ದರ್ಶನ್ ನಟನೆಯ ” ಶಾಸ್ತ್ರಿ ‘ ಚಿತ್ರವನ್ನು ರೀ ರಿಲೀಸ್ ಮಾಡಲು ತಯಾರಿ ನಡೆದಿದ್ದು, ಜು.12ರಂದು ಬಿಡುಗಡೆಯಾಗಲಿದೆ. ವಿತರಕ ವಿ.ಎಂ.ಶಂಕರ್ ಎನ್ನುವವರು ರಿಲೀಸ್ ಮಾಡುತಿದ್ದಾರೆ.
ದರ್ಶನ್ ನಟನೆಯ ಈ ಚಿತ್ರ 2005ರಲ್ಲಿ ತೆರೆಕಂಡಿತ್ತು. ಅಣಜಿ ನಾಗರಾಜ್ ನಿರ್ಮಾಣದ ಈ ಚಿತ್ರವನ್ನು ಪಿ.ಎನ್.ಸತ್ಯ ನಿರ್ದೇಶನ ಮಾಡಿದ್ದು, ಮಾಸ್ ಅಭಿಮಾನಿಗಳನ್ನು ರಂಜಿಸುವಲ್ಲಿ ಈ ಚಿತ್ರ ಯಶಸ್ಸು ಕಂಡಿತ್ತು.
ದರ್ಶನ್ ಜೈಲಿಗೆ ಹೋಗುವ ಆರು ತಿಂಗಳ ಮುಂಚೆಯೇ ಈ ಸಿನಿಮಾವನ್ನು ಮರುಬಿಡುಗಡೆ ಮಾಡಲು ಪ್ಲಾನ್ ನಡೆದಿತ್ತಂತೆ. ಅದರಂತೆ ಈಗ ರಿಲೀಸ್ ಮಾಡುತ್ತಿದ್ದಾರೆ.
ಸದ್ಯ ದರ್ಶನ್ ಜೈಲಿನಲ್ಲಿರುವುದರಿಂದ ಅಭಿಮಾನಿಗಳು ಈ ಸಿನಿಮಾಕ್ಕೆ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂದು ಕಾದು ನೋಡಬೇಕು.
ರೀ-ರಿಲೀಸ್ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ವಿತರಕರು, ದರ್ಶನ್ ಅವರ ಸದ್ಯದ ಪರಿಸ್ಥಿತಿಗೂ ಸಿನಿಮಾ ರಿ ರಿಲೀಸ್ ಮಾಡುತ್ತಿರುವುದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಶಂಕರ್ ನಿರ್ದೇಶನದ ಕಮಲ್ ಹಾಸನ್ ಅವರ ಇಂಡಿಯನ್ 2 ಹೊರತುಪಡಿಸಿ ಈ ವಾರ ಯಾವುದೇ ಹೊಸ ಕನ್ನಡ ಚಲನಚಿತ್ರಗಳು ಬಿಡುಗಡೆಯಾಗುತ್ತಿಲ್ಲ. ಹೀಗಾಗಿ ಶಾಸ್ತ್ರಿ ಮರು ಬಿಡುಗಡೆ ಮಾಡಲಾಗುತ್ತಿದೆ ಎಂದಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


