ಬೆಂಗಳೂರಿನ ಗಾಂಧಿನಗರದ ಹೋಟೆಲ್ ಕಾನಿಷ್ಕ ಸಭಾಂಗಣದಲ್ಲಿ ಸಮತಾ ಸೈನಿಕ ದಳದ ರಾಷ್ಟ್ರೀಯ ಅಧ್ಯಕ್ಷರು ಮತ್ತು ದಲಿತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷರು ಆದ ಡಾ. ಎಂ. ವೆಂಕಟಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಪ್ರಮುಖ ಸಭೆ ನಡೆಯಿತು.
ಈ ಸಭೆಯು ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಮತ್ತು ಎಸ್.ಸಿ.ಪಿ./ಟಿ.ಎಸ್.ಪಿ. ಹಣದ ದುರುಪಯೋಗದ ವಿರುದ್ಧ ಹೋರಾಟದ ಕುರಿತು ನಡೆಯಿತು.
ಈ ಮಹತ್ವದ ಚರ್ಚೆಯಲ್ಲಿ ಆರ್.ಪಿ.ಐ. ರಾಷ್ಟ್ರೀಯ ಸಮಿತಿ ಸದಸ್ಯರಾದ ಎ. ಬಿ. ಹೊಸಮನಿ, ಆರ್.ಪಿ.ಐ. ರಾಜ್ಯಾಧ್ಯಕ್ಷ ಸತೀಶ್, ರಾಜ್ಯ ಕಾರ್ಯಾಧ್ಯಕ್ಷ ಡಾ. ಜಿ. ಗೋವಿಂದಯ್ಯ, ರಾಜ್ಯ ಮಹಾಪ್ರಧಾನ ಕಾರ್ಯದರ್ಶಿ ಜಿ. ಸಿ. ವೆಂಕಟರಮಣಪ್ಪ, ರಾಜ್ಯ ಖಜಾಂಚಿ ಡಾ. ಆರ್. ಚಂದ್ರಶೇಖರ್, ಯುವ ಘಟಕ ರಾಜ್ಯಾಧ್ಯಕ್ಷ ಜಿ. ಪಿ. ಪ್ರಶಾಂತ್, ಯುವ ಘಟಕ ಪ್ರಧಾನ ಕಾರ್ಯದರ್ಶಿ ದಲಿತ ಚಳುವಳಿ ನಾಗೇಶ್, ಮಹಿಳಾ ರಾಜ್ಯಾಧ್ಯಕ್ಷೆ ರೂಪಕಲಾ, ರಾಜ್ಯ ಮಹಿಳಾ ಪ್ರಧಾನ ಕಾರ್ಯದರ್ಶಿ ನಾಗರತ್ನ, ವಾಲ್ಮೀಕಿ ರಾಜ್ಯ ಮುಖಂಡರು ಅರವಿಂದ, ಪ್ರತಾಪ್ ಮದಕರಿ, ನಾಗೇಶ್, ಅಹಿಂದ ವೇದಿಕೆ ರಾಜ್ಯಾಧ್ಯಕ್ಷ ಮುತ್ತುರಾಜ್, ಸ್ವಾಭಿಮಾನಿ ಅಂಬೇಡ್ಕರ್ ಸೇನೆ ರಾಜ್ಯಾಧ್ಯಕ್ಷ ಕೋದಂಡರಾಮು, ಕಂದೇಗಾಲ ಶಿವಣ್ಣ ಮತ್ತಿತರ ಮುಖಂಡರುಗಳು ಭಾಗವಹಿಸಿದರು.
ಈ ಸಭೆಯಲ್ಲಿ ಹಲವು ಮಹತ್ವದ ತೀರ್ಮಾನಗಳನ್ನು ಕೈಗೊಳ್ಳಲಾಯಿತು, ಹಾಗೆಯೇ ರಾಜ್ಯದಲ್ಲಿ ಹೊಸದೊಂದು ಅಭಿಯಾನವನ್ನು ಪ್ರಾರಂಭಿಸಲು ಮತ್ತು ಅಂಬೇಡ್ಕರ್ ವಾದವನ್ನು ಮುನ್ನಡೆಸಲು ಗಟ್ಟಿ ನಿರ್ಧಾರಗಳನ್ನು ಕೈಗೊಳ್ಳಲಾಯಿತು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA


