ಬೆಂಗಳೂರು ನಗರದಲ್ಲಿ ನಾಯಿ ಮಾಂಸ ಮಾರಾಟದ ವದಂತಿ ಹಿನ್ನೆಲೆ ಹೊರಗಿನ ಮಾಂಸ ಎಂದರೆ ಜನ ತಿನ್ನಲು ಹಿಂದೆ ಮುಂದೆ ನೋಡುತ್ತಿದ್ದಾರೆ. ಆ ರೀತಿ ಯೋಚಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಈಗ ಈ ಸುದ್ದಿಗಳ ಬೆನ್ನಲ್ಲೇ ಆಹಾರ ಸುರಕ್ಷತಾ ಇಲಾಖೆ ಅಗತ್ಯ ಕ್ರಮಕ್ಕೆ ಮುಂದಾಗಿದ್ದು, ಬೆಂಗಳೂರಿನ ಮಟನ್ ಶಾಪ್ ಗಳಲ್ಲಿ ಪರಿಶೀಲನೆ ನಡೆಸಲು ತೀರ್ಮಾನಿಸಿದೆ.
ಬೆಂಗಳೂರಿನ ಮಟನ್ ಅಂಗಡಿಗಳ ಸ್ವಚ್ಚತೆ, ಅಂಗಡಿಗಳಲ್ಲಿ ಸ್ಟಾಕ್ ಇರುವ ಕೋಲ್ಡ್ ಸ್ಟೋರೇಜ್‌ನಲ್ಲಿರೋ ಮಾಂಸ ಹೇಗಿದೆ, ಅಲ್ಲಿ ಕಲಬೆರಕೆ ನಡೆದಿದೆಯೇ, ಅಲ್ಲಿನ ಆಹಾರ ಎಷ್ಟು ಸೇಫ್ ಎಂಬುದರ ಬಗ್ಗೆ ಪರಿಶೀಲನೆಗೆ ಇಲಾಖೆ ಸಿದ್ಧತೆ ನಡೆಸಿದೆ. ಅದಕ್ಕಾಗಿ ಈಗಾಗಲೇ ಬೆಂಗಳೂರಿನ ಕೆಲವೆಡೆ ಸ್ಯಾಂಪಲ್‌ಗಳನ್ನು ಸಹ ಸಂಗ್ರಹಿಸಲಾಗಿದೆ. ನಾಯಿಮಾಂಸ ಸುದ್ದಿ ಬೆನ್ನಲ್ಲೇ ಹೋಟೆಲ್ ಮಾಲೀಕರು ಕಳವಳ ವ್ಯಕ್ತಪಡಿಸಿದ್ದು, ತಾವೇ ಖುದ್ದಾಗಿ ಮಾಂಸ ಖರೀದಿಗೆ ಮುಂದಾಗಿದ್ದಾರೆ.
ನಮ್ಮ ರಾಜಧಾನಿ ಬೆಂಗಳೂರಿಗೆ ರಾಜಸ್ಥಾನದ ಜೈಪುರದಿಂದ ಸರಬರಾಜಾಗಿದ್ದ ಮಾಂಸ ನಾಯಿಯದ್ದು ಎಂಬ ಆರೋಪವನ್ನು ಹಿಂದೂ ಹೋರಾಟಗಾರ ಪುನೀತ್ ಕೆರೆಹಳ್ಳಿ ಮಾಡಿದ್ದರು. ಇದೇ ವಿಚಾರವಾಗಿ ಮೆಜೆಸ್ಟಿಕ್ ರೈಲ್ವೇ ನಿಲ್ದಾಣದಲ್ಲಿ ಮಾಂಸವಿದ್ದ ಬಾಕ್ಸ್‌ಗಳನ್ನು ತಡೆದ ಪ್ರತಿಭಟಿಸಿದ್ದರು. ಈ ಗಲಾಟೆಯ ನಂತರ ಮಾಂಸದ ಕ್ವಾಲಿಟಿ ಬಗ್ಗೆ ಪ್ರಶ್ನೆ ಎದ್ದಿದೆ. ಈ ಘಟನೆಯಿಂದ ಅಲರ್ಟ್ ಆಗಿರುವ ಆಹಾರ ಮತ್ತು ಸುರಕ್ಷತಾ ಇಲಾಖೆ ಬೆಂಗಳೂರಿನಲ್ಲಿ ಮಟನ್ ಅಂಗಡಿಗಳ ಸ್ಥಿತಿಗತಿಗಳ ಪರಿಶೀಲನೆಗೆ ಇಳಿದಿದೆ.
ಬೆಂಗಳೂರಿನ ಎಲ್ಲಾ ದೊಡ್ಡ ಹೋಟೆಲ್, ಮಟನ್ ಅಂಗಡಿಗಳು, ದೊಡ್ಡ ಮಟನ್ ಶಾಪ್ ಗಳಲ್ಲಿ ಮಾಂಸವನ್ನು ಕೋಲ್ಡ್ ಸ್ಟೋರೇಜ್‌ನಲ್ಲಿ ಶೇಖರಣೆ ಮಾಡಲಾಗುತ್ತದೆ. ಇದೀಗ ಆಹಾರ ಮತ್ತು ಸುರಕ್ಷಣಾ ಇಲಾಖೆ ಕೋಲ್ಡ್ ಸ್ಟೋರೇಜ್ ಮಾಂಸದ ಕ್ವಾಲಿಟಿ ಚೆಕ್ ಮಾಡಲಿದ್ದಾರೆ. ಮೊನ್ನೆ ಬೆಂಗಳೂರಿನಲ್ಲಿ ಸೀಸ್ ಮಾಡಿದ ರಾಜಸ್ಥಾನದಿಂದ ಬಂದಿರುವ ಮಾಂಸ ಯಾವ ಪ್ರಾಣಿಯದ್ದು ಎಂದು ತಿಳಿಯಲು ಹೈದರಾಬಾದ್ ನ ಎಫ್ ಎಸ್ ಎಲ್ ಲ್ಯಾಬ್ ಗೆ ಕಳುಹಿಸಲಾಗಿದೆ. ಈ ಬಗ್ಗೆ ವರದಿ ಬರಲು 10 ರಿಂದ 14 ದಿನ ಬೇಕಾಗಿದ್ದು, ಈ ಅವಧಿಯಲ್ಲಿ ನಗರದ ಮಾಂಸದಂಗಡಿಗಳ ಪರಿಶೀಲನೆ ಜೋರಾಗಿ ನಡೆಯಲಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


