ಸಾಕ್ರಮೆಂಟೋ: ಓಮಿಕ್ರಾನ್ ಭೀತಿ ನಡುವೆ ಕ್ಯಾಲಿಫೋರ್ನಿಯಾದಲ್ಲಿ ಕೋವಿಡ್ ಪ್ರಕರಣಗಳು 50 ಲಕ್ಷಕ್ಕೆ ಏರಿಕೆಯಾಗಿದ್ದು, ಈ ಮಟ್ಟದ ಪ್ರಕರಣಗಳನ್ನು ತಲುಪಿದ ಅಮೆರಿಕದ ಪ್ರಥಮ ರಾಜ್ಯವಾಗಿದೆ.
2020ರ ಜನವರಿ 25ರಂದು ಕ್ಯಾಲಿಫೋರ್ನಿಯಾದಲ್ಲಿ ಪ್ರಥಮ ಕೊರೊನಾ ವೈರಸ್ ಪ್ರಕರಣ ದೃಢಪಟ್ಟಿತ್ತು. ಆ ವರ್ಷದ ನವೆಂಬರ್ 11 ರಂದು ಅಂದರೆ 292 ದಿನಗಳ ಬಳಿಕ ಒಂದು ದಶಲಕ್ಷ ಸೋಂಕು ಪ್ರಕರಣಗಳು ಏರಿಕೆಯಾಗಿತ್ತು. 44 ದಿನಗಳ ಬಳಿಕ 2 ದಶಲಕ್ಷಕ್ಕೆ ಕೊರೊನಾ ಸೋಂಕು ಏರಿತು. ಕ್ಯಾಲಿಫೋರ್ನಿಯಾದ ಕೇಸ್‍ಲೋಡ್ ಕೂಡ ಇತರ ದೊಡ್ಡ ರಾಜ್ಯಗಳಿಗಿಂತ ಅಧಿಕವಾಗಿದೆ.ಟೆಕ್ಸಾಸ್‍ನಲ್ಲಿ 4.4 ದಶಲಕ್ಷ ಅಧಿಕ ಕೊರೊನಾ ಪ್ರಕರಣಗಳಿದ್ದರೆ ಭಾನುವಾರ ಫಾರಿಡಾದಲ್ಲಿ ಸೋಂಕಿನ ಪ್ರಕರಣಗಳು 3.09 ದಶಲಕ್ಷಕ್ಕೇರಿತ್ತು.
ಅಮೆರಿಕಾದಲ್ಲಿ ಕೋವಿಡ್ ಪ್ರಕರಣಗಳ ಭಾರಿ ಹೆಚ್ಚಳದಿಂದಾಗಿ ಪರೀಕ್ಷೆ ಮಾಡಿಸಿಕೊಳ್ಳಲು ಮತ್ತು ಚಿಕಿತ್ಸೆ ಪಡೆಯಲು ಹಾಹಾಕಾರ ಉಂಟಾಗಿದೆ.3ನೇ ಅಲೆಗೆ ಅಮೆರಿಕ ತತ್ತರಿಸಿದೆ. ಆಸ್ಪತ್ರೆಗಳು ತುಂಬಿ ತುಳುಕುತ್ತಿದ್ದ ಕೋವಿಡ್ ನಿಯಂತ್ರಣ ಮತ್ತು ನಿವಾರಣೆ ಸರ್ಕಾರಕ್ಕೆ ಭಾರೀ ತಲೆನೋವಾಗಿ ಪರಿಣಮಿಸಿದೆ.
ವರದಿ: ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy