ರಾಜ್ಯದಲ್ಲಿ ಒಂದು ಕಡೆ ಡೆಂಘಿ ಕಾಟ. ಇನ್ನೊಂದೆಡೆ ಝೀಕಾ ವೈರಸ್ ಆತಂಕ. ಈ ಎಲ್ಲಾ ಕಂಟಕಗಳ ನಡುವೆ ರಾಜ್ಯದಲ್ಲಿ ನಕಲಿ ವೈದ್ಯರ ಹಾವಳಿಯಿಂದ ಜನ ಕಂಗಾಲಾಗಿದ್ದಾರೆ
ಬಾಗಲಕೋಟೆಯ ಎಸ್ ಪಿ ಅಮರನಾಥ ರೆಡ್ಡಿ ಗುಪ್ತ ಮಾಹಿತಿ ಸಂಗ್ರಹಿಸಿದ್ದು, ಜಿಲ್ಲೆಯಲ್ಲಿ ಬರೋಬ್ಬರಿ 384 ಜನ ನಕಲಿ ವೈದ್ಯರಿರುವ ಮಾಹಿತಿ ದೊರಕಿದೆ.
ಗರ್ಭಪಾತ ದಂಧೆ ಜಾಡು ಹಿಡಿದ ಪೊಲೀಸರು ನಿರಂತರ ಪರಿಶೀಲನೆ ನಡೆಸಿದ್ದು, ಈ ವೇಳೆ 384 ಜನ ನಕಲಿ ವೈದ್ಯರು ಪತ್ತೆಯಾಗಿದ್ದಾರೆ. ಇವರೆಲ್ಲರೂ ಕೇವಲ ಎಸ್ ಎಸ್ ಎಲ್ ಸಿ, ಪಿಯುಸಿ, ಬಿಎ, ಬಿಕಾಮ್, ಟಿಸಿಹೆಚ್, ಐಟಿಐ ಓದಿ ಡಾಕ್ಟರ್ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ
ಮಾಹಿತಿ ಸಂಗ್ರಹದ ವೇಳೆ ಸ್ಫೋಟಕ ವಿಚಾರಗಳು ಹೊರ ಬಂದಿದ್ದು, ಈ ಹಿಂದೆ ಗರ್ಭಪಾತ ಮಾಡಿಸಿ ಮಹಿಳೆಯ ಸಾವಿಗೆ ಕಾರಣಕರ್ತಳಾದ ವೈದ್ಯೆ ಕವಿತಾ ಬಾಡನವರ ಕೇವಲ ದ್ವಿತೀಯ ಪಿಯುಸಿ ಓದಿದ್ದಳು ಎಂಬ ವಿಚಾರ ಬೆಳಕಿಗೆ ಬಂದಿದೆ.
ಸದ್ಯ ಕವಿತಾ ಗರ್ಭಪಾತ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಪೊಲೀಸರು ಆಕೆಯನ್ನು ಬಂಧಿಸಿದ್ದರು. ಜೊತೆಗೆ ಆಕೆ ಕೆಲಸ ಮಾಡುತ್ತಿದ್ದ ಸುರೇಖಾ ಚರಕಿ ನಕಲಿ ಆಸ್ಪತ್ರೆ ಮೇಲೆ ಕೂಡ ಅಧಿಕಾರಿಗಳು ದಾಳಿ ನಡೆಸಲಾಗಿತ್ತು.
ಜೂನ್ 18 ರಂದು ಅಧಿಕಾರಿಗಳು ಆಸ್ಪತ್ರೆಯ ಜೊತೆ ಮನೆಯ ಮೇಲೂ ದಾಳಿ ನಡೆಸಿದ್ದು, ಈ ವೇಳೆ ಗರ್ಭಪಾತಕ್ಕೆ ಬಳಸುವ ಮಾತ್ರೆ , ಟಾನಿಕ್, ವಿಟಾಮಿನ್, ನಿದ್ದೆ ಮಾತ್ರೆ, ಕೈಗವಸು ಸ್ಟೆಥೆಸ್ಕೋಪ್, ಸಲಾಯಿನ್, ಇಂಜೆಕ್ಷನ್ ಇತರೆ ಎಲೆಕ್ಟ್ರಾನಿಕ್ ವಸ್ತು ಪತ್ತೆಯಾಗಿದ್ದವು.
ಇನ್ನು ಯಾವ ಯಾವ ಜಿಲ್ಲೆಯಲ್ಲಿ ನಕಲಿ ವೈದ್ಯರು ಪತೆಯಾಗಿದ್ದಾರೆ ಎಂದು ನೋಡುವುದಾದರೆ:
* ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಸಾವಳಗಿ ವ್ಯಾಪ್ತಿಯಲ್ಲಿ 60 ಜನ ನಕಲಿ ವೈದ್ಯರು..
* ಬೀಳಗಿ ಠಾಣೆ ವ್ಯಾಪ್ತಿಯಲ್ಲಿ 39 ವೈದ್ಯರು
* ಮುಧೋಳ ಠಾಣೆ ವ್ಯಾಪ್ತಿಯಲ್ಲಿ 37 ವೈದ್ಯರು
* ಕಲಾದಗಿ ಠಾಣೆ ವ್ಯಾಪ್ತಿಯಲ್ಲಿ 29 ವೈದ್ಯರು
* 50 ಕ್ಕೂ ಹೆಚ್ಚು ಬಿಎಎಮ್ ಎಸ್ ವೈದ್ಯರಿಂದ ಅಲೋಪಥಿ ಚಿಕಿತ್ಸೆ ನೀಡಲಾಗುತ್ತಿತ್ತು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


