ಅಭಿವೃದ್ಧಿ ಹೆಸರಲ್ಲಿ ಸಿಲಿಕಾನ್ ಸಿಟಿ ದಿನದಿಂದ ದಿನಕ್ಕೆ ಹದಗೆಡುತ್ತಿದೆ. ಎಲ್ಲಿ ನೋಡಿದರಲ್ಲಿ ಕಟ್ಟಡಗಳು, ವಾಹನಗಳ ಸಂಖ್ಯೆ ಏರುತ್ತಿದೆ. ಇದರಿಂದ ಬೆಂಗಳೂರಿಗರು ಶುದ್ಧಗಾಳಿ ಕೊರತೆ ಉಲ್ಭಣವಾಗಿದೆ. ವಾಯುಮಾಲಿನ್ಯದಿಂದಾಗಿ ರಾಜಧಾನಿಯಲ್ಲಿ ಸಾವಿನ ಸಂಖ್ಯೆ ಏರಿಕೆಯಾಗಿದೆ.
ಭಾರತದ 10 ಮಹಾನಗರಗಳಲ್ಲಿ ವಾಯುಮಾಲಿನ್ಯದ ಪ್ರಮಾಣದ ಬಗ್ಗೆ ಅಧ್ಯಯನ ಮಾಡಲಾಗಿತ್ತು. ಅದರಲ್ಲಿ ದೆಹಲಿ ಸೇರಿದಂತೆ ಬೆಂಗಳೂರು, ಅಹಮದಾಬಾದ್, ಚೆನ್ನೈ, ದಿಲ್ಲಿ, ಹೈದರಾಬಾದ್, ಕೋಲ್ಕತಾ, ಮುಂಬೈ, ಪುಣೆ, ಶಿಮ್ಲಾ ಮತ್ತು ವಾರಾಣಸಿ ಮಹಾನಗರಗಳ ಹೆಸರು ಕೇಳಿ ಬಂದಿದೆ. ಇವಿಷ್ಟು ನಗರಗಳಲ್ಲಿ ಪ್ರತಿವರ್ಷ 33 ಸಾವಿರಕ್ಕೂ ಅಧಿಕ ಮಂದಿ ಮೃತಪಟ್ಟಿರುವುದು ದಾಖಲಾಗಿದೆ.
ಆಶ್ಚರ್ಯದ ಸಂಗತಿ ಏನಂದರೆ ಉತ್ತಮ ವಾತಾವರಣ ಹೊಂದಿದ್ದ ಬೆಂಗಳೂರಿನಲ್ಲಿ ವಾಯುಮಾಲಿನ್ಯದಿಂದ ವರ್ಷಕ್ಕೆ 2100 ಮಂದಿ ಸಾವನ್ನಪ್ಪುತ್ತಿರುವುದು ಎಲ್ಲರ ಹುಬ್ಬೇರಿಸುವಂತೆ ಮಾಡಿದೆ.
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ವಾಯುಮಾಲಿನ್ಯ ಗುಣಮಟ್ಟದ ಮಾರ್ಗಸೂಚಿಗಿಂತಲೂ ಈ ಮಹಾನಗರಗಳು ಕೆಳಮಟ್ಟದಲ್ಲಿಯೇ ಗುಣಮಟ್ಟ ಮುಂದುವರಿದಿದೆ. ಬೆಂಗಳೂರಿನಲ್ಲಿ ಮುಂದಿನ ದಿನಗಳಲ್ಲಿ ವಾಯುಮಾಲಿನ್ಯ ಸುಧಾರಣೆಯಾಗದಿದ್ರೆ, ದೆಹಲಿಯನ್ನೇ ಮೀರಿಸುವ ಸಾಧ್ಯತೆ ಇದೆ.
ನಗರದಲ್ಲಿ ವಾಯುಮಾಲಿನ್ಯ, ಶಬ್ದ ಮಾಲಿನ್ಯ, ಜಲ ಮಾಲಿನ್ಯದಿಂದ ಕಾಯಿಲೆಗಳು ಹೆಚ್ಚಾಗುತ್ತಿದ್ದು, ಹೃದಯ ಸಂಬಂಧಿ ಕಾಯಿಲೆಗಳು ಅಧಿಕವಾಗಿದೆ. ಬೆಂಗಳೂರಿನಲ್ಲಿ ಮೊದಲು ಹಸಿರೀಕರಣ ಹೆಚ್ಚಾಗಬೇಕು. ಇದು ಹೆಚ್ಚಾದಾಗ ಮಾತ್ರ ಕಾಯಿಲೆಗಳು ಹೆಚ್ಚಾಗುವುದನ್ನ ತಡೆಯಬಹುದು ಎಂದು ಡಾಕ್ಟರ್ಗಳು ಸಲಹೆ ನೀಡಿದ್ದಾರೆ.
ಬಾಪುಜಿ ನಗರ – 57%, ಬೊಮ್ಮನಹಳ್ಳಿ – 42%, ಬ್ರಿಗೇಡ್ ರೋಡ್ – 57%, ಬಿಟಿಎಂ ಲೇಔಟ್ – 57%, ಸಿಟಿ ರೈಲ್ವೆ ಸ್ಡೇಷನ್ – 66%, ಹೆಬ್ಬಾಳ – 68 %, ಕೋರಮಂಗಲ – 60%, ವೈಟ್ ಫೀಲ್ಡ್ – 57% ರಷ್ಟು ಜನ ಮಾಲಿನ್ಯದಿಂದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


