ರಾಜ್ಯ ಸರ್ಕಾರದಿಂದ ಖಾಸಗಿ ವಲಯದಲ್ಲಿಯೂ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ನಿರ್ಧಾರವನ್ನು ಪೋನ್ ಪೇ ಸಿಇಒ ಟೀಕಿಸಿದ್ದರು. ಅವರ ಟೀಕೆಯ ವಿರುದ್ಧ ಸಿಡಿದೆದ್ದಿರುವಂತ ಕನ್ನಡಿಗರು ಎಕ್ಸ್ ನಲ್ಲಿ #BoycottPhonePe #UninstallPhonePe ಅಭಿಯಾನವನ್ನೇ ಆರಂಭಿಸಿದ್ದಾರೆ.
ಕನ್ನಡಿಗರಿಗೆ ಖಾಸಗಿ ವಲಯದಲ್ಲೂ ಶೇ.100ರಷ್ಟು ಉದ್ಯೋಗ ಮೀಸಲಾತಿ ಸಂಬಂಧದ ಸರ್ಕಾರದ ನಿರ್ಧಾರದ ಬಗ್ಗೆ ಪೋನ್ ಪೇ ಸಿಇಒ ಸಮೀರ್ ನಿಗಮ್ ಟೀಕಿಸಿದ್ದರು. ಅವರ ಟೀಕೆಗೆ ಕನ್ನಡಿಗರು ವ್ಯಾಪಕ ಆಕ್ರೋಶವನ್ನು ಹೊರ ಹಾಕುತ್ತಿದ್ದಾರೆ.
ಕರ್ನಾಟಕದ ಕನ್ನಡಿಗರ ವಿರುದ್ಧ ಮಾತನಾಡಿದಂತ ಪೋನ್ ಪೇ ಸಿಇಒ ಸಮೀರ್ ನಿಗಮ್ ಗೆ ಬುದ್ದಿ ಕಲಿಸಬೇಕು ಅಂತ ಕನ್ನಡಿಗರು ನಿರ್ಧರಿಸಿದ್ದಾರೆ. ಅಲ್ಲದೇ ಪೋನ್ ಪೇ ಗೆ 1 ರೇಟಿಂಗ್ ನೀಡಿ, ಮೊಬೈಲ್ ನಿಂದ ಆಪ್ ಡಿಲೀಟ್ ಮಾಡಿ ಅನ್ನೋ ಸಂದೇಶವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ. ಈಗ ವೈರಲ್ ಆಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


