ಅಪರೂಪದ ಧ್ವನಿಯನ್ನು ಹೊಂದಿದ್ದ ನಟಿ ಹಾಗೂ ನಿರೂಪಕಿ ಅಪರ್ಣಾ ಸಾವಿನ ಬೆನ್ನಲ್ಲಿಯೇ ಬೆಂಗಳೂರಿನ ನಮ್ಮ ಮೆಟ್ರೋ ರೈಲಿನಲ್ಲಿ ಅವರ ಧ್ವನಿಯನ್ನು ಬದಲಾವಣೆ ಮಾಡುವುದಿಲ್ಲ ಎಂದು ಬಿಎಂಆರ್‌ಸಿಎಲ್ ಖಚಿತಪಡಿಸಿದೆ.
ಆದರೆ ಇನ್ನುಮುಂದೆ ಬೆಂಗಳೂರು ಮೆಟ್ರೋದ ವಿಸ್ತರಿತ ಮಾರ್ಗ ಹಾಗೂ ಹೊಸ ಮಾರ್ಗಗಳಲ್ಲಿ ಅಪರ್ಣಾ ಬದಲಾಗಿ ಬೇರೊಬ್ಬ ಮಹಿಳೆಯ ಧ್ವನಿ ನಿಮ್ಮ ಕಿವಿಗೆ ಕೇಳಲಿದೆ. ಅಪರ್ಣಾ ನಿಧನ ಹಿನ್ನಲೆಯಲ್ಲಿ ನಮ್ಮ ಮೆಟ್ರೋ ಹೊಸ ಮಾರ್ಗಗಳಲ್ಲಿ ಹೊಸ ಧ್ವನಿ ಬರಲಿದೆ. ಬೆಂಗಳೂರಿನ ಹೊಸ ಮೆಟ್ರೋ ಮಾರ್ಗಗಳಾದ ಆರ್.ವಿ. ರಸ್ತೆ- ಬೊಮ್ಮಸಂದ್ರ, ಹಸಿರು ಮಾರ್ಗದ ವಿಸ್ತರಿತ ಮಾರ್ಗ ನಾಗಸಂದ್ರ-ಮಾದವಾರ, ನಾಗವಾರ- ಗೊಟ್ಟಿಗೆರೆ – ವಿಮಾನ ನಿಲ್ದಾಣ ಮಾರ್ಗದಲ್ಲಿ ಅಪರ್ಣಾ ಧ್ವನಿ ಕೇಳಲು ಇರುವುದಿಲ್ಲ.
ಈವರೆಗೆ ನಮ್ಮ ಮೆಟ್ರೋ ಸಂಚಾರ ಮಾಡುವ ಎಲ್ಲ ಮಾರ್ಗಗಳಲ್ಲಿ ಎಂದಿನಂತೆಯೇ ಅಪರ್ಣಾ ಧ್ವನಿ ಜೀವಂತವಾಗಿರುತ್ತದೆ. ನಮ್ಮ ಮೆಟ್ರೋದ ನೇರಳೆ ಮಾರ್ಗ ರಸ್ತೆಯ ಚಲ್ಲಘಟ್ಟ- ವೈಟ್ ಫೀಲ್ಡ್ ಹಾಗೂ ಹಸಿರು ಮಾರ್ಗದ ಯಲಚೇನಹಳ್ಳಿ- ನಾಗಸಂದ್ರ ಮೆಟ್ರೋ ನಿಲ್ದಾಣಗಳ ನಡುವಿನ ಮಾರ್ಗದಲ್ಲಿ ಅಪರ್ಣಾ ಧ್ವನಿ ಕೇಳುತ್ತಿದ್ದು, ಅದು ಎಂದಿನಂತೆ ಮುಂದುವರೆಯಲಿದೆ. ಈ ಮಾರ್ಗಗಳಲ್ಲಿ ಅರ್ಪಣಾ ನಿಧನ ಬಳಿಕವೂ ಅಪರ್ಣಾ ಧ್ವನಿ ಜೀವಂತವಾಗಿರಲಿದೆ.
ಬೆಂಗಳೂರು ಮೆಟ್ರೋದಲ್ಲಿ ಶೀಘ್ರದಲ್ಲೇ ಉದ್ಘಾಟನೆಯಾಗಲಿದೆ ಮೆಟ್ರೋ ನೂತನ ಮಾರ್ಗಗಳಲಲ್ಲಿ ಅಪರ್ಣಾ ಧ್ವನಿ ಕೇಳಲು ಸಾಧ್ಯವಿಲ್ಲ. ನಮ್ಮ ಮೆಟ್ರೋದಲ್ಲಿ ಉದ್ಘಾಟನೆಗೆ ಸಿದ್ಧಗೊಳ್ಳುತ್ತಿರುವ ಆರ್.ವಿ. ರಸ್ತೆ- ಬೊಮ್ಮಸಂದ್ರ ಹಾಗೂ ನಾಗಸಂದ್ರ – ಮಾದವಾರ ಮಾರ್ಗದಲ್ಲಿ ಹೊಸ ಧ್ವನಿಗಾಗಿ ಮೆಟ್ರೋ ಹುಡುಕಾಟ ಮಾಡುತ್ತಿದೆ. ಆದರೆ, ಇದಕ್ಕಾಗಿ ಯಾರ ಧ್ವನಿಯನ್ನು ಅಂತಿಮವಾಗಿ ಆಯ್ಕೆ ಮಾಡಿಕೊಳ್ಳಲಿದೆ ಎಂಬುದು ಅತ್ಯಂತ ಕುತೂಹಲಕ್ಕೆ ಕಾರಣವಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


