ಭಾರತೀಯ ಕ್ರಿಕೆಟ್ ಪ್ರೇಮಿಗಳು ಮುಂಬರುವ ಐಪಿಎಲ್ ಮೆಗಾ ಹರಾಜಿನ ಮೇಲೆ ಗಮನಹರಿಸಿದ್ದಾರೆ. ಹಾಗಾದರೆ, ಐಪಿಎಲ್ 2025ರ ಆವೃತ್ತಿಗಾಗಿ ಮೆಗಾ ಹರಾಜು ದಿನಾಂಕ ಯಾವುದು ಮತ್ತು ಎಲ್ಲಿ ನಡೆಯಬಹುದು? ಎಂಬುದರ ಕುರಿತು ನೀವು ತಿಳಿದುಕೊಳ್ಳಬೇಕಾದದ್ದು ಮಾಹಿತಿ ಇಲ್ಲಿದೆ.
ಮುಂದಿನ ಐಪಿಎಲ್ ಮೆಗಾ ಹರಾಜು 2022ರಂತೆ ಎರಡು ದಿನಗಳ ಪ್ರಕ್ರಿಯೆಯಾಗುವ ಸಾಧ್ಯತೆಯಿದೆ. 2022ರ ಫೆಬ್ರವರಿಯಲ್ಲಿ ಮೆಗಾ ಹರಾಜು ನಡೆಸಲಾಗಿತ್ತು. ಆ ನಂತರ 2023 ಮತ್ತು 2024ರ ಆವೃತ್ತಿಗಾಗಿ ಮಿನಿ ಹರಾಜುಗಳನ್ನು ಆಯಾ ವರ್ಷಗಳ ಡಿಸೆಂಬರ್‌ನಲ್ಲಿ ನಡೆಸಲಾಯಿತು.ಹೀಗಾಗಿ, ಇದೀಗ 2025ರ ಐಪಿಎಲ್‌ಗಾಗಿ ಮೆಗಾ ಹರಾಜು ದಿನಾಂಕವು ಬಹುಶಃ 2024ರ ಡಿಸೆಂಬರ್ ಮತ್ತು 2025ರ ಫೆಬ್ರವರಿ ನಡುವೆ ಅದೇ ಸಮಯದಲ್ಲಿ ನಡೆಯಬಹುದು.
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಅಧ್ಯಕ್ಷ ಅರುಣ್ ಧುಮಾಲ್ ಅವರು ಐಪಿಎಲ್ 2025ರ ಮೊದಲು ಮೆಗಾ ಹರಾಜು ನಡೆಯಲಿದೆ ಎಂದು ಖಚಿತಪಡಿಸಿದ್ದಾರೆ. 2025ರ ಐಪಿಎಲ್ ಮೆಗಾ ಹರಾಜು ನಡೆಯುವ ಸ್ಥಳವನ್ನು ಬಿಸಿಸಿಐ ಶೀಘ್ರದಲ್ಲೇ ಪ್ರಕಟಿಸಲಿದೆ. ಐಪಿಎಲ್ 2025ರ ಮೆಗಾ ಹರಾಜಿಗಾಗಿ ಪ್ರತಿ ಫ್ರಾಂಚೈಸಿ ಪರ್ಸ್ ಮೊತ್ತದ ಮಿತಿ ಸುಮಾರು 110-120 ಕೋಟಿ ರೂಪಾಯಿಗಳಾಗಬಹುದು ಎಂದು ಕ್ರಿಕ್ ಬಜ್ ತಿಳಿಸಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA


