ನಾಗಿಣಿ, ಬಿಗ್ ಬಾಸ್ ಖ್ಯಾತಿಯ ದೀಪಿಕಾ ದಾಸ್ ಅವರು ರೀಲ್ಸ್ ಮಾಡಲು ಹೋಗಿ ಕಾಲುಜಾರಿ ಬಿದ್ದು, ಮುಖಕ್ಕೆ ಗಾಯ ಮಾಡಿಕೊಂಡಿದ್ದಾರೆ. ಇದರ ವೀಡಿಯೋವನ್ನು ಅವರು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.
ಸುಂದರವಾದ ಜಾಗದಲ್ಲಿ, ಫಾಲ್ಸ್ ನಲ್ಲಿ ನೀರು ಹಿಂದೆ ಝರಿಯಂತೆ ಬೀಳುತ್ತಿರುವುದು ಈ ವೀಡಿಯೋದಲ್ಲಿ ಕಾಣಬಹುದು, ಅದರ ಒಂದು ಕಡೆ ಬಂಡೆ, ಒಂದು ಕಡೆ ನೀರಿದ್ದು, ಸಣ್ಣ ಕಾಲು ದಾರಿಯಲ್ಲಿ ದೀಪಿಕಾ ದಾಸ್ ಅವರು ತಮ್ಮ ಕೈಯಲ್ಲಿ ಹೂವನ್ನು ಹಿಡಿದುಕೊಂಡು ನಡೆದುಕೊಂಡು ಬರುತ್ತಿರುವಾಗಲೇ ದೀಪಿಕಾ ಕಾಲು ಸ್ಪಿಪ್ ಆಗಿ ಬಿದ್ದಿದ್ದು, ಕೂಡಲೇ ಅವರ ಮುಖ ಪಕ್ಕದಲ್ಲಿದ್ದ ಬಂಡೆಕಲ್ಲಿಗೆ ಹೊಡೆದಿದೆ.
ರೀಲ್ಸ್ ಮಾಡಲು ಹೋಗಿ ದೀಪಿಕಾ ಬಿದ್ದಿದ್ದಾರೆ ಎನ್ನುವುದು ಅವರ ಟ್ಯಾಗ್ಸ್‌ನಿಂದ ಗೊತ್ತಾಗಿದೆ. ಮುಖಕ್ಕೆ ಗಾಯವಾಗಿದೆಯೇ ಎಂದು ಅಭಿಮಾನಿಯೊಬ್ಬರು ಕೇಳಿದ ಪ್ರಶ್ನೆಗೆ ದೀಪಿಕಾ ದಾಸ್ ಹೌದು ಎಂದಿದ್ದಾರೆ. ಮುಖದ ಎಡಭಾಗಕ್ಕೆ ಗಾಯವಾಗಿದ್ದು, ಈಗ ಸುಧಾರಿಸಿಕೊಂಡಿದ್ದೀನಿ ಎಂದು ಬರೆದಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


