ನಟ ದರ್ಶನ್ ಕನ್ನಡದ ಸ್ಟಾರ್ ನಟ. ಕೋಟಿ ಕೋಟಿ ಸಂಭಾವನೆ ಪಡೆಯುವ ಈ ನಟನ ಸಹೋದರ ದಿನಕರ್ ತೂಗುದೀಪ ಇನ್ನೂ ಬಾಡಿಗೆ ಮನೆಯಲ್ಲಿಯೇ ವಾಸವಿದ್ದಾರೆ. ಈ ನಡುವೆ ದರ್ಶನ್ ಗೆಳತಿ ಪವಿತ್ರಾ ಗೌಡ ಮೂರಂತಸ್ತಿನ ಸ್ವಂತ ಐಶಾರಾಮಿ ಬಂಗಲೆಯಲ್ಲಿದ್ದಾರೆ. ಈ ಎರಡು ವಿಚಾರ ನಟ ದರ್ಶನ್ ಜೈಲಿಗೆ ಹೋದ ಬಳಿಕ ಚರ್ಚೆಯ ಮುನ್ನೆಲೆಗೆ ಬಂದಿವೆ. ಸಹೋದರನಿಗೆ ಒಂದು ಮನೆ ಕಟ್ಟಿಸಿಕೊಡದ ದರ್ಶನ್, ಪವಿತ್ರಾ ಗೌಡಗೆ ಮೂರಂತಸ್ತಿನ ಬಂಗಲೆ ಕಟ್ಟಿಸಿಕೊಟ್ಟಿದ್ದಾರೆ ಎಂದೇ ಮಾತನಾಡಿಕೊಳ್ಳುತ್ತಿದ್ದಾರೆ.
ನಟ ದರ್ಶನ್ ಅವರ ಸಹೋದರ ದಿನಕರ್ ತೂಗುದೀಪ ಅವರು ಸಾರಥಿ ಚಿತ್ರದ ಮೂಲಕ ಕನ್ನಡ ಸಿನಿಪ್ರೇಮಿಗಳ ಮನಸ್ಸಿಗೆ ಬಹಳಷ್ಟು ಹತ್ತಿರವಾದರು. ನಿರ್ದೇಶಕ ದಿನಕರ್ ಇನ್ನೂ ಬಾಡಿಗೆ ಮನೆಯಲ್ಲಿ ಇದ್ದಾರೆ. ಕನ್ನಡದ ಸೂಪರ್ ಸ್ಟಾರ್ ದರ್ಶನ್ ತಮ್ಮನಾಗಿದ್ದರೂ ಯಾಕೆ ಅವರಿನ್ನೂ ಹಾಗೆ ಇದ್ದಾರೆ ಎಂಬುದಕ್ಕೆ ಸ್ವತಃ ದಿನಕರ್ ಅವರು ಉತ್ತರ ಕೊಟ್ಟಿದ್ದಾರೆ.
ದಿನಕರ್ ಅಮ್ಮ ಮೀನಾ ಅವರು ನೀನು ನಿನ್ನ ಸ್ವಂತ ದುಡಿಮೆಯ ಹಣದಿಂದ ಏನಾದರೂ ಮಾಡು. ಮನೆ ಕಟ್ಟುವುದಿರಲಿ, ವಾಹನ ಖರೀದಿ ಮಾಡುವುದಿರಲಿ ಎಂದಿದ್ರಂತೆ. ನನಗೆ ಅಮ್ಮನ ಮಾತು ತುಂಬಾ ಇಷ್ಟವಾಯ್ತು, ಅದು ನನ್ನ ಹೃದಯ ತಟ್ಟಿತು. ಅದಕ್ಕಾಗಿ ನಾನು ನನ್ನ ಅಮ್ಮನ ಮಾತಿನಂತೆ ನನ್ನದೇ ಹಣದಿಂದ ಮನೆ ಕಟ್ಟುತ್ತೇನೆ. ಏನೇ ಖರೀದಿ ಮಾಡುವುದಿದ್ದರೂ ಅದು ನನ್ನದೇ ಹಣದಿಂದ ಅಷ್ಟೇ.
ನಾನು ಈಗಾಗಲೇ ಸೈಟ್ ಮಾಡಿದ್ದೆ, ಮನೆ ಕಟ್ಟಲು ಶುರು ಮಾಡಿದ್ದೇನೆ. ಅದು ನನ್ನದೇ ದುಡ್ಡು, ಅಮ್ಮನ ಮಾತು..’ ಎಂದಿದ್ದಾರೆ ನಿರ್ದೇಶಕ ದಿನಕರ್ ತೂಗುದೀಪ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


