ಬೆಂಗಳೂರು: ಮೂರು ವರ್ಷದ ಮಗುವಿನ ಸಿಗರೇಟ್‌ನಿಂದ ಸುಟ್ಟು ಮಲತಂದೆಯೊಬ್ಬ ಮೃಗೀಯ ವರ್ತನೆ ತೋರಿರುವ ಘಟನೆ ಬೆಂಗಳೂರಿನಲ್ಲಿ ಈ ಘಟನೆ ನಡೆದಿದೆ.
ಜರೀನಾ ತಾಜ್ ಎಂಬ ಮಹಿಳೆ ಹಾಗೂ ಆಕೆಯ ಮೂರು ವರ್ಷದ ಮಗು ತೀವ್ರ ಹಲ್ಲೆಗೊಳಗಾದವರು. ಜರೀನಾ ತಾಜ್ ಮೂರನೇ ಪತಿ ಅಜ್ಮಂತ್ ಎಂಬಾತ, 3 ವರ್ಷದ ಮಗುವಿನ ಮುಖ, ಕತ್ತು ಹಾಗೂ ತಲೆ ಭಾಗದಲ್ಲಿ ಸಿಗರೇಟ್ ನಿಂದ ಸುಟ್ಟು ಗಾಯಗೊಳಿಸಿದ್ದಾನೆ.
ಕಾಲಿನ ಮೇಲೆ ದಾಳಿ ಮಾಡಿರುವುದರಿಂದ ಕಾಲು ಕತ್ತರಿಸಿದಂತಾಗಿದೆ. ತೀವ್ರ ಗಾಯಗೊಂಡಿರುವ ಮಗುವಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಜರೀನಾ ತಾಜ್ ಮೂರು ಮದುವೆಯಾಗಿದ್ದು, ಮೊದಲ ಗಂಡನಿಂದ ಎರಡು ಹೆಣ್ಣು ಮಕ್ಕಳು ಆಗಿದ್ದವು. ಎರಡನೇ ಪತಿಯಿಂದ ಒಂದು ಹೆಣ್ಣು ಮಗು ಆಗಿತ್ತು. ಆ ಹೆಣ್ಣು ಮಗುವಿನ ಮೇಲೆ ಇದೀಗ ಕ್ರೌರ್ಯ ನಡೆದಿದೆ. ಮೊದಲ ಇಬ್ಬರು ಗಂಡಂದಿರನ್ನು ತೊರೆದಿದ್ದ ಜರೀನಾ ತಾಜ್, ಅಜ್ಮಂತ್ ಜೊತೆ ಮೂರನೇ ಮದುವೆಯಾಗಿದ್ದಳು. ಈಗ ಮೂರನೇ ಗಂಡ ಚಿತ್ರಹಿಂಸೆ ನೀಡುತ್ತಿದ್ದಾನೆ ಎಂದು ಜರೀನಾ ತಾಜ್ ಆರೋಪಿಸುತ್ತಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


