ಬೆಂಗಳೂರಿನ ಆಟೋ ಚಾಲಕರಿಗೆ ಕರ್ನಾಟಕ ಸರ್ಕಾರ ಸಿಹಿಸುದ್ದಿ ನೀಡಿದೆ. ಬೆಂಗಳೂರು ನಗರದಲ್ಲಿ ಆಟೋಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗಲಿದೆ. ಹೊಸ ಆಟೋ ಪರ್ಮಿಟ್ ಪಡೆಯಲು ಸರ್ಕಾರ ಷರತ್ತುಗಳನ್ನು ಸಹ ನಿಗದಿ ಮಾಡಿದೆ.
ಸರ್ಕಾರ ಹೊಸ ಆಟೋ ಪರ್ಮಿಟ್ ಪಡೆಯುವ ಸಂಖ್ಯೆಯನ್ನು 1.55 ಲಕ್ಷದಿಂದ 2.55ಕ್ಕೆ ಏರಿಕೆ ಮಾಡಿದೆ. ಮುಂದಿನ 5 ವರ್ಷಗಳಿಗೆ ಇದು ಅನ್ವಯವಾಗಲಿದೆ ಎಂದು ವಿಶೇಷ ರಾಜ್ಯಪತ್ರದಲ್ಲಿ ಪ್ರಕಟಿಸಿದೆ. ಜನಸಂಖ್ಯೆ ಹೆಚ್ಚಾದಂತೆ ನಗರದಲ್ಲಿ ಹೊಸ ಆಟೋ ಪರ್ಮಿಟ್ ಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ ಎಂದು ಸರ್ಕಾರ ಹೇಳಿದೆ. ಆದರೆ ಇದಕ್ಕೆ ಷರತ್ತುಗಳು ಅನ್ವಯ ಎಂದು ಸ್ಪಷ್ಟಪಡಿಸಲಾಗಿದೆ.
ಹಸಿರು ಆಟೋ ರಿಕ್ಷಾಗಳಿಗೆ ಮಾತ್ರ ಪರ್ಮಿಟ್ ನೀಡಬೇಕು. ಬಿಎಸ್–6 ಇಂಜಿನ್ ಹೊಂದಿರುವ ಪ್ರಮಾಣೀಕೃತ ಎಲ್ ಪಿಜಿ/ ಸಿಎನ್ ಜಿ/ ಎಲೆಕ್ಟ್ರಿಕ್ ಕಿಟ್ ಮತ್ತು ಡಿಜಿಟರ್ ದರದ ಮೀಟರ್‌ಗಳನ್ನು ಆಟೋಗಳು ಹೊಂದಿರಬೇಕು.
ಈಗಾಗಲೇ ಆಟೋ ರಿಕ್ಷಾ ಚಾಲನೆ ಪರ್ಮಿಟ್ ಹೊಂದಿರುವ ಯಾವುದೇ ಚಾಲಕರಿಗೆ ಹೊಸದಾಗಿ ಪರ್ಮಿಟ್ ನೀಡಬಾರದು. ಅರ್ಜಿ ಸಲ್ಲಿಕೆ ಸಂದರ್ಭದಲ್ಲಿ ಸರಿಯಾದ ದಾಖಲೆಗಳನ್ನು ಪರಿಶೀಲನೆ ಮಾಡಬೇಕು.
ಆಧಾರ್ ಕಾರ್ಡ್, ವೋಟರ್ ಐಡಿ, ರೇಷನ್ ಕಾರ್ಡ್, ಪಾನ್ ಕಾರ್ಡ್‌ಗಳನ್ನು ಪರ್ಮಿಟ್ ನೀಡುವ ಸಂದರ್ಭದಲ್ಲಿ ದಾಖಲೆಗಳನ್ನಾಗಿ ಪರಿಗಣಿಸಬಹುದು. ಅರ್ಜಿ ಸಲ್ಲಿಕೆ ಮಾಡುವವರು ಮಾನ್ಯತೆ ಪಡೆದ ಡ್ರೈವಿಂಗ್ ಲೈಸೆನ್ಸ್ ಹೊಂದಿರಬೇಕು ಎಂದು ಸಾರಿಗೆ ಇಲಾಖೆ ಷರತ್ತುಗಳನ್ನು ಹಾಕಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


