ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ2 ಆರೋಪಿ ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲು ಸೇರಿದ್ದು, ಇನ್ನು ದರ್ಶನ್ ಗೆ ನೀಡಿರುವ ವಿಚಾರಣಾಧೀನ ಕೈದಿ ನಂಬರ್ 6106 ಅನ್ನು ವಾಹನಗಳಲ್ಲಿ, ಬಟ್ಟೆಗಳಲ್ಲಿ ಅಭಿಮಾನಿಗಳು ಹಾಕಿಕೊಂಡು ಸುದ್ದಿಯಾಗಿದ್ದಾರೆ. ಈ ನಡುವೆ ಹೇರ್ ಕಟಿಂಗ್ ಶಾಪ್ ವೊಂದಲ್ಲಿ ಯುವಕನೊಬ್ಬ ತಲೆಯಲ್ಲಿ ದರ್ಶನ್ ನ ಕೈದಿ ನಂಬರ್ ಬರೆಸಿಕೊಂಡು ವಿಡಿಯೋ ಮಾಡಿಸಿದ್ದಾನೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆಯನ್ನು ಪೊಲೀಸರು ಚುರುಕುಗೊಳಿಸಿದ್ದು, ಈ ಮೂಲಕ ಮಹತ್ವದ ಸಾಕ್ಷ್ಯಗಳನ್ನು ಸಂಗ್ರಹಿಸಲು ಮುಂದಾಗಿದ್ದಾರೆ. ಮತ್ತೊಂದೆಡೆ ಪತ್ನಿ ವಿಯಲಕ್ಷ್ಮಿ ಮತ್ತು ಕುಟುಂಬಸ್ಥರು ಜೈಲು ಸೇರಿರುವ ದರ್ಶನ್ ಅವರನ್ನು ಹೊರತರಲು ಇನ್ನಿಲ್ಲದ ಪ್ರಯತ್ನಗಳನ್ನು ಮಾಡುತ್ತಿದ್ದಾರೆ.
ದರ್ಶನ್ ಕೈದಿ ನಂಬರ್ ವಿಚಾರಕ್ಕೆ ಸಂಬಂಧಿಸಿದಂತೆ ಪೊಲೀಸರು ಇಂಥವರ ಮೇಲೆ ಹಲವು ಕಡೆಗಳಲ್ಲಿ ಕ್ರಮ ಕೈಗೊಂಡಿದ್ದಾರೆ. ವಾಹನಗಳಿಗೆ ಹಾಕಿಸಿದ್ದ ಕೈದಿ ನಂಬರ್ ಗಳನ್ನು ತೆಗೆಸಿದ್ದಾರೆ. ಈ ನಡುವೆಯೇ ಕೆಲವರು ದರ್ಶನ್ ಗೆ ನೀಡಿರುವ ವಿಚಾರಣಾಧೀನ ಕೈದಿ ನಂಬರ್ 6106 ಅಚ್ಚೆ ಹಾಕಿಸಿಕೊಳ್ಳುವುದು, ಮಕ್ಕಳ ಬಟ್ಟೆಗಳ ಮೇಲೆ ಬರೆಸುವುದು, ವಾಹನಗಳ ಮೇಲೆ ಹಾಕಿಸಿಕೊಳ್ಳುವುದು ಹೆಚ್ಚಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


