ವಿಶ್ವವಿಖ್ಯಾತ ಮೈಸೂರು ಅರಮನೆಗೆ ಈಗ ವಿಚಿತ್ರ ಸಮಸ್ಯೆ ಎದುರಾಗಿದೆ. ಅರಮನೆಗೆ ಪಾರಿವಾಳದ ಹಿಕ್ಕೆಗಳಿಂದ ಕಂಟಕ ಎದುರಾಗಿದೆ. ಇದರಿಂದ ಕಟ್ಟಡಕ್ಕೆ ಧಕ್ಕೆಯಾಗಲಿದೆ ಎಂದು ಇತಿಹಾಸ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.
ಏಕೆಂದರೆ ಪಾರಿವಾಳದ ಹಿಕ್ಕೆಗಳಲ್ಲಿ ಯೂರಿಕ್ ಆಮ್ಲವನ್ನು ಹೊಂದಿರುತ್ತವೆ. ಯೂರಿಕ್ ಆಸಿಡ್ ಇರುವ ಈ ಪಾರಿವಾಳಗಳ ಹಿಕ್ಕೆ ಪಾರಂಪರಿಕ ಕಟ್ಟಡಗಳ ಮೇಲೆ ಬೀಳಿಸುವುದರಿಂದ ಕಟ್ಟಡಕ್ಕೆ ಹಾನಿಯಾಗುತ್ತದೆ ಎಂದು ಇತಿಹಾಸ ತಜ್ಞ ಪ್ರೊ. ರಂಗರಾವ್ ಕಳವಳ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪ್ರೊ.ರಂಗರಾವ್ ಮಾತನಾಡಿದ್ದು, ಯಾವುದೇ ತಾಮ್ರ ಅಥವಾ ಉಕ್ಕಿನ ಪಾತ್ರೆಯಲ್ಲಿ ಪಾರಿವಾಳದ ಹಿಕ್ಕೆಗಳನ್ನು ಕೆಲವು ದಿನಗಳ ಕಾಲ ಇಟ್ಟರೆ ಅವುಗಳಿಗೆ ತೂತು ಬೀಳುತ್ತದೆ. ಅಂತೆಯೇ, ಅಮೃತಶಿಲೆಯ ರಚನೆಯ ಮೇಲೆ ಪಾರಿವಾಳದ ಹಿಕ್ಕೆಗಳು ಬಿದ್ದರೂ, ಅಮೃತಶಿಲೆಗೂ ಹಾನಿಯಾಗುವ ಅಪಾಯವಿದೆ.. ಹಾಗಾಗಿ ಈ ಪಾರಿವಾಳದ ಹಿಕ್ಕೆಗಳಿಂದ ಅರಮನೆಗೆ ಸಾಕಷ್ಟು ಹಾನಿಯಾಗಲಿದೆ ಎಂದು ಅವರು ಹೇಳಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA


