nammatumakuru

    Subscribe to Updates

    Get the latest creative news from FooBar about art, design and business.

    What's Hot

    36 ಕೋಟಿ ರೂಪಾಯಿಯಿಂದ 180 ಕೋಟಿ ರೂ.ಗೆ  ಹೆಚ್ಚಳವಾದ ಪ್ರಧಾನಿ ಮೋದಿ ವಿದೇಶ ಪ್ರವಾಸ ಖರ್ಚು ವೆಚ್ಚ!

    August 8, 2026

    ಸರಗೂರು: ಮಾದರ ಮಹಾಸಭೆಯ ಉದ್ಘಾಟನೆ –ಪ್ರತಿಭಾ ಪುರಸ್ಕಾರ:  ಒಳಮೀಸಲಾತಿ ಜಾರಿಗೆ ಕೆ.ಎಚ್. ಮುನಿಯಪ್ಪ ಪ್ರತಿಪಾದನೆ

    August 8, 2026

    ಹಳ್ಳಿಯ ವಿದ್ಯಾರ್ಥಿಗಳು ಉನ್ನತ ಹುದ್ದೆಗೇರುವುದೇ ಎಂ.ಎಸ್.ಎ. ಟ್ರಸ್ಟ್‌ನ ಮುಖ್ಯ ಉದ್ದೇಶ: ಶಿವರಾಮ ಶೆಟ್ಟಿ

    August 8, 2026
    Facebook Twitter Instagram
    ಟ್ರೆಂಡಿಂಗ್
    • 36 ಕೋಟಿ ರೂಪಾಯಿಯಿಂದ 180 ಕೋಟಿ ರೂ.ಗೆ  ಹೆಚ್ಚಳವಾದ ಪ್ರಧಾನಿ ಮೋದಿ ವಿದೇಶ ಪ್ರವಾಸ ಖರ್ಚು ವೆಚ್ಚ!
    • ಸರಗೂರು: ಮಾದರ ಮಹಾಸಭೆಯ ಉದ್ಘಾಟನೆ –ಪ್ರತಿಭಾ ಪುರಸ್ಕಾರ:  ಒಳಮೀಸಲಾತಿ ಜಾರಿಗೆ ಕೆ.ಎಚ್. ಮುನಿಯಪ್ಪ ಪ್ರತಿಪಾದನೆ
    • ಹಳ್ಳಿಯ ವಿದ್ಯಾರ್ಥಿಗಳು ಉನ್ನತ ಹುದ್ದೆಗೇರುವುದೇ ಎಂ.ಎಸ್.ಎ. ಟ್ರಸ್ಟ್‌ನ ಮುಖ್ಯ ಉದ್ದೇಶ: ಶಿವರಾಮ ಶೆಟ್ಟಿ
    • ರಾಹುಲ್ ಗಾಂಧಿ ಪ್ರಧಾನಿಯಾಗಲಿ:  ಕಾಟೂರಿ ವೆಂಕಟೇಶ್ವರಲು ಪಾದಯಾತ್ರೆ
    • ಆಗಸ್ಟ್ 9ರಂದು ತಿಪಟೂರಿನಲ್ಲಿ ಪ್ರಥಮ ಬಾರಿಗೆ ರಾಜ್ಯಮಟ್ಟದ ಯೋಗ ಚಾಂಪಿಯನ್ಷಿಪ್ ಸ್ಪರ್ಧೆ
    • ಆ.10ರಂದು ರಾಷ್ಟ್ರೀಯ ಜಂತುಹುಳು ನಿವಾರಣಾ ಕಾರ್ಯಕ್ರಮ
    • ಶಿಕ್ಷಣ ನಿಮ್ಮ ಬದುಕಿಗೆ ಭದ್ರ ಬುನಾದಿ: ಶ್ರೀ ಸಿದ್ಧಲಿಂಗ ಮಹಾಸ್ವಾಮಿ
    • ಹೂ ಲೋಕ,  ಭೂರಮೆಯ  ರಥ :  ಪ್ರಕೃತಿ ಮಡಿಲಲ್ಲಿ ಚೆಲುವಿನ ರಥಯಾತ್ರೆ  ವಾಹ್..!
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ರಾಚಯ್ಯ ಸಂವಿಧಾನ, ಕೊಡಲಿ ಕಾನೂನು: ಲ್ಯಾಂಡ್‌ ಲಾರ್ಡ್‌ ಸಿನಿಮಾ ಬಗ್ಗೆ ಸಮಾಜ ಸೇವಕ ಮದನ್ ಮ್ಯಾಡಿ
    ಜಿಲ್ಲಾ ಸುದ್ದಿ February 4, 2026

    ರಾಚಯ್ಯ ಸಂವಿಧಾನ, ಕೊಡಲಿ ಕಾನೂನು: ಲ್ಯಾಂಡ್‌ ಲಾರ್ಡ್‌ ಸಿನಿಮಾ ಬಗ್ಗೆ ಸಮಾಜ ಸೇವಕ ಮದನ್ ಮ್ಯಾಡಿ

    By adminFebruary 4, 2026No Comments2 Mins Read
    landlord movie

    ಸರಗೂರು: ಲ್ಯಾಂಡ್‌ ಲಾರ್ಡ್‌ ಸಿನೆಮಾ‌ದ ನಾಯಕ ರಾಚಯ್ಯ ಸಂವಿಧಾನದ ಸ್ವರೂಪವಾಗಿಯೂ, ಆತ ಬಳಸುವ ಕೊಡಲಿಯು ಸಂವಿಧಾನ ಜಾರಿ ಮಾಡುವ ಕಾನೂನಿನ ರೂಪಕವಾಗಿರುವ ಸಿನಿಮಾ ನನ್ನ ಎಲ್ಲಾ ಸಮುದಾಯದ ಬಂಧುಗಳು ಸಿನಿಮಾ ನೋಡಬೇಕಾಗಿರುವ ಸಿನಿಮಾ ಎಂದು ಉದ್ಯಮಿ ಹಾಗೂ ಸಮಾಜ ಸೇವಕ ಮದನ್ ಮ್ಯಾಡಿ ತಿಳಿಸಿದರು.

    ಪಟ್ಟಣದ ಶಂಕರ್ ಟಾಕೀಸ್ ನಲ್ಲಿ ಲ್ಯಾಂಡ್ ಲಾರ್ಡ್ ಸಿನಿಮಾ ನೋಡಲು ಬುಧವಾರದಂದು ಉಚಿತವಾಗಿ ಒಂದು ದಿನದ ಟಿಕೆಟ್ ಯನ್ನು ವಿತರಿಸಿ ಮಾತನಾಡಿದರು.

    ಈ ಗ್ರಾಮಿಣ ಭಾಗದ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಉಚಿತವಾಗಿ ಸಿನಿಮಾ ಟಿಕೆಟ್ ನೀಡುತ್ತಿದ್ದೇವೆ.ಅದರಿಂದ ಈ ಸಿನಿಮಾ ನೋಡಿ ಹಳ್ಳಿ ಹಳ್ಳಿಯ ಜನರು ಬಂದು ನೋಡಿ ಎಂದು ಕರೆ ನೀಡಿದರು.

    ಸಿನಿಮಾದಲ್ಲಿ ಪಾಳೇಗಾರ ಸಣ್ಣಧಣಿಯ ಮಾತಿನಿಂದ ಹೊರಡುವ ಕಾನೂನುಗಳು ಬದಲಾದರೂ‌ ಕಟ್ಟಳೆಗಳು ಬದಲಾಗುವುದಿಲ್ಲ. ದೇಶಕ್ಕೆ ಸ್ವಾತಂತ್ರ್ಯ ಬಂದಿರಬಹುದು.‌‌ ಆದರೆ, ನಮ್ಮ ಗ್ರಾಮಕ್ಕಲ್ಲ. ಕೂಲಿಗೆ ಕಾಳು ಮಾತ್ರವೇ.‌ ಆಳು ಆಳಾಗಿಯೇ ಇರಬೇಕೆಂದು ಧ್ವನಿಸುವ ಮಾತುಗಳು ಪಾಳೇಗಾರಿಕೆಯ ಜಡ್ಡುಗಟ್ಟಿದ ಮನಃಸ್ಥಿತಿ ಸುಲಭವಾಗಿ ಹೋಗುವಂತಹದ್ದಲ್ಲ. ಸಂವಿಧಾನ ಜಾರಿ ಮಾಡುವವರು ಕಾನೂನಿನಡಿ ತಪ್ಪೆಂದು ಕಂಡರೂ ಸೌಮ್ಯವಾದಿಗಳಾಗಿದ್ದರೆ, ಮೌನಿಗಳಾಗಿದ್ದರೆ ಶತಮಾನಗಳಿಂದ ಕಟ್ಟಿರುವ ಜಾತಿಯ, ಮೇಲು–ಕೀಳು, ಅಸ್ಪೃಶ್ಯತೆಯ ಜಿಡ್ಡು ಹೋಗಲಾರದು. ಅದಕ್ಕೆ ಸಂವಿಧಾನದಡಿಯಲ್ಲಿ ಕಠಿಣವಾದ ಶಿಕ್ಷೆ ನೀಡದರೆ ಮಾತ್ರವೇ ಅಂತಹ ಜಿಡ್ಡು ಕರಗಲು ಸಾಧ್ಯ ಎಂಬುದನ್ನು ನಾಯಕನೆಂಬ ಸಂವಿಧಾನವು ಕೊಡಲಿಯೆಂಬ ಕಠಿಣವಾದ ಕಾನೂನಿನ ಅಸ್ತ್ರವಾಗಿ ಝಳಪಿಸಲಾಗಿದೆ.

    ಲ್ಯಾಂಡ್ ಲಾರ್ಡ್‌ ಸಿನೆಮಾ‌ ದೃಶ್ಯಗಳು 50–60ವರ್ಷದ ಹಿಂದಿನ‌ ಕತೆಯಂತೆ ಭಾಸವಾಗಬಹುದು. ಆದರೆ, ಮಾನಸಿಕವಾಗಿ ನಮ್ಮ ಚಿಂತನೆಗಳು, ಆಲೋಚನೆಗಳು ಗತಕಾಲದ್ದೆ ಎಂಬುದನ್ನು‌ ರಾಚಯ್ಯನ ಮಗಳು‌ ನೆಲಕ್ಕೆ ಬಿದ್ದ ದೇವರ ವಸ್ತ್ರವನ್ನು ಎತ್ತಿ ಕೊಟ್ಟಿದ್ದಕ್ಕೆ ಮೈಲಿಗೆಯೆಂದು ಕಂಬಕ್ಕೆ ಕಟ್ಟಿಹಾಕಿ ಹೊಡೆಯುವಂತಹ ದೃಶ್ಯ, ನಮ್ಮ‌ ಬಹುತೇಕ ಹಳ್ಳಿಗಳಲ್ಲಿ‌ ಇವತ್ತಿಗೂ ಹೊಲೆಯ, ಮಾದಿಗರು ದೇವಸ್ಥಾನಕ್ಕೆ ಒಳಕ್ಕೆ ಪ್ರವೇಶಿಸಲು ಮನುವಾದಿಗಳಲ್ಲಿ ಇನ್ನೂ ಇದೆ.  ಅಧಿಕಾರ ಹಾಗೂ ಮನುವಾದಿ ಕಟ್ಟಳೆಗಳಿಂದ ಇಡೀ‌ ಸಮುದಾಯವನ್ನು‌ ಬೆದರಿಸುವಂತಹ, ಪ್ರಶ್ನಿಸುವವರನ್ನು‌ ಇಲ್ಲವಾಗಿಸುವಂತಹ ಸಾವಿರಾರು ವರ್ಷಗಳಿಂದ ಇಂದಿಗೂ ನಡೆದುಕೊಂಡು ಬರುತ್ತಿರುವ ಅನೈತಿಕತೆಯನ್ನು ಚಿತ್ರದಲ್ಲಿ‌ ಯಶಸ್ವಿಯಾಗಿ ಕಟ್ಟಿಕೊಡಲಾಗಿದೆ.‌  ಸಿ‌ನೆಮಾದಲ್ಲಿ‌ ಸಣ್ಣ‌ಧಣಿ ಹೇಳಿದಂತೆಯೇ ಕಾನೂನುಗಳು‌ ಬದಲಾವಣೆಯಾದರೂ‌‌ ಪಂಚಾಯತಿಯ ಕಟ್ಟಳೆಗಳು‌ ಸಂಖ್ಯೆಯಲ್ಲಿ ಕಡಿಮೆಯಿದ್ದರೂ ಬಹುಪಾಲನ್ನು ಪಡೆಯುವವರಾಗಿಯೂ, ಬಹುಸಂಖ್ಯಾತ ಶ್ರಮಿಕರು‌ ಒಪ್ಪತ್ತಿನ ಊಟಕ್ಕೂ ಮತ್ತೊಬ್ಬರ ಮುಂದೆ ಕೈಚಾಚುವವರಾಗಿ ಇವತ್ತಿಗೂ ಮುಂದುವರೆದುಕೊಂಡು ಬರಲಾಗುತ್ತಿದೆ ಎಂದರು.

    ದುಡಿಯುವ ವರ್ಗಗಳ ಜೀವನ ಪ್ರೀತಿ, ಪರಸ್ಪರರ‌ ನಡುವಿನ ಬಾಂಧವ್ಯದ ನೈಜತೆ‌ ಕಾಣ್ತುಂಬಿ ಬರುವಂತಹದಾಗಿದೆ.‌‌ ಧಣಿಗಳು ಒಡ್ಡುವ ಸವಾಲಿಗೆ ಹತ್ತು ಏಟಿನ ಬದಲಾಗಿ ಒಂದೇ ಏಟಿಗೆ ಭದ್ರವಾಗಿ ನೆಟ್ಟಿದ್ದ ಬಲಿಷ್ಟವಾದ ಮರದ ಕಂಬದ ತುಂಡನ್ನು ಕತ್ತರಿಸುವ ದೃಶ್ಯದಲ್ಲಿ‌ ನಾಯಕನ ನಟನಾಗಿ‌‌ ರಾಚಯ್ಯ, ತಾಯಿಯ ಪಾತ್ರದಲ್ಲಿ‌ ಉಮಾಶ್ರೀ‌ಯ ಕೆಚ್ಚು, ಆರ್ಭಟ ನೋಡಿ ಕಣ್ತುಂಬಿಸಿಕೊಳ್ಳುವಂತಹ ಅನನ್ಯವಾದ ದೃಶ್ಯಗಳಾಗಿವೆ ಅದರಿಂದ ಎಲ್ಲಾ ಸಮುದಾಯದ ಬಂಧುಗಳು ಈ ಸಿನಿಮಾ ನೋಡಲೇಬೇಕಾಗುವ ಸಿನಿಮಾ.  ಅಂತಿಮವಾಗಿ ಲ್ಯಾಂಡ್ ಲಾರ್ಡ್ ಸಿನೆಮಾ ಕುರಿತು ಹೇಳುವುದಾದರೆ, ಹತ್ತಾರು ಸಿನೆಮಾಗೆ ಆಗುವಷ್ಟು ಕತೆಯ ಹಂದರವನ್ನು ಒಂದೇ‌ ಸಿನೆಮಾದಲ್ಲಿ‌ ಹೇಳಿಬಿಡಬೇಕೆಂಬ ಕಾತುರ, ಆತುರ‌ ನಿರ್ದೇಶಕ ಜಡೇಶ್ ಅವರಿಗೆ ಯಾಕೆ ಬಂತೋ ಎಂಬುದನ್ನು ಅವರೇ ಹೇಳಬೇಕು. ಇನ್ನು ಸಂಭಾಷಣೆ ಮಾಸ್ತಿ ಸರ್ ಅವರ ತಂಡದ ಮಾನವೀಯ ಸೃಜನಶೀಲತೆಯನ್ನು ಸಿನೆಮಾ‌ ನೋಡುವ ಮೂಲಕ‌ ಅವರಿಗೆ ಮೆಚ್ಚುಗೆ ವ್ಯಕ್ತಪಡಿಸಬೇಕು. ನಾವುಗಳು ದುನಿಯಾ ವಿಜಯ್ ರವರ ಪರವಾಗಿ ನಿಲ್ಲುತ್ತವೆ. ದುನಿಯಾ ವಿಜಯ್ ರವರು ಎಲ್ಲಾ ಸಮುದಾಯದ ಪರವಾಗಿ ಸಿನಿಮಾ ಮಾಡುತ್ತಾನೆ ಎಂದು ತಿಳಿಸಿದ್ದಾರೆ ಎಂದು ತಿಳಿಸಿದರು.

    ತಾಲೂಕಿನ ಜನತೆ ಲ್ಯಾಂಡ್ ಲಾರ್ಡ್ ಸಿನಿಮಾ ನೋಡಲು ಸಾರ್ವಜನಿಕರು ಮುಗಿಬಿದ್ದರು.  ಈ ಸಂದರ್ಭದಲ್ಲಿ ಮುಖಂಡರಾದ ವಕೀಲ ಸುರೇಶ್,ಬುದ್ಧ ಪ್ರಕಾಶ್, ಚನ್ನಪ್ಪ ಸರಗೂರು, ಕಿಟ್ಟಿ,ಮಾಜಿ ತಾಪಂ ಅಧ್ಯಕ್ಷ ರವಿಕುಮಾರ್, ಸತೀಶ್ ಉಯ್ಯಂಬಳ್ಳಿ ,ವಿಷಕಂಠ, ಮಹೇಂದ್ರ, ಪ್ರಕಾಶ್, ಮೂರ್ತಿ, ದಯಾನಂದ, ಪುಟ್ಟರಾಜು,ಜಮೀರ್,ಹಾಲಯ್ಯ, ಸೋಮೇಶ್, ಲೋಕೇಶ್ ,ಇನ್ನೂ ಮುಖಂಡರು ಕುಟುಂಬರ ಸಮೇತ ಸೇರಿದಂತೆ ಹಾಜರಿದ್ದರು.

    ವರದಿ: ಹಾದನೂರು ಚಂದ್ರ


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

    admin
    • Website

    Related Posts

    ಕಾಮಗಾರಿ ಸ್ಥಳಕ್ಕೆ ಜಿ.ಪಂ ಸಿಇಒ ಭೇಟಿ: ಶಾಶ್ವತ ಆಸ್ತಿ ನಿರ್ಮಾಣಕ್ಕೆ ಒತ್ತು ನೀಡಲು ಸೂಚನೆ

    August 8, 2026

    ಸ್ತನ್ಯಪಾನ ಬೆಂಬಲಿಸಿ, ಸದೃಢ ಜಗತ್ತು ನಿರ್ಮಿಸಿ: ಡಾ.ರವಿಕುಮಾರ್ ಕರೆ

    August 7, 2026

    ಆಗಸ್ಟ್ 8ರಂದು ಸರಗೂರಿನಲ್ಲಿ ಹೆಚ್.ಡಿ. ಕೋಟೆ ಹಾಗೂ ಸರಗೂರು ತಾಲೂಕು ಮಾದರ ಮಹಾಸಭಾ ಉದ್ಘಾಟನೆ ಮತ್ತು ಪ್ರತಿಭಾ ಪುರಸ್ಕಾರ

    August 7, 2026

    Leave A Reply Cancel Reply

    Our Picks

    36 ಕೋಟಿ ರೂಪಾಯಿಯಿಂದ 180 ಕೋಟಿ ರೂ.ಗೆ  ಹೆಚ್ಚಳವಾದ ಪ್ರಧಾನಿ ಮೋದಿ ವಿದೇಶ ಪ್ರವಾಸ ಖರ್ಚು ವೆಚ್ಚ!

    August 8, 2026

    NEET ವಿವಾದ: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ

    July 25, 2026

    ನೀಟ್ ಅಕ್ರಮ: ಕಪ್ಪು ಪಟ್ಟಿ ಧರಿಸಿ ಮೌನ ಪ್ರತಿಭಟನೆ: ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹ

    July 21, 2026

    ಕೇಂದ್ರ ಸರ್ಕಾರವು ತಕ್ಷಣವೇ ಸೋನಮ್ ವಾಂಗ್ಚುಕ್ ಜೊತೆ ಚರ್ಚಿಸಲು ಆಗ್ರಹಿಸಿ ರಾಷ್ಟ್ರಪತಿಯವರಿಗೆ ಮನವಿ: ತುಮಕೂರಿನಲ್ಲಿ ಆನ್‌ ಲೈನ್ ಸಹಿ ಸಂಗ್ರಹ

    July 18, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ರಾಷ್ಟ್ರೀಯ ಸುದ್ದಿ

    36 ಕೋಟಿ ರೂಪಾಯಿಯಿಂದ 180 ಕೋಟಿ ರೂ.ಗೆ  ಹೆಚ್ಚಳವಾದ ಪ್ರಧಾನಿ ಮೋದಿ ವಿದೇಶ ಪ್ರವಾಸ ಖರ್ಚು ವೆಚ್ಚ!

    August 8, 2026

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ವಿದೇಶ ಪ್ರವಾಸದ ವೆಚ್ಚ 2021 ರಿಂದ ಐದು ಪಟ್ಟು ಹೆಚ್ಚಾಗಿದೆ. ರಾಜ್ಯಸಭೆಗೆ ವಿದೇಶಾಂಗ…

    ಸರಗೂರು: ಮಾದರ ಮಹಾಸಭೆಯ ಉದ್ಘಾಟನೆ –ಪ್ರತಿಭಾ ಪುರಸ್ಕಾರ:  ಒಳಮೀಸಲಾತಿ ಜಾರಿಗೆ ಕೆ.ಎಚ್. ಮುನಿಯಪ್ಪ ಪ್ರತಿಪಾದನೆ

    August 8, 2026

    ಹಳ್ಳಿಯ ವಿದ್ಯಾರ್ಥಿಗಳು ಉನ್ನತ ಹುದ್ದೆಗೇರುವುದೇ ಎಂ.ಎಸ್.ಎ. ಟ್ರಸ್ಟ್‌ನ ಮುಖ್ಯ ಉದ್ದೇಶ: ಶಿವರಾಮ ಶೆಟ್ಟಿ

    August 8, 2026

    ರಾಹುಲ್ ಗಾಂಧಿ ಪ್ರಧಾನಿಯಾಗಲಿ:  ಕಾಟೂರಿ ವೆಂಕಟೇಶ್ವರಲು ಪಾದಯಾತ್ರೆ

    August 8, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.