ವಿಷ್ಣುವರ್ಧನ್ ಎಂದಾಕ್ಷಣ ಅವರ ಇತ್ತೀಚಿನ ವೇಷಭೂಷಣಗಳೇ ಸಾಮಾನ್ಯವಾಗಿ ನೆನಪಿಗೆ ಬರುತ್ತದೆ. ತಲೆಗೆ ಬಟ್ಟೆ ಕಟ್ಟಿಕೊಳ್ಳುತ್ತಿದ್ದ ರೀತಿ, ಕೊರಳಿನಲ್ಲಿ ಸರಗಳು… ಇಂಥ ನೋಟದಿಂದಲೇ ಅವರು ಎಲ್ಲರ ಹೃದಯವನ್ನು ಆಳಿದವರು. ಇವರ ಜೊತೆ ಕೆಲವು ಚಿತ್ರಗಳಲ್ಲಿ ತೆರೆ ಹಂಚಿಕೊಂಡಿರುವ ನಟಿ ಅನು ಪ್ರಭಾಕರ್ ವಿಷ್ಣು ಸರ್ ಜತೆಗಿನ ತಮ್ಮ ಅನುಭವದ ಬುತ್ತಿಯನ್ನು ಬಿಚ್ಚಿಟ್ಟಿದ್ದಾರೆ.
ವಿಷ್ಣುವರ್ಧನ್ ಜೊತೆಗಿನ ತಮ್ಮ ಮತ್ತು ಅಮ್ಮ ಗಾಯತ್ರಿ ಪ್ರಭಾಕರ್ ಅವರ ಜೊತೆಗಿನ ಒಡನಾಟದ ಕುರಿತು ಮಾತನಾಡಿದ್ದಾರೆ. ವಿಷ್ಣು ಸರ್ ವಿಷಯವನ್ನು ಹೇಳುವುದಾದರೆ ಒಂದು ದಿನ ಸಾಕಾಗಲ್ಲ ಎನ್ನುತ್ತಲೇ ಅವರ ಗುಣಗಾನ ಮಾಡಿದ್ದಾರೆ ಅನು ಪ್ರಭಾಕರ್.
ಬಾಬಾ ರೀತಿ ಬಟ್ಟೆ ಕಟ್ಟಿಕೊಳ್ಳುತ್ತಿರುವ ಕುರಿತು ರಶ್ಮಿ ಅವರು ಕೇಳಿದ ಪ್ರಶ್ನೆಗೆ ಅನು ಪ್ರಭಾಕರ್ ಅವರು, ವಿಷ್ಣು ಸರ್ ತುಂಬಾ ಧಾರ್ಮಿಕ ಪ್ರವೃತ್ತಿಯವರು. ಸದಾ ಫಿಲಾಸಾಫಿ, ಸ್ಪಿರಿಚ್ಯುವಲ್ ಎಂದು ಮಾತನಾಡುತ್ತಿದ್ದರು. ನನ್ನ ಅಮ್ಮ ಮತ್ತು ಅವರು ಯಾವಾಗಲೂ ಅದರ ಬಗ್ಗೆ ಡಿಸ್ಕಸ್ ಮಾಡುತ್ತಿದ್ದರು. ನಾನು ಅವರ ಮಾತುಗಳಿಗೆ ಸಾಕ್ಷಿಯಾಗುತ್ತಿದ್ದೆ. ಜೀವನ ಹೇಗೆ ಎದುರಿಸಬೇಕು. ಸಿನಿಮಾ, ಹೆಸರು, ಖ್ಯಾತಿ ಎಲ್ಲವುಗಳಿಗಿಂತಲೂ ಮುಖ್ಯವಾಗಿ ಜೀವನ, ಕುಟುಂಬ ಹೇಗೆ ಮುಖ್ಯ ಎನ್ನುವುದನ್ನು ಅವರು ಹೇಳುತ್ತಿದ್ದರು. ಅವೆಲ್ಲಾ ನನ್ನ ಮೇಲೂ ಸಾಕಷ್ಟು ಪ್ರಭಾವ ಬೀರಿತು ಎಂದಿದ್ದಾರೆ ಅನು.
ಜೀವನದಲ್ಲಿ ಕಷ್ಟಗಳನ್ನು ಹೇಗೆ ಎದುರಿಸಬೇಕು, ಜೀವನ ಎಂದರೇನು ಎನ್ನುವ ಬಗ್ಗೆ ಅವರು ಮಾತನಾಡುತ್ತಿದ್ದರು. ಧಾರ್ಮಿಕತೆಯಲ್ಲಿ ಅವರಿಗೆ ಅಪಾರ ನಂಬಿಕೆ ಇರುವ ಕಾರಣ ಅವರ ವೇಷಭೂಷಣಗಳೂ ಅದೇ ರೀತಿ ಇದ್ದವು ಎಂದಿದ್ದಾರೆ. ವಿಷ್ಣು ಸಹಸ್ರನಾಮ, ಗಾಯತ್ರಿ ಮಂತ್ರ ಇವುಗಳ ಬಗ್ಗೆಯೂ ಹೇಳುತ್ತಿದ್ದರು. ಅವುಗಳನ್ನು ಪಠಣ ಮಾಡುವಂತೆ ನನಗೆ ಹೇಳುತ್ತಿದ್ದರು ಎಂದಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


