nammatumakuru

    Subscribe to Updates

    Get the latest creative news from FooBar about art, design and business.

    What's Hot

    ಬೀದಿ ಬದಿ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆಗೆ ಒತ್ತಾಯ

    September 5, 2026

    ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನ: ಆರೋಪಿಯ ಬಂಧನ, ಸಾರ್ವಜನಿಕರಿಂದ ಧರ್ಮದೇಟು

    September 5, 2026

    ಸ್ಪೋಟಕ ವರದಿ: ಹೊಳೆನರಸೀಪುರದಲ್ಲಿ ‘ರಸ್ತೆ ಬಂದ್’ ರಾಜಕೀಯ — ಜೆಡಿಎಸ್ ಸಾಮ್ರಾಜ್ಯಕ್ಕೆ ಸ್ವಯಂಕೃತ ಕಂಠಕ!

    September 5, 2026
    Facebook Twitter Instagram
    ಟ್ರೆಂಡಿಂಗ್
    • ಬೀದಿ ಬದಿ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆಗೆ ಒತ್ತಾಯ
    • ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನ: ಆರೋಪಿಯ ಬಂಧನ, ಸಾರ್ವಜನಿಕರಿಂದ ಧರ್ಮದೇಟು
    • ಸ್ಪೋಟಕ ವರದಿ: ಹೊಳೆನರಸೀಪುರದಲ್ಲಿ ‘ರಸ್ತೆ ಬಂದ್’ ರಾಜಕೀಯ — ಜೆಡಿಎಸ್ ಸಾಮ್ರಾಜ್ಯಕ್ಕೆ ಸ್ವಯಂಕೃತ ಕಂಠಕ!
    • ಬೀದರ್: 40 ವರ್ಷಗಳ ಬಳಿಕ ಬೆಳಕುಣಿ (ಚೌದ್ರಿ) ಗ್ರಾಮದಲ್ಲಿ ಆರಂಭವಾಯಿತು ಅಭಿವೃದ್ಧಿ ಕಾಮಗಾರಿ; ಪಿಡಿಒ ಕಾರ್ಯಕ್ಕೆ ಶ್ಲಾಘನೆ
    • ಶ್ರೀ ಕರಿಯಮ್ಮ ದೇವಿ–ಶ್ರೀ ಬನಶಂಕರಿ ದೇವಿಯ ನೂತನ ದೇವಾಲಯ ಪ್ರವೇಶ ಮತ್ತು ವಿಗ್ರಹ ಪ್ರತಿಷ್ಠಾಪನಾ ಮಹೋತ್ಸವ
    • ತುಮಕೂರು: ಪ್ರಜಾ ಸೇವಾ ಆಂದೋಲನಕ್ಕೆ ಸಿದ್ಧತೆ:  ಜಿಲ್ಲಾಧಿಕಾರಿ ಶುಭ ಕಲ್ಯಾಣ್‌ ರಿಂದ ಪರಿಶೀಲನೆ
    • ತುಮಕೂರು: ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ
    • ತುಮಕೂರು:  ಶಿಕ್ಷಕ ಪ್ರಶಸ್ತಿ ಆಯ್ಕೆ ಪಟ್ಟಿ ಪ್ರಕಟ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಬದುಕಿನ ತಾತ್ವಿಕ ಶೋಧದ ಕಾದಂಬರಿ ಕಾಡುದೇವರಬೆಟ್ಟ:  ಬರಗೂರು ರಾಮಚಂದ್ರಪ್ಪ ಅಭಿಮತ
    ತುಮಕೂರು August 24, 2026

    ಬದುಕಿನ ತಾತ್ವಿಕ ಶೋಧದ ಕಾದಂಬರಿ ಕಾಡುದೇವರಬೆಟ್ಟ:  ಬರಗೂರು ರಾಮಚಂದ್ರಪ್ಪ ಅಭಿಮತ

    By Ganesh TumkuruAugust 24, 2026No Comments3 Mins Read
    baraguru ramachandrappa

    ತುಮಕೂರು: ಸಾಹಿತಿ ಡಾ.ಸುಚೇತನಾ ಸ್ವರೂಪ ಅವರು ರಚಿಸುವ ಕಾದಂಬರಿ ಕಾಡುದೇವರಬೆಟ್ಟ ವಿವಿಧ ಆಯಾಮ, ಪಾತ್ರಗಳ ಮೂಲಕ ಬದುಕಿನ ತಾತ್ವಿಕ ಶೋಧವನ್ನು ಅನಾವರಣಗೊಳಿಸುತ್ತದೆ ಎಂದು ಸಂಸ್ಕೃತಿ ಚಿಂತಕ ನಾಡೋಜ ಡಾ.ಬರಗೂರು ರಾಮಚಂದ್ರಪ್ಪ ತಿಳಿಸಿದರು.

    ಅವರು ಲೇಖಕಿಯರ ಸಂಘ ತುಮಕೂರು ಜಿಲ್ಲಾ ಶಾಖೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಮಹಿಳಾ ಅಧ್ಯಯನ ಕೇಂದ್ರ, ಸಾಮಾಜಿಕ ನ್ಯಾಯಪರ ವಿದ್ಯಾರ್ಥಿ ಒಕ್ಕೂಟ ತುಮಕೂರು ವಿವಿ ಇವರ ಸಹಯೋಗದಲ್ಲಿ ಸುಚೇತನಾಸ್ವರೂಪ ಅವರ ಕಾಡುದೇವರಬೆಟ್ಟ ಐದು ಸಂಪುಟಗಳ ಲೋಕಾರ್ಪಣೆ ಕಾದಂಬರಿ ಬಿಡುಗಡೆಗೊಳಿಸಿ ಮಾತನಾಡಿದರು.

    ಯಾವುದೇ ಕಾದಂಬರಿ ಬೃಹತ್ ಆಗಿರುವುದು ಮುಖ್ಯವಲ್ಲ. ಅದರಲ್ಲಿನ ಮೌಲ್ಯತೆಯೇ ಅಂತಿಮ. ಕಾಡುದೇವರಬೆಟ್ಟ ಕಾದಂಬರಿ ವಿವಿಧ ಪಾತ್ರಗಳ ಮೂಲಕ ಅತೀ ಸಂವಾದಿಯಾಗಿದೆ. ದ್ವೇಷ ಅಸಹನೆಯೇ ಯುದ್ಧ ಸಂಘರ್ಷಕ್ಕೆ ನಾಂದಿ ಎಂಬುದನ್ನು ಕಾದಂಬರಿ ಆರಂಭದಲ್ಲೇ ಹೇಳಲಾಗಿದ್ದು, ಸಾಮರಸ್ಯದ ಸಂದೇಶವನ್ನು ಮಾತಿನ ಮಂಟಪದ ಮೂಲಕ ಅನುಭವ ಮಂಟಪದೆಡೆಗೆ ಕೊಂಡೊಯ್ಯುವ ವಿಶೇಷ ಕಾದಂಬರಿ ಸಂಪುಟವೆನಿಸಿದೆ ಎಂದರು.

    ಕಾದಂಬರಿಯಲ್ಲಿ ಬರುವ ವಿವಿಧ ಜನವರ್ಗವನ್ನು ಪ್ರತಿನಿಧಿಸುವ ಪಾತ್ರಗಳು ಸೈದ್ಧಾಂತಿಕ ಸಂಘರ್ಷ, ಸಮಯ ಸಾಧಕತನ, ರಾಜಕೀಯ ತಂತ್ರಗಾರಿಕೆ, ವಿಶ್ವವಿದ್ಯಾನಿಲಯಗಳಲ್ಲಿನ ಲಂಪಟತನ, ಪ್ರೇಮ ಸಂಬಂಧಗಳನ್ನು ಯಥಾವತ್ ಅನಾವರಣ ಗೊಳಿಸುತ್ತದೆ. ಲ್ಯಾಂಡಲಿಸಂ ಆಡಳಿತ ದಿಂದಾಗುತ್ತಿರುವ ಸಾಮಾಜಿಕ ವಿಘಟನೆಗಳು, ಜಾತಿ ಧರ್ಮಾಧಾರಿತ ಸಂಘರ್ಷಗಳು, ಕೋಮುವಾದದ ವಿವಿಧ ಆಯಾಮಗಳನ್ನು ಕಾವೇರಿ ಚಿತ್ರಿಸುತ್ತದೆ. ಕನ್ನಡದಲ್ಲಿ ಇಷ್ಟು ಬೃಹತ್ ಪುಟಗಳ ಕಾದಂಬರಿ ಬರೆದ ಸ್ವರೂಪ ಅವರನ್ನು ಅಭಿನಂದಿಸುವ ಜೊತೆಗೆ ಪುಸ್ತಕ ಬಿಡುಗಡೆ ಕಾರ್ಯಕ್ರಮಗಳಿಗೆ ಓದುಗರು ಅಧಿಕ ಸಂಖ್ಯೆಯಲ್ಲಿ ಬರುವಂತೆ ಮಾಡುವುದು ಆಯೋಜಕರ ಪ್ರಮುಖ ಜವಾಬ್ದಾರಿಯಾಗಬೇಕು ಎಂದರು.

    ಕಾದಂಬರಿ ಕುರಿತು ಮಾತನಾಡಿದ ಲೇಖಕ ಡಾ.ಸಿದ್ದಗಂಗಯ್ಯ ಹೊಳಕಾಲ್ ಅವರು, ‘5 ಸಂಪುಟದಲ್ಲಿ 2397 ಪುಟಗಳಲ್ಲಿ ಹೊರಬಂದಿರುವ ಕಾಡುದೇವರ ಬೆಟ್ಟ ಕಾದಂಬರಿಯಲ್ಲಿ ಸಮಕಾಲೀನ ವಿಚಾರಧಾರೆಯಿದೆ. ಲೋಕಾಭಿರಾಮಯ್ಯ, ಬೊಂಬೆರಾಮಯ್ಯ, ಹಿಂಗಾರಯ್ಯ, ಶಕುನಿಗೌಡ, ಅಹಮದ್, ಅಮ್ಮಣ್ಣಿ , ಹೀಗೆ ಸುಮಾರು 300 ಪಾತ್ರಗಳ ಮೂಲಕ ಅಭಿವ್ಯಕ್ತಗೊಳ್ಳುವ ಪ್ರಯೋಗ ಮಾಡಲಾಗಿದೆ. ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕುವ ಕಾದಂಬರಿ ಇದಾಗಿದ್ದು, ಗ್ರಾಮೀಣ ಚಿತ್ರಣವನ್ನು ಸೊಗಸಾಗಿ ಕಟ್ಟಿಕೊಡಲಾಗಿದೆ. ಪಾತ್ರಗಳ ವೈಯಕ್ತಿಕ ಸಂಶೋಧದ ಸಂವಾದದಲ್ಲಿ ಭಾಷೆಯನ್ನು ಹಸಿ-ಬಿಸಿಯಂತೆ ಕಾದಂಬರಿಕಾರರು ಬಳಕೆ ಮಾಡದಿರುವುದು ಸಮಾಜಸೇವೆ ಎಂಬ ಪ್ರಶ್ನೆಯ ಜೊತೆಗೆ ಪರಿಸರದ ಉಳಿವು, ಸಾಮರಸ್ಯದ ಸಂದೇಶ, ತಾತ್ವಿಕ ನೆಲೆಯನ್ನು ಸಾರುವ ಕೃತಿಯಾಗಿ ಕಾಡುದೇವರಬೆಟ್ಟ ಹೊರಹೊಮ್ಮಿದೆ. ಎಲ್ಲರೂ ಕಾದಂಬರಿ ಕೊಂಡು ಓದಬೇಕು ಎಂದು ಮನವಿ ಮಾಡಿದರು.

    ಸಹಜ ಅಭಿವ್ಯಕ್ತಿಯ ಲೋಕಾರ್ಪಣೆ: ಹಿರಿಯ ಚಿಂತಕ ಕೆ.ದೊರೈರಾಜ್ ಪ್ರತಿಕ್ರಿಯಿಸಿ ಕಾಡುದೇವರಬೆಟ್ಟ ಕಾದಂಬರಿಯನ್ನು ಲೋಕಾರ್ಪಣವಾಗಿ ಕಟ್ಟಿಕೊಟ್ಟಿರುವ ಸುಚೇತನಾ ಸ್ವರೂಪ ಅವರು ಪುಸ್ತಕ ಸಮಾಜದಲ್ಲಿನ ಪಿಡುಗಾದ ಜಾತಿವಾದ, ಕೋಮುವಾದ, ಅಸಮಾನತೆಯನ್ನು ಸಹಜವಾಗಿಯೇ ಪಾತ್ರಗಳ ಮೂಲಕ ಹೇಳಿಸುವ ಪ್ರಯತ್ನ ಮಾಡಿದ್ದಾರೆ. ಪ್ರಸ್ತುತ ಅಸ್ಪೃಶ್ಯರು ವಿದ್ಯಾವಂತರಾದರೂ ಜಾತಿಯ ಸಂಕೋಲೆಯಿಂದ ಹೊರಬರಲು ಸಾಧ್ಯವಾಗಿಲ್ಲ, ಸಮಾನತೆ ಸಿಕ್ಕಿಲ್ಲ. ಇಂತಹ ಸಂಗತಿಗಳನ್ನು ಕೃತಿಯು ಸಹಜ ಪಾತ್ರ ಅಭಿವ್ಯಕ್ತಿ ರೂಪದಲ್ಲಿ ಬಂಬಿಸಿದೆ ಎಂದು ವಿಶ್ಲೇಷಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ವಹಿಸಿದ್ದರು. ಲೇಖಕಿಯರ ಸಂಘದ ಜಿಲ್ಲಾಧ್ಯಕ್ಷೆ ಆಶಾ ಬಗ್ಗನಡು, ವಿವಿ ಕಲಾ ಕಾಲೇಜು ಪ್ರಾಂಶುಪಾಲೆ ಪ್ರೊ.ದ್ರಾಕ್ಷಾಯಣಿ, ಖಜಾಂಚಿ ರಾಮಚಂದ್ರಶೇಖರ್ ವೇದಿಕೆಯಲ್ಲಿದ್ದರು. ಮರಿಯಂ ನಿರೂಪಿಸಿದರು. ಚೇತನ ಚಿತ್ರದುರ್ಗ ಪ್ರಕಾಶಕ ಸಿಂಗರಾಜು ಚಿತ್ತಾಪುರ್, ಲೇಖಕರಾದ ಶೈಲನಾಗರಾಜ್, ಇಂದಿರಮ್ಮ, ಡಾ.ಟಿ.ಆರ್. ಲೀಲಾವತಿ, ಡಾ. ಲಕ್ಷ್ಮೀದಾಸ್, ಡಾ.ಟಿ.ನಾಗರಾಜು, ರಫೀಂ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

    ಕಾದಂಬರಿಕಾರ್ ಡಾ.ಸುಚೇತನಾ ಸ್ವರೂಪ ಅವರು ಮಾತನಾಡಿ, 12 ವರ್ಷದ ಹಿಂದೆ ಸುಮಾರು 3 ವರ್ಷಗಳ ಕಾಲ ಕಾಡುದೇವರಬೆಟ್ಟ ಕಾದಂಬರಿಯನ್ನು ರಚಿಸಿದ್ದು 3 ಸಾವಿರ ಪುಟ ದಾಟಿದ್ದ ಕಾದಂಬರಿಯನ್ನು ಕೋವಿಡ್ ನಂತರ ಪರಿಷ್ಕರಣೆ ಮಾಡಿ, 2397 ಪುಟಕ್ಕೆ ಇಳಿಸಿದ್ದು ತುಮಕೂರಿನಲ್ಲಿದ್ದಾಗ ರಚಿಸಿದ ಕೃತಿಯಾದ್ದರಿಂದ ಇಲ್ಲಿಯೇ ಬಿಡುಗಡೆಯಾಗಲು ಬಯಸಿದೆ. ಬರಗೂರು, ದೊರೈರಾಜ್, ಹೊಳಕಾಲ್‌ರಂತಹ ಚಿಂತಕರನ್ನು ಕರೆಸಿ ಲೇಖಕಿಯರ ಸಂಘ, ಕನಾಪವಿದರು ಬಿಡುಗಡೆಮಾಡಿಸಿದ್ದು ಅರ್ಥಪೂರ್ಣವೆನಿಸಿದೆ. ಇಂದು ಇಡೀ ಜಗತ್ತು ಬಹು ಯುದ್ಧಗಳು ಮಾತ್ರವಲ್ಲ ಆಂತರಿಕ ನಾಗರಿಕ ಯುದ್ಧಗಳು ಕಾಡುತ್ತಿವೆ. ಶಸ್ತ್ರಾಸ್ತ್ರವಿಲ್ಲದೆ ಸಾಮ್ರಾಜ್ಯಶಾಹಿಯ ವಿರುದ್ಧ ಹೋರಾಟಮಾಡಿ ಜಯಸಾಧಿಸಬಹುದು ಎಂದು ತೋರಿಸಿಕೊಟ್ಟ ಗಾಂಧಿಯನ್ನು ಮೂಲೆಗುಂಪು ಮಾಡುತ್ತಿರುವ ಈ ಸನ್ನಿವೇಶದಲ್ಲಿ ಕಾಡುದೇವರಬೆಟ್ಟ ಕಾದಂಬರಿ ನಾನಾ ಪಾತ್ರಗಳ ಮೂಲಕ ಗಾಂಧಿ ಪ್ರಣೀತ ವಿಚಾರಧಾರೆಯನ್ನು ಎತ್ತಿಹಿಡಿಯುತ್ತದೆ ಎಂದು ವ್ಯಾಖ್ಯಾನಿಸಿದರು.

    ನವ ತರುಣ ತಲೆಮಾರಾಗಿ ಗುರುತಿಸಿಕೊಳ್ಳುತ್ತಿರುವ ಜೇನ್‌ ಜಿಗಳ ಹೋರಾಟ ತಾತ್ವಿಕ ಹಾದಿಯಲ್ಲಿ ಸಾಗದಿದ್ದರೆ ಶಾಶ್ವತ ಪರಿಹಾರ, ದೀರ್ಘಾವಧಿ ಚಳವಳಿ ಕಟ್ಟಲು ಸಾಧ್ಯವಿಲ್ಲ, ಸಂಘಟನೆಗಳು ಸಾಂಕೇತಿಕ ಪ್ರತಿಭಟನೆಯಷ್ಟೇ, ಅಲ್ಪಾವಧಿಯ ಪ್ರಯೋಜನಗಳಿಗಷ್ಟೇ ಸೀಮಿತವಾಗಬಾರದು. ಈ ದಿಸೆಯಲ್ಲಿ ರಾಷ್ಟ್ರದ ಕೇಂದ್ರಬಿಂದುವಾಗಿರುವ ಜೇನ್‌ ಜಿಗಳ ಹೋರಾಟ, ಅಭಿವ್ಯಕ್ತಿಗಳ ಬಗ್ಗೆಯೂ ನಿಷ್ಕರ್ಷೆ ಅಗತ್ಯವಿದೆ. ಜಯಪ್ರಕಾಶ್ ನಾರಾಯಣ್ ಅವರು ಪ್ರತಿಪಾದಿಸಿದ ಸಂಪೂರ್ಣ ಕ್ರಾಂತಿ ಇಂದಿಗೂ ಸಾಧ್ಯವಾಗಿಲ್ಲ, ಅಸಮಾನತೆ, ಜಾತಿ ಧರ್ಮ ವರ್ಣ ಸಂಕರಗಳು, ಕೋಮುವಾದ ಇಂದಿಗೂ ಭಾರತೀಯರನ್ನು ಜ್ವಲಂತವಾಗಿ ಕಾಡುತ್ತಿವೆ.

    — ಡಾ. ಬರಗೂರು ರಾಮಚಂದ್ರಪ್ಪ ಸಾಹಿತಿ ಚಿಂತಕರು.    


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI

    ತುಮಕೂರು ಬರಗೂರು ರಾಮಚಂದ್ರಪ್ಪ
    Ganesh Tumkuru
    • Website

    Related Posts

    ಬೀದಿ ಬದಿ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆಗೆ ಒತ್ತಾಯ

    September 5, 2026

    ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನ: ಆರೋಪಿಯ ಬಂಧನ, ಸಾರ್ವಜನಿಕರಿಂದ ಧರ್ಮದೇಟು

    September 5, 2026

    ತುಮಕೂರು: ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ

    September 4, 2026

    Leave A Reply Cancel Reply

    Our Picks

    ನೇಪಾಳ ಪ್ರವಾಹ: ತುಮಕೂರು ಮೂಲದ ಇಬ್ಬರು ನಾಪತ್ತೆ

    September 1, 2026

    ನೇಪಾಳದಲ್ಲಿ ಭೀಕರ ಪ್ರವಾಹದ ಅಬ್ಬರ: ಮತ್ತೊಂದು ಜಲಪ್ರಳಯದ ಭೀತಿ ಸೃಷ್ಟಿ

    August 28, 2026

    ಕಾವೇರಿ ನೀರು ವಿವಾದ: ಸುಪ್ರೀಂ ಕೋರ್ಟ್ ವಿಚಾರಣೆ ಬಳಿಕ ಮುಂದಿನ ನಡೆ ಕುರಿತು ನಿರ್ಧಾರ — ಸಚಿವ ರಾಮಲಿಂಗಾರೆಡ್ಡಿ

    August 13, 2026

    ಇತಿಹಾಸದಲ್ಲೇ ಪ್ರಥಮ: 80ನೇ ಸ್ವಾತಂತ್ರ್ಯ ದಿನಾಚರಣೆಯಂದು ಕೆಂಪುಕೋಟೆಯ ಮೇಲೆ ಮೊಳಗಲಿದೆ ‘ವಂದೇ ಮಾತರಂ’

    August 11, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತುಮಕೂರು

    ಬೀದಿ ಬದಿ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆಗೆ ಒತ್ತಾಯ

    September 5, 2026

    ತುಮಕೂರು: ಸುಪ್ರೀಂ ಕೋರ್ಟ್ ಆದೇಶಂತೆ ನಗರಪಾಲಿಕೆ ಅಧಿಕಾರಿಗಳು ನಗರದಲ್ಲೇ ಫುಟ್‌ ಪಾತ್ ಅಂಗಡಿಗಳನ್ನು ತೆರವು ಮಾಡಿಸಿದ್ದಾರೆ. ಈ ಕ್ರಮದಿಂದ ನಗರದ…

    ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನ: ಆರೋಪಿಯ ಬಂಧನ, ಸಾರ್ವಜನಿಕರಿಂದ ಧರ್ಮದೇಟು

    September 5, 2026

    ಸ್ಪೋಟಕ ವರದಿ: ಹೊಳೆನರಸೀಪುರದಲ್ಲಿ ‘ರಸ್ತೆ ಬಂದ್’ ರಾಜಕೀಯ — ಜೆಡಿಎಸ್ ಸಾಮ್ರಾಜ್ಯಕ್ಕೆ ಸ್ವಯಂಕೃತ ಕಂಠಕ!

    September 5, 2026

    ಬೀದರ್: 40 ವರ್ಷಗಳ ಬಳಿಕ ಬೆಳಕುಣಿ (ಚೌದ್ರಿ) ಗ್ರಾಮದಲ್ಲಿ ಆರಂಭವಾಯಿತು ಅಭಿವೃದ್ಧಿ ಕಾಮಗಾರಿ; ಪಿಡಿಒ ಕಾರ್ಯಕ್ಕೆ ಶ್ಲಾಘನೆ

    September 5, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.