ಕಲಬುರಗಿ ಜಿಲ್ಲೆಯ ವ್ಯಕ್ತಿಯೊಬ್ಬರ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ದೇಬಲ ಗಾಣಗಾಪುರದಲ್ಲಿ ನಡೆದಿದೆ.
ಮಹೇಶ್ ಕೋಲತೆ (29) ಎಂಬಾತ ಹತ್ಯೆಗೀಡಾದ ಯುವಕನಾಗಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಮೂಲದ ಆರೋಪಿ ನವನಾತ್ ಮಹಾಪೂರೆ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಜೂನ್ 25ರಂದು ಈ ಕೊಲೆ ನಡೆದಿದೆ, ಆರೋಪಿಯನ್ನು ಈಗ ಬಂಧಿಸಲಾಗಿದೆ. ಆರೋಪಿ ನವನಾತ್ ಮಹಾಪೂರೆಗೆ ಕುಡಿತದ ಚಟ ಹೊಂದಿದ್ದು, ಕುಡಿತಕ್ಕೆ ಹಣ ಇಲ್ಲದಿದ್ದರಿಂದ ಕೊಲೆ ಮಾಡಿ ಕೊಲೆಯಾದವನ ಬಳಿ ಇದ್ದ 3,600 ರೂಪಾಯಿ ದೋಚಿ ಪರಾರಿಯಾಗಿದ್ದ ಎನ್ನಲಾಗಿದೆ.
ಪೊಲೀಸರು ಮಹಾರಾಷ್ಟ್ರದ ದುದನಿ ಬಳಿ ಆರೋಪಿ ನವನಾತ್ ಮಹಾಪೂರೆನನ್ನು ಬಂಧಿಸಿದ್ದಾರೆ. ದೇವಲ ಗಾಣಗಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


