ಇದು ಮಗುವಿನ ಪ್ರತಿರೂಪ ಸಿಲಿಕಾನ್ ಗೊಂಬೆ . ಈ ಮಗು ಪಡೆಯಲು ನವಮಾಸ ಕಾಯಬೇಕಿಲ್ಲ. ಜೀವಂತ ಶಿಶು ಹಾಗೂ ಸಿಲಿಕಾನ್ ಶಿಶುವಿನಲ್ಲಿ ಕೊಂಚವೂ ವ್ಯತ್ಯಾಸ ವಿಲ್ಲದಂತೆ ಸಿಲಿಕಾನ್ ಶಿಶುವೊಂದನ್ನು ಫ್ಲೋರಿಡಾ ಮೂಲದ ಮಹಿಳೆ ತಯಾರಿಸುತ್ತಿದ್ದಾರೆ. ಶಿಶುಗಳನ್ನು ಹೋಲುವ ಹೈಪರ್ ರಿಯಲಿಸ್ಟಿಕ್ ಗೊಂಬೆ ತಯಾರಿಸುವ ಡ್ರೀಮ್ ಶೈರ್ ಎಂಬ ಸಂಸ್ಥೆಯ CEO ಆಗಿರುವ ಮಾಮಾ ಕೋಲಿ ನವಜಾತ ಶಿಶುಗಳ ಪ್ರತಿರೂಪವನ್ನು ತಯಾರಿಸುತ್ತಾರೆ.
ಗರ್ಭಪಾತದಿಂದ ಬಳಲುತ್ತಿರುವ ಮಹಿಳೆಯರಿಗೆ, ಮಗುವನ್ನು ಕಳೆದುಕೊಂಡಿದ್ದರೆ ಅಥವಾ ಮಾನಸಿಕ ಆರೋಗ್ಯ ಅಸ್ವಸ್ಥತೆಗಳೊಂದಿಗೆ ಹೋರಾಡುತ್ತಿರುವ ಮಹಿಳೆಯರು ಗುಣಮುಖರಾಗುವ ಪ್ರಯಾಣದಲ್ಲಿ ಸಿಲಿಕಾನ್ ಶಿಶು ಸಹಾಯಕಾರಿ ಎನ್ನುತ್ತಾರೆ ಮಾಮಾ.
ಮಾಮಾ 2020 ರಲ್ಲಿ ತನ್ನ ಗೊಂಬೆಗಳನ್ನು ಮಾರಾಟ ಮಾಡಲು ಪ್ರಾರಂಭಿಸಿದ್ದಾರೆ. ಪುಟ್ಟ ಸಿಲಿಕೋನ್ ಗೊಂಬೆಗಳ ಬೆಲೆ $45 (ಸುಮಾರು ರೂ. 4,000) ದಿಂದ ಪ್ರಾರಂಭಿಸಿ ದೊಡ್ಡ ಗೊಂಬೆಗಳ ಬೆಲೆ $1,500 (ಅಂದಾಜು ರೂ. 1,25,000) ಆಗಿದೆ.
View this post on Instagram
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


