ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ಇನ್ನೂ ಇಷ್ಟು ದಿನ ದರ್ಶನ್ ಜೈಲಿನಲ್ಲಿ ಯಾರ ಬಳಿಯೂ ಮಾತನಾಡದೇ ಮೌನವಾಗಿದ್ದರು. ಇದೀಗ ಅವರಿಗೆ ಜೈಲಿನಲ್ಲಿ ಹೊಸ ಸ್ನೇಹಿತರೊಬ್ಬರು ಸಿಕ್ಕಿದ್ದಾರೆ ಎಂದು ತಿಳಿದುಬಂದಿದೆ. ಹಾಗಾದರೆ ಆ ಸ್ನೇಹಿತ ಯಾರು ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಕೊಲೆ ಪ್ರಕರಣದಲ್ಲಿ ಜೈಲುಪಾಲಾದ ಬಳಿಕ ನಟ ದರ್ಶನ್ ಅಲ್ಲಿನ ಯಾರೊಬ್ಬರ ಬಳಿಯೂ ಮಾತನಾಡದೇ ಸುಮ್ಮನೇ ಕುಳಿತುಕೊಳ್ಳುತ್ತಿದ್ದರಂತೆ. ಆದರೆ ಇದೀಗ ಆಶ್ಚವೆಂಬಂತೆ ಅವರಿಗೆ ಹೊಸ ಸ್ನೇಹಿತನ ಪರಿಚಯವಾಗುತ್ತಿದ್ದಂತೆ ಅವರು ಬದಲಾಗಿದ್ದಾರಂತೆ ಎಂಬ ಮಾಹಿತಿ ತಿಳಿದುಬಂದಿದೆ. ಆ ಸ್ನೇಹಿತ ಬೇರೆ ಯಾರು ಅಲ್ಲ. ಅದು ಕಥೆ & ಕಾದಂಬರಿಯ ಪುಸ್ತಕಗಳೇ ಆಗಿವೆಯಂತೆ.
ನಟ ದರ್ಶನ್ ಜೈಲಿನಲ್ಲಿ ಹೆಚ್ಚು ಸಮಯವನ್ನು ಬುಕ್‌ಗಳ ಜೊತೆ ಕಳೆಯುತ್ತಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ. ಪ್ರತಿ ದಿನ ದರ್ಶನ್ ಅವರು ಗ್ರಂಥಾಲಯದಿಂದ ಬೇರೆ, ಬೇರೆ ಬುಕ್ ಪಡೆಯುತ್ತಿದ್ದಾರಂತೆ. ಕನ್ನಡದ ಹಳೆ ಕಥೆ ಮತ್ತು ಕಾದಂಬರಿಗಳ ಕಡೆ ಕಣ್ಣಾಡಿಸುತ್ತಿದ್ದಾರಂತೆ. ಈ ಪುಸ್ತಕ ಸ್ನೇಹದಿಂದ ಜೈಲಿಗೆ ಬರುವ ವಾರ್ಡನ್‌ಗಳ ಜೊತೆ ನಗು ನಗುತ್ತಾ ದರ್ಶನ್ ಕಾಲ ಕಳೆಯುತ್ತಿದ್ದಾರೆ ಎನ್ನುವ ಸಂತಸದ ಮಾಹಿತಿಯೊಂದು ಲಭ್ಯವಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


