ಕನ್ನಡ ಸಾಹಿತ್ಯ ಪರಿಷತ್ತು (ಕಸಾಪ) ಶತಮಾನವನ್ನು ಕಂಡಿರುವ ಕನ್ನಡಿಗರ ಮಾತೃಸಂಸ್ಥೆ. ಕನ್ನಡ ಸಾಹಿತ್ಯ ಪರಿಷತ್ತಿನ ಬೆಂಗಳೂರು ಕೇಂದ್ರ ಕಛೇರಿಯಲ್ಲಿ ಲಭ್ಯವಿರುವ ಕೆಳಕಂಡ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳು ಬೇಕಾಗಿದ್ದಾರೆ.
ಗಣಕ ಸಹಾಯಕರು – ಕಂಪ್ಯೂಟರಿನ ಪ್ರಾಥಮಿಕ ತಿಳಿವಳಿಕೆ ಹೊಂದಿರ ಬೇಕು, ಕನ್ನಡವನ್ನು ತಪ್ಪಿಲ್ಲದೆ ಬೆರಳಚ್ಚು ಮಾಡಲು ಬರಬೇಕು. ಪುಟ ವಿನ್ಯಾಸ – ಕಛೇರಿ ಪತ್ರ ವ್ಯವಹಾರದ ತಿಳಿವಳಿಕೆ ಅಪೇಕ್ಷಣೀಯ
* ಕಛೇರಿ ಸಹಾಯಕರು – ಕಂಪ್ಯೂಟರಿನ ಪ್ರಾಥಮಿಕ ತಿಳಿವಳಿಕೆ, ಕನ್ನಡದಲ್ಲಿ ಸಂವಹನ ನಡೆಸುವ ಕೌಶಲ್ಯ, ಕಛೇರಿ ಕಾರ್ಯ ನಿರ್ವಹಣೆ ಕುರಿತ ತಿಳುವಳಿಕೆ ಅಪೇಕ್ಷಣೀಯ.
* ಲೆಕ್ಕ ಪತ್ರ ಸಹಾಯಕರು – ಕಂಪ್ಯೂಟರ್ ಜ್ಞಾನದ ಜೊತೆಗೆ ಟ್ಯಾಲಿ ಗೊತ್ತಿರ ಬೇಕು, ಲೆಕ್ಕ ಪತ್ರ ನಿರ್ವಹಿಸಿರುವ ಅನುಭವ ಇರಬೇಕು.
* ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣಗಳಿಗೆ ತಾಂತ್ರಿಕ ನಿರ್ವಾಹಕರು – ಸಭಾಂಗಣಗಳ ಧ್ವನಿ ಮತ್ತು ಬೆಳಕಿನ ನಿರ್ವಹಣೆಯಲ್ಲಿ ಪರಿಣಿತಿಯನ್ನು ಪಡೆದಿರಬೇಕು.
ಈ ಉದ್ಯೋಗವು ತಾತ್ಕಾಲಿಕವಾದದ್ದಾಗಿರುತ್ತದೆ. ಸಂಪೂರ್ಣವಾಗಿ ಕನ್ನಡವನ್ನು ಓದಲು – ಬರೆಯಲು ಮತ್ತು ಸಂವಹನ ನಡೆಸಲು ಬರುವವರಿಗೆ ಮಾತ್ರ ಅವಕಾಶ. ಇದು ಕನ್ನಡದ ಮೇಲಿನ ಪ್ರೀತಿ ಮತ್ತು ಗೌರವದಿಂದ ಮಾಡುವ ಕೆಲಸವಾಗಿದ್ದು ಇಲ್ಲಿ ಗೌರವ ಧನವನ್ನು ನೀಡಲಾಗುವುದು. ಯುವಕರಿಗೆ ಆದ್ಯತೆ ಇದ್ದರೂ ಇತ್ತೀಚೆಗೆ ನಿವೃತ್ತಿಯಾದವರೂ ಅರ್ಜಿ ಸಲ್ಲಿಸ ಬಹುದು, ಸಮಂಜಸ ವೃತ್ತಿ ಅನುಭವವನ್ನು ಇಂತಹ ಸಂದರ್ಭದಲ್ಲಿ ಪರಿಗಣಿಸಲಾಗುವುದು.
ಬೆಂಗಳೂರು ವಾಸಿಯವಾಗಿರುವ ಅರ್ಹ ಅರ್ಜಿದಾರರು ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರ ಕಛೇರಿಯಿಂದ ಅರ್ಜಿಯನ್ನು ಜುಲೈ 15ರೊಳಗೆ ಪಡೆದು ಭರ್ತಿ ಮಾಡಿ, ಜುಲೈ 31ರೊಳಗೆ ಖುದ್ದಾಗಿ ಸಲ್ಲಿಸ ಬಹುದು, ಇಲ್ಲವೆ ‘ಅಧ್ಯರಕ್ಷರು, ಕನ್ನಡ ಸಾಹಿತ್ಯ ಪರಿಷತ್ತು, ಪಂಪ ಮಹಾಕವಿ ರಸ್ತೆ, ಚಾಮರಾಜ ಪೇಟೆ, ಬೆಂಗಳೂರು-18’ ಇಲ್ಲಿಗೆ ತಲಪುವಂತೆ ಕಳುಹಿಸಬೇಕು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


