ತಿಪಟೂರು: ವೀರಶೈವ ಲಿಂಗಾಯತ ಸಂಘಟನೆಯಿಂದ ಬಸವ ಜಯಂತಿ ಮತ್ತು ಆರೋಗ್ಯ ಶಿಬಿರವು ಜುಲೈ 21ರ ಭಾನುವಾರ ಬೆಳಿಗ್ಗೆ 8 ಗಂಟೆಗೆ ನಗರದ ಶ್ರೀ ಗುರುಕುಲಾನಂದ ಆಶ್ರಮದ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ ಎಂದು ವೀರಶೈವ ಸಂಘಟನೆಯ ಅಧ್ಯಕ್ಷ ರೇಣುಕಾರಾಧ್ಯ ತಿಳಿಸಿದರು.
ಈ ಕಾರ್ಯಕ್ರಮ ವನ್ನು ಗುರುಕುಲಾನಂದ ಆಶ್ರಮದ ಶ್ರೀ ಇಮ್ಮಡಿ ಕರಿಬಸವ ದೇಶಿಕೇಂದ್ರ ಸ್ವಾಮೀಜಿ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಶಾಸಕ ಕೆ.ಷಡಕ್ಷರಿ ವಹಿಸಲಿದ್ದಾರೆ.
ಇಂಟರ್ನ್ಯಾಷನಲ್ ಲಿಂಗಾಯತ್ ಯೂತ್ ಫೋರಂನ ಅಧ್ಯಕ್ಷ ಅವಿನಾಶ್ ಪಾಳೇಗಾರ್ ಅಂಬುಲೆನ್ಸ್ ಫೌಂಡೇಶನ್ ಡಾ.ಶಾಲಿನಿ ನಲವಡ್ ಭಾಗವಹಿಸಲಿದ್ದು, ದಿಬ್ಬದಹಳ್ಳಿ ಶಂಸುಂದರ್ ಬಸವ ತತ್ವದ ಚಿಂತನೆ ಕುರಿತು ಉಪನ್ಯಾಸ ನೀಡಲಿದ್ದಾರೆ ಎಂದು ತಿಳಿಸಿದರು.
ಈ ಕಾರ್ಯಕ್ರಮಕ್ಕೆ ಸ್ಪರ್ಶ ಆಸ್ಪತ್ರೆ ವಿಟಲ್ ಕಣ್ಣಿನ ಆಸ್ಪತ್ರೆ, ಬೆಂಗಳೂರಿನ ಹೆಸರಾಂತ ಆಸ್ಪತ್ರೆಗಳು ತಪಾಸಣೆ ಮಾಡಲಿದ್ದು, ಇದರ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳುವಂತೆ ತಿಳಿಸಿದರು. ಈ ಪತ್ರಿಕಾಗೋಷ್ಠಿಯಲ್ಲಿ ವೀರಶೈವ ಸಮಾಜದ ಮುಖಂಡರು ಭಾಗವಹಿಸಿದ್ದರು.
ವರದಿ: ಆನಂದ್ ತಿಪಟೂರು
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA