ಮಧ್ಯಮ ಮತ್ತು ಕೆಳ ಮಧ್ಯಮ ವರ್ಗದ ಜನರು ಬಾಡಿಗೆ ಮನೆಯನ್ನೇ ಆಶ್ರಯಿಸಿಕೊಂಡಿರುತ್ತಾರೆ. ಒಂದು ಮನೆ ಹುಡುಕಿ ವಾಸ ಮಾಡುತ್ತ ದಿನ ಕಳೆಯುತ್ತಿರುತ್ತಾರೆ. ಆದರೆ ಕೆಲವೊಂದು ಸಂದರ್ಭದಲ್ಲಿ ಮನೆ ಮಾಲೀಕರ ಕಿರಿ ಕಿರಿ ವಿಪರೀತವಾಗಿ ಹೋಗುತ್ತದೆ.
ಹಾಗಿದ್ದರೆ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿರುವ ಬಾಡಿಗೆದಾರರ ಹಕ್ಕುಗಳು ಏನು?
ಅನಗತ್ಯ ಮೇಂಟೆನೆನ್ಸ್ ಚಾರ್ಜ್ ಮತ್ತು ಸೊಸೈಟಿ ಫೀ ನಿಮಗೂ ವಿಧಿಸಿದ್ದರೆ, ನೀವು ಅದನ್ನು ಪ್ರತಿರೋಧಿಸಬೇಕು. ನಿಮ್ಮ ಒಟ್ಟು ಬಾಡಿಗೆಗೆ ಹೋಲಿಸಿದರೆ 50% ಕ್ಕಿಂತ ಹೆಚ್ಚು ಹಣವನ್ನು ಮೇಂಟೆನೆನ್ಸ್ ಗೆ ಅಂತ ವಿಧಿಸಿದ್ದರೆ ಅದು ಅಕ್ರಮ. ಬಾಡಿಗೆದಾರರಿಂದ ಮೇಂಟೆನೆನ್ಸ್ ಗೆ ಅಂತ ಪಡೆದ ಹಣದಿಂದ ಮಾಲೀಕರು ಲಾಭ ಮಾಡಿಕೊಳ್ಳುವಂತಿಲ್ಲ. ಯಾವುದೇ ಶುಲ್ಕವನ್ನು ಕಟ್ಟಿ ಎಂದು ಮಾಲೀಕರು ಬಾಡಿಗೆದಾರರಿಗೆ ಹೇಳುವಂತಿಲ್ಲ.
ಮಾಲೀಕರು ಬಾಡಿಗೆ ಹೆಚ್ಚಳ ಮಾಡಬೇಕು ಎಂದಾದರೆ, ಬಾಡಿಗೆದಾರರಿಗೆ 3 ತಿಂಗಳು ಮೊದಲೇ ಸೂಚನೆ ನೀಡಿದ ನಂತರವೇ ಏರಿಕೆ ಮಾಡಬಹುದು. ಒಂದು ವರ್ಷಕ್ಕೂ ಹೆಚ್ಚು ಕಾಲದವರೆಗೆ ಬಾಡಿಗೆಗೆ ವಾಸಿಸುತ್ತೀರಿ ಎಂದಾದರೆ ಬಾಡಿಗೆ ಕರಾರನ್ನು ನೋಂದಣಿ ಮಾಡಿಕೊಳ್ಳಬೇಕು.
ನೀವು ಟೆನನ್ಸಿ ಹಕ್ಕುಗಳನ್ನು ಹೊಂದಿರುವ ಜೊತೆಗೆ ನಿಮ್ಮ ಜೊತೆ ವಾಸಿಸುತ್ತಿರುವ ನಿಮ್ಮ ಕುಟುಂಬದ ಸದಸ್ಯರಿಗೂ ಈ ಹಕ್ಕುಗಳು ಇರುತ್ತವೆ. ಬಾಡಿಗೆದಾರ ಮರಣ ಹೊಂದಿದರೆ ಅವರ ಮಗ, ಮಗಳು ಅಥವಾ ಸಂಗಾತಿ ಅಥವಾ ಜತೆಗೆ ಪಾಲಕರಿಗೂ ಇದೇ ಹಕ್ಕುಗಳು ಇರುತ್ತವೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


