ಪರಪ್ಪನ ಅಗ್ರಹಾರ ಜೈಲು ಪಾಲಾಗಿರುವ ನಟ ದರ್ಶನ್ ಊಟ ಸೇರದೆ ನಿದ್ದೆ ಬಾರದೇ ಒದ್ದಾಡುತ್ತಿದ್ದಾರೆ.. ಕ್ವಾರಂಟೀನ್ ಬ್ಯಾರಕ್‌ನಲ್ಲಿ ದರ್ಶನ್‌ರನ್ನು ಇರಿಸಲಾಗಿದ್ದು, ಕಳೆದ ರಾತ್ರಿ ಅವರಿಗೆ ಸರಿಯಾಗಿ ನಿದ್ದೆ ಬಂದಿಲ್ಲ. ಜೊತೆ ಜೈಲೂಟವೂ ಅವರಿಗೆ ಸೇರುತ್ತಿಲ್ಲ ಎನ್ನಲಾಗಿದೆ.ಸರಿಯಾಗಿ ಜೈಲೂಟ ಸೇವಿಸದಿದ್ದರಿಂದ ನಿದ್ದೆ ಕೂಡಾ ಬಾರದೆ ಅವರು ಒದ್ದಾಡಿದ್ದಾರೆ ಎಂದು ತಿಳಿದುಬಂದಿದೆ..
ಇನ್ನು ದರ್ಶನ್ ಪತ್ನಿ ದರ್ಶನ್ ಅವರಿಗೆ ಬೇಲ್ ಕೊಡಿಸಲು ಕಸರತ್ತು ಮಾಡುತ್ತಿದ್ದಾರೆ.. ಅದಕ್ಕಾಗಿ ಖ್ಯಾತ ವಕೀಲ ಸಿ.ವಿ.ನಾಗೇಶ್ ಅವರನ್ನು ನೇಮಿಸಿದ್ದಾರೆ.ನಾಗೇಶ್ ಅವರು ದರ್ಶನ್ ಅವರ ಪರವಾಗಿ ಬೇಲ್ ಅಪ್ಲಿಕೇಷನ್‌ಗೆ ಸಿದ್ಧತೆ ನಡೆಸಿದ್ದಾರೆ.ಶೀಘ್ರದಲ್ಲೇ ದರ್ಶನ್‌ಗೆ ಜಾಮೀನು ಕೋರಿ ಅರ್ಜಿ ಸಲ್ಲಿಸಲಾಗುತ್ತದೆ.ಆದ್ರೆ ಕೋರ್ಟ್ ಅವರಿಗೆ ಜಾಮೀನು ಕೊಡುತ್ತಾ ಇಲ್ಲವಾ ಅನ್ನೋದೇ ಕುತೂಹಲ.ದರ್ಶನ್‌ಗೆ ಜಾಮೀನು ಸಿಕ್ಕರೆ ಅವರ ಮೇಲೆ ಹೂಡಿಕೆ ಮಾಡಿರುವ ಚಿತ್ರ ನಿರ್ಮಾಪಕ ನಿಟ್ಟುಸಿರು ಬಿಡಲಿದ್ದಾರೆ.ಆದ್ರೆ ಸಿ.ವಿ.ನಾಗೇಶ್ ಯಾವ ರೀತಿ ವಾದ ಮಾಡುತ್ತಾರೆ.? ಕೋರ್ಟ್ ಅದಕ್ಕೆ ಮನ್ನಣೆ ಕೊಡುತ್ತದಾ ನೋಡಬೇಕು..
ಇನ್ನೂ ಎಲ್ಲಾ 17 ಆರೋಪಿಗಳನ್ನೂ ಈಗ ಪರಪ್ಪನ ಅಗ್ರಹಾರ ಜೈಲಿನಲ್ಲಿಡಲಾಗಿದೆ.. ಆದ್ರೆ ಒಂದೇ ಕಡೆ ಇದ್ದರೆ ಒಳಸಂಚು ಮಾಡಬಹುದು.ಪ್ರಕರಣದ ದಿಕ್ಕು ತಪ್ಪಿಸಬಹುದು. ಹೀಗಾಗಿ ಆರೋಪಿಗಳನ್ನು ಬೇರೆ ಬೇರೆ ಜೈಲುಗಳಿಗೆ ಶಿಫ್ಟ್ ಮಾಡಬೇಕೆಂದು ಪೊಲೀಸರು ಮನವಿ ಮಾಡಿಕೊಂಡಿದ್ದಾರೆ. ಇದರ ವಿಚಾರಣೆ ಇಂದು ನಡೆಯಲಿದೆ. ಕೋರ್ಟ್ ಒಪ್ಪಿದರೆ ದರ್ಶನ್ ಸೇರಿ ಎಲ್ಲಾ ಆರೋಪಿಗಳನ್ನು ಬೇರೆ ಬೇರೆ ಜೈಲುಗಳಿಗೆ ಶಿಫ್ಟ್ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA


