ನಟ ದುನಿಯಾ ವಿಜಯ್ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದಾರೆ. ನಟ ದುನಿಯಾ ವಿಜಯ್ ಅವರು ತಮ್ಮ ಮುಂಬವರು ಸಿನಿಮಾ ಭೀಮವನ್ನು ನೋಡಲು ಸಿಎಂ ಸಿದ್ದರಾಮಯ್ಯ ಅವರಿಗೆ ಆಹ್ವಾನ ಕೊಟ್ಟರು.
ಭೀಮ ದುನಿಯಾ ವಿಜಯ್ ನಟಿಸಿ ನಿರ್ದೇಶನ ಮಾಡಿರುವ ಸಿನಿಮಾ ಆಗಿದೆ. ಕಾವೇರಿ ನಿವಾಸದಲ್ಲಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ವಿಜಯ್ ಅವರು ಸಿಎಂ ಅವರನ್ನು ತಮ್ಮ ಸಿನಿಮಾ ನೋಡಲು ಆಹ್ವಾನಿಸಿದರು. ಆಗಸ್ಟ್ 9 ಕ್ಕೆ ಭೀಮ ಮೂವಿ ರಾಜ್ಯಾದ್ಯಂತ ರಿಲೀಸ್ ಆಗಲಿದೆ. ರಿಲೀಸ್ ಗೂ ಮೊದಲೇ ಭೀಮ ಚಿತ್ರ ನೋಡುವುದಾಗಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಕರ್ನಾಟಕದಲ್ಲಿ ಭೀಮ ಸಿನಿಮಾ 400 ಕ್ಕೂ ಹೆಚ್ಚು ಥಿಯೇಟರ್‌ಗಳಲ್ಲಿ ರಿಲೀಸ್ ಆಗುತ್ತಿದೆ. ಈ ಚಿತ್ರದ ರಿಲೀಸ್ ಗಾಗಿಯೇ ಕ್ಲೋಸ್ ಆಗಿರೋ 18 ಥಿಯೇಟರ್‌ಗಳು ರೀ-ಓಪನ್ ಆಗುತ್ತಿದೆ. ಹಾಗಾಗಿಯೇ ಆಗಸ್ಟ್-9 ರಂದು ಭೀಮ ಅಬ್ಬರ ಬಲು ಜೋರಾಗಿಯೇ ಇರುತ್ತದೆ. ಭೀಮನ ಅಭಿಮಾನಿಗಳು ದೊಡ್ಡ ಹಬ್ಬ ಮಾಡೋಕು ಇದೀಗ ರೆಡಿ ಆಗುತ್ತಿದ್ದಾರೆ.
ಭೀಮ ಚಿತ್ರದ ಬಗ್ಗೆ ಇನ್ನಿಲ್ಲದ ಒಂದು ದೊಡ್ಡ ಹೋಪ್ ಇಂಡಸ್ಟ್ರಿಯಲ್ಲಿ ಕ್ರಿಯೇಟ್ ಆಗಿದೆ. ಇದರಿಂದ ಬೇಡಿಕೆನೂ ಜಾಸ್ತಿ ಆಗಿದೆ. ಕರ್ನಾಟಕದ ಬಹುತೇಕ ಏರಿಯಾಗಳು ಸೋಲ್ಡ್ ಔಟ್ ಆಗಿವೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


