ಉತ್ತರ ಕನ್ನಡ: ಯುವತಿಯೊಬ್ಬಳ ಜೊತೆ ಪ್ರೀತಿಸುವ ನಾಟಕವಾಡಿ, ಮದುವೆಯಾಗುತ್ತೇನೆಂದು ನಂಬಿಸಿದ್ದ ಪೊಲೀಸ್ ಕಾನ್ಸ್ ಟೇಬಲ್ ಒಬ್ಬ ಆಕೆಯಿಂದ ಸುಮಾರು 18 ಲಕ್ಷ ರೂಪಾಯಿ ಪೀಕಿ ವಂಚನೆ ಮಾಡಿದ್ದಾನೆ ಎಂದು ಆರೋಪ ಮಾಡಲಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನಲ್ಲಿ ಈ ಘಟನೆ ನಡೆದಿದ್ದು, ಯುವತಿ ಪೊಲೀಸರಿಗೆ ದೂರು ನೀಡಿದ್ದಾಳೆ.
ಹಾಸನ ಜಿಲ್ಲೆ ಚನ್ನರಾಯಪಟ್ಟಣದ ಸುಚಿತ್ರ ಎಂಬ ಯುವತಿ ದೂರು ನೀಡಿದವರಾಗಿದ್ದಾರೆ. ಮುಂಡಗೋಡು ಪೊಲೀಸ್ ಠಾಣೆಯ ಕಾನ್ಸ್’ಟೇಬಲ್ ಗಿರೀಶ್ ಲವ್ ಮಾಡುತ್ತೇನೆ. ಮದುವೆಯಾಗುತ್ತೇನೆ ಎಂದು ನಂಬಿಸಿದ್ದು, ನಂತರ ತನಗೆ ಕಷ್ಟ ಇದೆ ಎಂದು ಹೇಳಿಕೊಂಡು ಯುವತಿಯಿಂದ 18 ಲಕ್ಷ ರೂಪಾಯಿ ಪಡೆದಿದ್ದ. ಆ ಬಳಿಕ ಮದುವೆಯೂ ಆಗದೆ, ಹಣವೂ ವಾಪಸ್ ಕೊಡದೆ ವಂಚಿಸಿದ್ದಾನೆ ಎಂದು ಆರೋಪಿಸಲಾಗಿದೆ.
ಸುಚಿತ್ರ ಮೊದಲಿಗೆ ಎಸ್ ಪಿ ವಿಷ್ಣವರ್ದನ್ ಅವರಿಗೆ ದೂರು ಕೊಟ್ಟಿದ್ದರು. ಈ ವೇಳೆ ಆರೋಪಿಯನ್ನು ಕರೆಸಿ ಮಾತನಾಡಿದ್ದಾರೆ. ಹಣ ತೆಗೆದುಕೊಂಡಿರುವ ನಿಜ. ವಾಪಸ್ ಕೊಡುತ್ತೇನೆ ಎಂದು ಹೇಳಿದ್ದಳಂತೆ. ನಂತರ ಮದುವೆಯಾಗದೇ ವಂಚಿಸಿದ್ದಾನೆಂದು ಸುಚಿತ್ರ ಕಳೆದ ರಾತ್ರಿ ಮುಂಡಗೋಡು ಪೊಲೀಸ್ ಠಾಣೆಯಲ್ಲಿ 420ರ ಅಡಿ ಕೇಸ್ ದಾಖಲಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA


