ಹತ್ಯೆ ಆರೋಪ ದರ್ಶನ್ ಮೇಲೆ ಬಂದ ದಿನದಿಂದ ಚಿತ್ರರಂಗದ ಯಾರೊಬ್ಬರೂ ತುಟಿ ಬಿಚ್ಚಿರಲಿಲ್ಲ. ಇದೀಗ ಒಬ್ಬೊಬ್ಬರೆ ಬಂದು ದರ್ಶನ್ ಪರ ಮಾತನಾಡುತ್ತಿದ್ದಾರೆ. ಇದೀಗ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ, ದರ್ಶನ್ ಪ್ರಕರಣದ ಬಗ್ಗೆ ಮಾತನಾಡಿದ್ದಾರೆ.
ನಟ ದರ್ಶನ್ ನನ್ನ ಮಗು. ಮಗು ಆ ತಪ್ಪು ಮಾಡಿದ್ರೆ ತಂದೆ ಎಷ್ಟು ನೋವು ತಿಂತಾನೋ ಅಷ್ಟೇ ನೋವು ನಾನೂ ತಿಂತಿದ್ದೀನಿ. ಆ ಮಗು ಕೂಡ ಅಷ್ಟೆ ನೋವು ತಿಂತಿರುತ್ತೆ ಅಂತ ಹಂಸಲೇಖ ದರ್ಶನ್ ಪರ ಕನಿಕರದ ಮಾತುಗಳನ್ನಾಡಿದ್ದಾರೆ.
ದರ್ಶನ್ ನಿಂದ ಕನ್ನಡ ಚಿತ್ರರಂಗ ಎಷ್ಟು ಕೀರ್ತಿ ಪಡೆದಿತ್ತು, ಎಷ್ಟು ಪ್ರಶಸ್ತಿ ಪಡೆದುಕೊಂಡಿತ್ತು. ಮೇಲಿದ್ದವರು ಕೆಳಗೆ ಬೀಳಲೇ ಬೇಕು ಎಂಬಂತಹ ಮಾತಿದೆ. ಆದ್ರೆ ಹಾಗಾಗೋದು ಬೇಡ. ಕೆಳಗೆ ಬಿದ್ದರೂ ಮೇಲೆಳಲು ಸಾಧ್ಯವಿದೆ ಅಂತ ಹಂಸಲೇಖ ಅಭಿಪ್ರಾಯ ಪಟ್ಟಿದ್ದಾರೆ.
ಸಿನಿಮಾ ಕಲಾವಿದರು ಸಿಟ್ಟು ಹಾಗೂ ಕೋಪವನ್ನು ಜೀವನದಲ್ಲಿ ರೂಢಿಸಿಕೊಳ್ಳಬಾರದು ಎಂದು ಹಂಸಲೇಖ ಸಲಹೆ ನೀಡಿದ್ದಾರೆ. “ನಾವು ಯೋಚನೆ ಮಾಡಬೇಕು. ಅದರಲ್ಲೂ ನಾನು ಸಿನಿಮಾ ಕಲಾವಿದರು. ನಾನು ಸಿಟ್ಟನ್ನು ಸ್ಕ್ರಿಪ್ಟ್ ಮಾಡಬೇಕು. ದ್ವೇಷ ಇದೆಯಲ್ಲ ಅದನ್ನು ಕ್ಯಾರೆಕ್ಟರ್ ಮಾಡಬೇಕು. ಸಿಟ್ಟು ಅಂದರೆ ಅದೊಂದು ಸ್ಕ್ರಿಪ್ಟ್ ಕಣಯ್ಯ. ದ್ವೇಷ ಅಂದರೆ ಅದು ಕ್ಯಾರೆಕ್ಟರ್ ಅಯ್ಯ. ಆತರ ಸಿನಿಮಾದಲ್ಲಿ ತೋರಿಸಬೇಕಷ್ಟೆ. ನಿಜ ಜೀವನದಲ್ಲಿ ಸ್ಕ್ರಿಪ್ಟ್ ತರಬಾರದು. ನಿಜ ಜೀವನದಲ್ಲಿ ಕ್ಯಾರೆಕ್ಟರ್ ಅನ್ನು ತರಬಾರದು. ಇದು ಕಲಾವಿದರ ಕರ್ತವ್ಯ.” ಎಂದು ಹಂಸಲೇಖ ಹೇಳಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA


