ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್ (Actor Darshan) ಹಾಗೂ ಅವರ ಗ್ಯಾಂಗ್ ಅನ್ನು ಪೊಲೀಸರು ಬಂಧಿಸಿದ್ದಾರೆ. ದರ್ಶನ್ ಅವರ ಈ ನಡೆಯಿಂದ ಕಂಗಾಲಾಗಿರುವ ಪತ್ನಿ ವಿಜಯಲಕ್ಷ್ಮೀ, ಇನ್ಸ್ಟಾಗ್ರಾಂನಲ್ಲಿ ದರ್ಶನ್ರನ್ನು ಅನ್ಫಾಲೋ ಮಾಡಿ, ಫೋಟೋಗಳನ್ನು ಡಿಲೀಟ್ ಮಾಡಿದ್ದಾರೆ. ದರ್ಶನ್ ಗೆ ವಿರುದ್ಧ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ. ಇದರ ನಡುವೆ ದರ್ಶನ್ ಅವರ ಕುಟುಂಬ ಸಹ ಈ ಪ್ರಕರಣದಿಂದ ಅಂತರ ಕಾಯ್ದುಕೊಂಡಿದೆ.
ಮೀನಾ ತೂಗುದೀಪ್ ತಮ್ಮ ಮತ್ತೋರ್ವ ಪುತ್ರ ದಿನಕರ್ ಜೊತೆ ವಾಸವಿದ್ದಾರೆ. ಸದ್ಯ ತಾಯಿ ಜತೆಗೂ ದರ್ಶನ್ ಜಗಳ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಹುಟ್ಟಿ ಬೆಳೆದ ಮೈಸೂರಿನ ಮನೆಗೆ ಇತ್ತೀಚೆಗೆ ಬಂದೇ ಇಲ್ಲ ಎಂದು ಹೇಳಲಾಗಿದೆ.
ನಟ ದರ್ಶನ್ ಬಂಧನದ ಬೆನ್ನಲ್ಲೇ ದರ್ಶನ್ ತಾಯಿಗೆ ಒಂದರ ಮೇಲೊಂದ ಆಘಾತಗಳು ದುರಾಗುತ್ತಿವೆ. ದರ್ಶನ್ ಕುಟುಂಬ ಈ ವಿಷಯವಾಗಿ ಅಂತರ ಕಾಯ್ದುಕೊಂಡಿದ್ದು, ಮಾಧ್ಯಮ ಪ್ರತಿಕ್ರಿಯೆ ನೀಡಲು ತಾಯಿ ಮೀನಾ ತೂಗುದೀಪ್ ನಿರಾಕರಿಸಿದ್ದಾರೆ. ಮೈಸೂರಿನ ಸಿದ್ದಾರ್ಥನಗರದಲ್ಲಿ ವಾಸ ಇರುವ ಮೀನಾ ತೂಗುದೀಪ್ ಮಗ ದರ್ಶನ್ ಬಗ್ಗೆ ಮಾತನಾಡಲು ಒಪ್ಪಿಲ್ಲ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


