ಶ್ರೀನಗರ: ಅಕ್ರಮ ಮಸೀದಿಯನ್ನು ಕೆಡವಲು ಅಧಿಕಾರಿಗಳು ಜೆಸಿಬಿಗಳನ್ನು ತಂದ ಬೆನ್ನಲ್ಲೇ ಪೊಲೀಸರ ಮೇಲೆ ಜನಸಮೂಹ ದಾಳಿ ಮತ್ತು ಕಲ್ಲು ತೂರಾಟ ಜಮ್ಮುವಿನ ಕಥುವಾದಲ್ಲಿ ನಡೆದಿದೆ.
ಪೊಲೀಸ್ ಮತ್ತು ಅಧಿಕಾರಿಗಳ ತಂಡವು ಕಥುವಾದಲ್ಲಿನ ಕಲ್ಯಾಣಪುರ ಪಾದ್ರಿಯ ಸರ್ಕಾರಿ ಭೂಮಿಯಲ್ಲಿ ನಡೆಯುತ್ತಿರುವ ಅಕ್ರಮ ಕಟ್ಟಡಗಳನ್ನು ತೆಗೆದುಹಾಕಲು ಹೋದರು. ಈ ಸಂದರ್ಭದಲ್ಲಿ ಜನರು ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾರೆ. ಈ ವೇಳೆ ಪರಿಸ್ಥಿತಿಯನ್ನು ಹತೋಟಿಗೆ ತರಲು ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದರು.
ಘಟನೆಯಲ್ಲಿ ಉಪ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಮಹಿಳಾ ಪೊಲೀಸ್ ಸೇರಿದಂತೆ ಕನಿಷ್ಠ ಐವರು ಪೊಲೀಸರು ಗಾಯಗೊಂಡಿದ್ದಾರೆ. ಜಿಲ್ಲಾಧಿಕಾರಿ ರಾಕೇಶ್ ಮಿನ್ಹಾಸ್ ಮಾತನಾಡಿ, ಅಕ್ರಮ ನಿವಾಸಿಗಳು ತಮಗೆ ಕಳುಹಿಸಲಾದ ಹಲವು ನೋಟಿಸ್ ಗಳನ್ನು ನಿರ್ಲಕ್ಷಿಸಿದ ನಂತರ ಅತಿಕ್ರಮಣ ವಿರೋಧಿ ಅಭಿಯಾನವನ್ನು ಪ್ರಾರಂಭಿಸಲಾಯಿತು ಎಂದು ಹೇಳಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA


