ಗಣೇಶ್ ಮತ್ತು ರಮೇಶ್ ಅರವಿಂದ್ ಮೊದಲ ಬಾರಿ ಒಟ್ಟಿಗೆ ಸಿನಿಮಾ ಒಂದರಲ್ಲಿ ನಟಿಸಲಿದ್ದಾರೆ. ಈ ಇಬ್ಬರು ನಾಯಕರನ್ನು ಒಟ್ಟಿಗೆ ಸೇರಿಸಿದ್ದು ನಿರ್ದೇಶಕ ವಿಖ್ಯಾತ್ ಎ.ಆರ್., ಸಿನಿಮಾವನ್ನು ಸತ್ಯ ರಾಯಲ ನಿರ್ಮಾಣ ಮಾಡಲಿದ್ದಾರೆ.
ನಿರ್ದೇಶಕ ವಿಖ್ಯಾತ್ ಎ.ಆರ್., ಮೊದಲ ಬಾರಿಗೆ ಗಣೇಶ್ ಹಾಗೂ ರಮೇಶ್ ಅವರನ್ನು ಒಟ್ಟಿಗೆ ತೆರೆಗೆ ತರುತ್ತಿದ್ದಾರೆ. ಇಬ್ಬರ ಇಮೇಜಿಗೂ ಒಪ್ಪಿಗೆ ಆಗುವ ಕತೆಯೊಂದನ್ನು ನಿರ್ದೇಶಕ ವಿಖ್ಯಾತ್ ತಯಾರಿಸಿಕೊಂಡಿದ್ದು, ಸಿನಿಮಾ ಮಾಡುತ್ತಿದ್ದಾರೆ. ಸಿನಿಮಾಕ್ಕೆ ಇನ್ನೂ ಹೆಸರಿಟ್ಟಿಲ್ಲ. ಸಿನಿಮಾದ ಹೆಸರು ಮೊದಲ ಲುಕ್ ಆಗಸ್ಟ್ 16ಕ್ಕೆ ತೆರೆಗೆ ಬರಲಿದೆ.
ಸಿನಿಮಾದ ಘೋಷಣೆಗಾಗಿ ಪೋಸ್ಟರ್ ಒಂದನ್ನು ಇದೀಗ ಬಿಡುಗಡೆ ಮಾಡಿದ್ದು, ಪೋಸ್ಟರ್ನಲ್ಲಿ ರಮೇಶ್ ಹಾಗೂ ಗಣೇಶ್ರ ಹಳೆಯ ಚಿತ್ರಗಳನ್ನು ಬಳಸಿಕೊಳ್ಳಲಾಗಿದೆ. ಕಾಗದ ಪತ್ರದ ಮೇಲೆ ಸಿನಿಮಾದ ಘೋಷಣೆ ಮಾಡಲಾಗಿದೆ. ಕಾಗದಕ್ಕೆ 19 ಫೆಬ್ರವರಿ 46ರ ವರ್ಷದ ಸೀಲ್ ಇದೆ. ಶಾಂಘಾಯ್ ದೇಶದ ಹೆಸರು ಸಹ ಸೀಲ್ ಮೇಲಿದೆ. ಸೀಲ್ ನಲ್ಲಿ ವಿಮಾನದ ಚಿತ್ರವೂ ಇದೆ. ಇದೆಲ್ಲವೂ ಈ ಸಿನಿಮಾ 40ರ ದಶಕದಲ್ಲಿ ನಡೆಯುವ ಕತೆ ಇರಬಹುದೆಂಬ ಸುಳಿವು ನೀಡುತ್ತಿವೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA


