ಅಪರಿಚಿತ ವ್ಯಕ್ತಿಯೊಬ್ಬರು ಕಾಳೇಘಾಟ್ ಹೋಟೆಲ್ ಮತ್ತು ಲಾಡ್ಜ್ ಮ್ಯಾನೇಜರ್ ಎಂದು ಹೆಸರು ಹೇಳಿಕೊಂಡು ಲಾಡ್ಜ್ ನಲ್ಲಿ ಹೆಂಗಸರಿಂದ ಸೆಕ್ಸ್ ಮಸಾಜ್ ಮಾಡಿಸುವುದಾಗಿ ನಂಬಿಸಿ ಆನ್ ಲೈನ್ ನಲ್ಲಿ ಹಣ ಪಡೆದು ವಂಚನೆ ಮಾಡಿರುವ ಘಟನೆ ಕುಶಾಲನಗರದಲ್ಲಿ ನಡೆದಿದೆ.
ದಿನಾಂಕ: 29-06-2024 ರಂದು Locanto App ಮೂಲಕ ಕುಶಾಲನಗರ ಟಾಪ್ ಸೆಕ್ಸ್ ಆಂಟಿ ಸರ್ವಿಸ್ ಎಂಬ ಸೈಟ್ ಮೂಲಕ ಮಂಜು ಅವರಿಗೆ ಕರೆ ಮಾಡಿ ಮೋಸ ಮಾಡಲಾಗಿದೆ ಎನ್ನಲಾಗಿದೆ.
ಕುಶಾಲನಗರದ ಕಾಳೇಘಾಟ್ ಲಾಡ್ಜ್ ಮನೇಜರ್ ಎಂದು ಯುವಕನೊಬ್ಬ ಪರಿಚಯಿಸಿಕೊಂಡು ಲಾಡ್ಜ್ ನಲ್ಲಿ ಹೆಂಗಸರಿಂದ ಸೆಕ್ಸ್/ಮಸಾಜ್ ಮಾಡಿಸಲಾಗುವುದು ಹಾಗೂ ಆನ್ ಲೈನ್ ಮೂಲಕ ಮುಂಗಡವಾಗಿ ಹಣ ಕಳುಹಿಸಿದರೆ ಈಗಲೇ ಹೆಂಗಸರ ಏರ್ಪಾಡು ಮಾಡಲಾಗುವುದು ಎಂದು ತಿಳಿಸಿದ್ದಾರೆ ಎನ್ನಲಾಗಿದೆ.
ದೂರುದಾರರ ಮೊಬೈಲ್ ಗೆ ಕೆಲವು ಹೆಂಗಸರ ಭಾವಚಿತ್ರಗಳನ್ನು ಕಳುಹಿಸಿ ಕೊಟ್ಟು ಒಂದು ಗಂಟೆಗೆ ರೂ. 1500/- ಮತ್ತು ಒಂದು ರಾತ್ರಿಗೆ ರೂ. 4000/- ಗಳ ಹಣ ನೀಡಬೇಕಾಗುವುದು ಎಂದು ಹೇಳಿದ.
ಅದರಂತೆಯೇ ದೂರುದಾರರೂ ಗೂಗಲ್ ಪೇ ಮುಖಾಂತರ ರೂ. 1500/- ಹಣವನ್ನು ಕಳುಹಿಸಿದ್ದು, ಅದೇ ವ್ಯಕ್ತಿ ಕರೆ ಮಾಡಿ ಕಾಳೇಘಾಟ್ ಲಾಡ್ಜ್ ಬಳಿ ಬಂದು ಲೋಕೇಷನ್ ಕಳುಹಿಸುವಂತೆ ಮತ್ತು ಯಾವ ಬಣ್ಣದ ಬಟ್ಟೆ ಹಾಕಿದ್ದೀರಾ ಎಂದು ತಿಳಿಸುವಂತೆ ಹೇಳಿದ್ದಾನೆ.
ಆ ವ್ಯಕ್ತಿಯು ಹೇಳಿರುವಂತೆ ಕಾಳೇಘಾಟ್ ಲಾಡ್ಜ್ ನ ಬಳಿ ಹೋಗಿ ಕರೆ ಮಾಡಿದಾಗ ಪುನಃ ಆನ್ ಲೈನ್ ನಲ್ಲಿ ಹಣ ಹಾಕಬೇಕು ಎಂದು ಹೇಳಿದ್ದರಿಂದ ಅನುಮಾನ ಬಂದು ಕಾಳೇಘಾಟ್ ಲಾಡ್ಜ್ ಗೆ ತೆರಳಿ ರಿಸೆಪ್ ಶನ್ ನಲ್ಲಿ ಈ ಬಗ್ಗೆ ವಿಚಾರಿಸಿದ್ದಾರೆ.
ಆಗ ಈ ತರಹದ ಯಾವುದೇ ರೀತಿಯ ಅವ್ಯವಹಾರ ಇಲ್ಲ ಹಾಗೂ ಇದೇ ವಿಚಾರ ಹೇಳಿಕೊಂಡು 3–4 ಜನ ಬಂದಿದ್ದರು ನಿಮಗೆ ಯಾರೋ ಮೋಸ ಮಾಡಿದ್ದಾರೆ ಪೊಲೀಸ್ ಠಾಣೆಗೆ ದೂರು ಕೊಡಿ ಎಂದು ಲಾಡ್ಜ್ ನ ಸಿಬ್ಬಂದಿ ತಿಳಿಸಿದ್ದಾರೆ.
ಈ ಬಗ್ಗೆ ಮಂಜು ಕುಶಾಲನಗರ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಆರೋಪಿಗಳ ವಿರುದ್ದ 66(ಸಿ), 66 (ಡಿ) ಐಟಿ ಆಕ್ಟ್ & 419, 420, 468 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.
ಈ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ನಿರಂತರ ಕಾರ್ಯಾಚರಣೆ ನಡೆಸಿದ ಪೊಲೀಸರು ಒಟ್ಟು 8 ಜನರನ್ನು ಬಂಧಿಸಲಾಗಿದ್ದು, ಬಂಧಿತರಿಂದ 2 ಕಾರು, 17 ಮೊಬೈಲ್, 1 ಟ್ಯಾಬ್, 1 ಲಾಪ್ ಟಾಪ್ ಸೇರಿದಂತೆ 24 ಸಾವಿರ ರೂಪಾಯಿ ನಗದು ವಶಕ್ಕೆ ಪಡೆದಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


