ಮಲೆನಾಡಿನ ಪ್ರಸಿದ್ದ ಧಾರ್ಮಿಕ ಕ್ಷೇತ್ರವಾದ ಶೃಂಗೇರಿ ಶಾರದಾ ಪೀಠಕ್ಕೆ ಆಗಮಿಸುವ ಭಕ್ತರು ಶ್ರೀಮಠದ ಗುರುಗಳ ದರ್ಶನಕ್ಕೆ ವಸ್ತ್ರ ಸಂಹಿತೆ ಇನ್ನು ಮುಂದೆ ಅನುಸರಿಸಬೇಕಿದೆ.
ಶ್ರೀಗಳ ದರ್ಶನ ಹಾಗೂ ಪಾದಪೂಜೆಗೆ ತೆರಳುವ ಭಕ್ತರು ಆಗಸ್ಟ್ 15 ರಿಂದ ಭಾರತೀಯ ಸಂಪ್ರದಾಯದಂತೆ ವಸ್ತ್ರ ಧರಿಸಿ ಶ್ರೀಗಳ ದರ್ಶನ ಪಡೆಯಬೇಕು. ಪುರುಷರು ಧೋತಿ ಮತ್ತು ಶಲ್ಯ ಹಾಗೂ ಉತ್ತರೀಯವನ್ನು ಧರಿಸಬೇಕು.
ಮಹಿಳೆಯರು ಸೀರೆ, ರವಿಕೆ, ಸಲ್ವಾರ್ ಜತೆಗೆ ದುಪ್ಪಟ ಅಥವಾ ಲಂಗ ದಾವಣಿ ಧರಿಸಿ ಶ್ರೀಗಳ ದರ್ಶನ ಪಡೆಯಬಹುದು ಎಂದು ಮಠದ ಆಡಳಿತ ಮಂಡಳಿ ಪ್ರಕಟಣೆ ಹೊರಡಿಸಿದೆ.
ಭಾರತೀಯ ಸಂಪ್ರದಾಯದ ಉಡುಗೆಗಳನ್ನು ಹೊರತುಪಡಿಸಿ ಇತರೆ ಉಡುಗೆ ತೊಟ್ಟು ಬಂದಲ್ಲಿ ಗುರುನಿವಾಸದ ಒಳಗೆ ಪ್ರವೇಶವನ್ನು ನಿರ್ಬಂಧಿಸಲು ಶ್ರೀಮಠದ ಆಡಳಿತ ಮಂಡಳಿ ಮಹತ್ವದ ತೀರ್ಮಾನ ಕೈಗೊಂಡಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


