ವಿಠ್ಠಲ್ ದೇವಸ್ಥಾನದಿಂದ ಬೆಳ್ಳಿ ಕಿರೀಟವನ್ನು ಕದ್ದ ಘಟನೆ ಮಂಬೈನ ಬೋರಿವಲಿ ಪೂರ್ವದ ರಸ್ತೆ ಸಂಖ್ಯೆ 5ರ ದೇಗುಲದಲ್ಲಿ ನಡೆದಿದೆ. ಘನಶ್ಯಾಮ್ ವರ್ಮಾ (26) ಎಂಬಾತನನ್ನು ಕಸ್ತೂರ್ಬಾ ಪೊಲೀಸರು ಬಂಧಿಸಿದ್ದಾರೆ.
ಆತ ದೇವರ ಬೆಳ್ಳಿ ಕಿರೀಟ ಕದ್ದಿಯುತ್ತಿರುವ ದೃಶ್ಯ ದೇವಾಲಯದ ಗರ್ಭಗುಡಿಯಲ್ಲಿ ಅಳವಡಿಸಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸದ್ಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ.
ಕಳ್ಳತನ ನಡೆದ ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸಲಾಗಿದೆ. ಮೂಲತಃ ರಾಜಸ್ಥಾನದವರಾದ ವರ್ಮಾ ಉದ್ಯೋಗ ಅರಸಿ ಮುಂಬೈಗೆ ಬಂದಿದ್ದ. ಉದ್ಯೋಗ ಸಿಗದೆ ನಿರುದ್ಯೋಗಿಯಾದ್ದರಿಂದ ಹಣಕ್ಕಾಗಿ ಈ ಕೆಲಸ ಮಾಡಿರುವುದು ತನಿಖೆಯ ವೇಳೆ ಬಾಯ್ಬಿಟ್ಟಿದ್ದಾನೆ. 350 ಗ್ರಾಂ ತೂಕದ ಬೆಲೆಬಾಳುವ ಕಿರೀಟವನ್ನು ಕದಿಯುವ ಮೊದಲು ಯುವಕ ದೇವರಿಗೆ ಕೈ ಮುಗಿಯುತ್ತಿರುವುದನ್ನು ವಿಡಿಯೋದಲ್ಲಿ ಸೆರೆಯಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


