ಕೊಲೆ ಕೇಸ್ ನಲ್ಲಿ 20 ವರ್ಷದಿಂದ ತಲೆ ಮರೆಸಿಕೊಂಡಿದ್ದ ಸಿನಿಮಾ ನಿರ್ದೇಶಕನನ್ನ ಸಿಸಿಬಿ ಅರೆಸ್ಟ್ ಮಾಡಿದೆ.
ಸ್ಯಾಂಡಲ್ ವುಡ್ ಸಿನಿ ನಿರ್ದೇಶಕ ಗಜೇಂದ್ರ @ ಗಜ ಬಂಧಿತ ಆರೋಪಿ ಎಂದು ತಿಳಿದು ಬಂದಿದೆ. ಪೊಲೀಸರ ಕೈಗೆ ಸಿಗದೇ ಗಜೇಂದ್ರ ಒಡಾಡಿಕೊಂಡಿದ್ದ. 2004 ರಲ್ಲಿ ನಡೆದಿದ್ದ ವಿಲ್ಸನ್ ಗಾರ್ಡನ್ ನಲ್ಲಿ ರೌಡಿ ಶೀಟರ್ ಕೊತ್ತರವಿ ಮರ್ಡರ್ ಕೇಸ್ ನಲ್ಲಿ ಚಂದ್ರಪ್ಪ, ಅಲ್ಯೂಮಿನಿಯಂ ಬಾಬು ಜೊತೆಗೆ ಗಜೇಂದ್ರ A8 ಆಗಿದ್ದ.
ಒಂದು ವರ್ಷ ಜೈಲು ಮುಗಿಸಿ ನಂತರ ಕೋರ್ಟ್ ಹಾಜರಾಗಿರ್ಲಿಲ್ಲ. ಅರಸಯ್ಯನ ಶಿಷ್ಯ ಗಜೇಂದ್ರ@ ಗಜ ಪುಟಣಿಪವರ್, ರುದ್ರ ಸಿನಿಮಾ ಡೈರೆಕ್ಷನ್ ಮಾಡಿದ್ದನಾಂತೆ. ತಮಿಳಿನಲ್ಲಿ ಒಂದೆರಡು ಸಿನಿಮಾ ಮಾಡಿರೋದಾಗಿ ಗಜ ಹೇಳಿಕೊಂಡಿದ್ದ. ಸದ್ಯ ಸಿಸಿಬಿ ಪೊಲೀಸ್ರು ಗಜೇಂದ್ರನನ್ನ ಬಂಧಿಸಿ ಕೋರ್ಟ್ ಗೆ ಹಾಜರುಪಡಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


