆ ಹಲವು ಕನ್ನಡಪರ ಸಂಘಟನೆಗಳ ಮುಖಂಡರು ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy