ಭೂತಾರಾಧನೆ ತುಳುನಾಡಿನ ಆರಾಧನೆಗಳಲ್ಲಿ ಪ್ರಮುಖವಾದದ್ದು, ಇದನ್ನು ‘ದೈವಾರಾಧನೆ’ ಎಂದೂ ಕರೆಯುತ್ತಾರೆ ಎಂದೂ ಕರೆಯುತ್ತಾರೆ. ದಕ್ಷಿಣ ಕನ್ನಡ, ಉಡುಪಿ, ಕೇರಳ ರಾಜ್ಯದ ಉತ್ತರ ಜಿಲ್ಲೆಗಳಲ್ಲಿ ವಿಶೇಷವಾಗಿ ಕಂಡುಬರುವ ಒಂದು ರೀತಿಯ ಆರಾಧಾನೆ. ತುಳುನಾಡ ಸಾಂಸ್ಕೃತಿಕ ಪದಕೋಶದಲ್ಲಿ ಸಾಮಾಜಿಕ ಬದುಕಿನಲ್ಲಿ ಮುಖ್ಯವಾಗಿ ತಿಳಿಯುವ ಪದ ಭೂತ.
ಭೂತ+ಆರಾಧನೆ=ಭೂತಾರಾಧನೆ. ಭೂತವನ್ನು ನಂಬಿದವರಿಗೆ ಜಯ ಕೊಡುತ್ತದೆ, ನಂಬದವನಿಗೆ ಅಪಜಯವಾಗುತ್ತದೆ(ಭೂತೊ ನಂಬಿನಕ್ಲೆಗ್ ಇಂಬು ಕೊರ್ಪುಂಡು ನಂಬಂದ್‍ನಕ್ಲೆಗ್ ಅಂಬು ಕೊರ್ಪುಂಡು) ಎಂಬ ನಂಬಿಕೆಯಿದೆ. ತುಳುವಿನ ಅಂಬು’ ಎಂಬ ಪದಕ್ಕೆ ಶಿಕ್ಷೆ ಎಂಬ ಅರ್ಥವಿರುವುದರಿಂದ ಶಿಕ್ಷೆ ಆಗದೆ ರಕ್ಷೆಗಾಗಿ ಭೂತವನ್ನು ನಂಬಿದರೆ ತಮಗೆ ಏನಾದರೂ ಒಳಿತಾಗಬಹುದೆಂದು ತುಳುನಾಡಿನ ಜನರು ನಂಬಿದ್ದಾರೆ. ಭೂತಾರಾಧನೆ ಎಂಬ ಪದ ಆರಾಧನಾ ಪರಂಪರೆಯಿಂದ ಹುಟ್ಟಿದ ಪದವಲ್ಲ. ಅದು ತೌಳವ ಸಂಸ್ಕೃತಿಯನ್ನು ಒಟ್ಟಾಗಿ ಸೂಚಿಸುವ ಪದ.
ಭೂತನೆಲೆಯ ಸ್ಥಳವನ್ನು ಭೂತಸ್ಥಾನ, ಭೂತಸಾನ ಎಂದು ಕರೆಯುತ್ತಾರೆ. ಭೂತಸ್ಥಾನಕ್ಕೆ ಅಲೆಡೆ, ಗರಡಿ, ಕಟ್ಟೆ, ತಾನೊ, ಚಾವಡಿ ಎಂಬ ಹೆಸರುಗಳೂ ಇವೆ. ಕೋಲ ಎಂದರೆ ಅಲಂಕಾರ ಎಂದರ್ಥ. ಭೂತ ವೇಷಧಾರಿಗೆ ತೊಡಿಸುವ ವಿಶೇಷ ವೇಷ ಪರಿಕರಗಳ ಬೆಡಗಿನಿಂದಾಗಿ ಸಂಬಂಧಪಟ್ಟ ಉತ್ಸವಕ್ಕೂ ಅದೇ ಹೆಸರು ಬಂದಿದೆ.
ಭೂತಾರಾಧನೆ ಸಮಯದಲ್ಲಿ ಭೂತದ ವೇಷ ಹಾಕುವವನು ಮೈಗೆ ಅಲಂಕಾರಯುಕ್ತವಾದ ವೇಷಭೂಷಣ ತೊಡುತ್ತಾರೆ. ಸ್ತ್ರೀ ಪುರುಷ ಭೂತಗಳಿಗೆ ಪ್ರತ್ಯೇಕವಾದ ವೇಷಭೂಷಣಗಳಿರುತ್ತವೆ. ಅಣಿ ಕಟ್ಟಿಕೊಂಡು ಮುಗೊಕಟ್ಟಿಕೊಂಡು, ಕೈಯಲ್ಲಿ ಸುರಿಯೆ(ಕತ್ತಿ) ಹಿಡಿದುಕೊಂಡು, ಬಿಲ್ಲ್ ಪಗರಿ(ಬಲ್ಲುಬಾಣ) ಹಿಡಿದುಕೊಂಡು,ಕಾಲಿಗೆಗಗ್ಗರೊ ಕಟ್ಟಿಕೊಂಡು ಕುಣಿಯುವ ಕಾರ್ಯಕ್ರಮಕ್ಕೆ ಭೂತಾರಾಧನೆ ಎಂದು ಕರೆಯುತ್ತಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


