ಚಿತ್ರದುರ್ಗದ ರೇಣುಕಾಸ್ವಾಮಿಗೆ ಸಂಬಂಧಪಟ್ಟಂತೆ ಎ1 ಆರೋಪಿ ಪವಿತ್ರಾ ಗೌಡಗೆ ಮೇಕಪ್ ಮಾಡಿಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದ ಎಸ್.ಐ. ನೇತ್ರಾವತಿ ಎಂಬುವವರಿಗೆ ಈಗ ನೋಟಿಸ್ ನೀಡಲಾಗಿರುವ ಕುರಿತು ವರದಿಯಾಗಿದೆ.
ಆರೋಪಿಯಾಗಿರುವ ಪವಿತ್ರಾ ಗೌಡಗೆ ಮೇಕಪ್ ಕಿಟ್ ಇಟ್ಟುಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದರು ಎನ್ನುವ ಆರೋಪ ಪೊಲೀಸ್ ಅಧಿಕಾರಿ ನೇತ್ರಾವತಿ ಅವರ ಮೇಲೆ ಇದ್ದು, ಇದೀಗ ಕರ್ತವ್ಯಲೋಪ ಎಸಗಿರುವ ಹಿನ್ನೆಲೆಯಲ್ಲಿ ಈ ನೋಟಿಸ್ ನೀಡಲಾಗಿರುವ ಕುರಿತು ವರದಿಯಾಗಿದೆ.
ಪೊಲೀಸ್ ಕಸ್ಟಡಿಯಲ್ಲಿರುವ ಸಮಯದಲ್ಲಿ ಪವಿತ್ರಾ ಗೌಡ ಮೇಕಪ್ ಮಾಡಿಕೊಂಡಿದ್ದು, ಜೂನ್ 15 ರಂದು ರಾಜರಾಜೇಶ್ವರಿ ಮನೆಗೆ ಸ್ಥಳ ಮಹಜರಿಗೆ ಹೋಗುವಾಗ ಹಿಂತಿರುಗಿ ಬರುವಾಗ ಮೇಕಪ್ ಮಾಡಿಕೊಂಡು ತುಟಿಗೆ ಲಿಪ್‌ಸ್ಟಿಕ್ ಹಾಕಿ ಹೊರ ಬಂದಿದ್ದರು ಎನ್ನಲಾಗಿದೆ. ಇದು ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿತ್ತು. ಹೋಗುವಾಗ ಮಾಮೂಲಿಯಾಗಿ ಹೋಗಿದ್ದು, ಮಹಜರು ಮುಗಿಸಿ ವಾಪಸ್ ಬರುವ ಸಮಯದಲ್ಲಿ ಮೇಕಪ್ ಮಾಡಿಕೊಂಡು ಮುಖ ತಿರುವಿಕೊಂಡು ಬಂದಿದ್ದ ವೀಡಿಯೋ ವೈರಲ್ ಆಗಿತ್ತು.
ವಿಜಯನಗರ ಠಾಣೆ ಎಸ್ಐ ನೇತ್ರಾವತಿ ಅವರಿಗೆ ಕರ್ತವ್ಯಲೋಪದಡಿ ರೂಲ್ 7 ರ ಅಡಿ ಡಿಸಿಪಿ ನೋಟಿಸ್ ನೀಡಿರುವ ಕುರಿತು ವರದಿಯಾಗಿತ್ತು.
ಪವಿತ್ರಾ ಗೌಡ ಸಾಂತ್ವಾನ ಕೇಂದ್ರಕ್ಕೆ ಕರೆದುಕೊಂಡು ಹೋಗವ ಸಮಯದಲ್ಲಿ ಆಕೆಯ ಬಳಿ ಮೇಕಪ್ ಕಿಟ್ ಇತ್ತು ಎನ್ನಲಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA


