ಬೀದರ್: ಕಮಲನಗರ ತಾಲೂಕಿನ ಬಸನಾಳ–ಕೋರಿಯಾಳ ಗ್ರಾಮಗಳಿಗೆ ಸಂಪರ್ಕಿಸುವ ಮುಖ್ಯ ರಸ್ತೆ ಸಂಪೂರ್ಣ ಹಾಳಾಗಿದ್ದು, ಸ್ವಲ್ಪ ಮಳೆಯಾದರೆ ಸಾಕು ಕೆಸರು ಗದ್ದೆಯಂತಾಗುತ್ತದೆ ಎಂದು ಸ್ಥಳೀಯರು ಅಳಲು ತೋಡಿಕೊಂಡಿದ್ದಾರೆ.
ʼಸುಮಾರು 2–3 ಕಿ.ಮೀ ಇರುವ ಈ ರಸ್ತೆಯಲ್ಲಿ ತಗ್ಗು, ಗುಂಡಿಗಳೇ ತುಂಬಿಕೊಂಡಿವೆ. ರಸ್ತೆಯಲ್ಲಿ ಡಾಂಬರ್ ಎಂಬುದು ಮಾಯವಾಗಿ ಬರೀ ಕೆಸರು ತುಂಬಿಕೊಂಡಿದೆ. ರಸ್ತೆ ಗುಂಡಿಗಳಲ್ಲಿ ಮಳೆ ನೀರು ಸಂಗ್ರಹವಾಗಿ ವಾಹನ ಸವಾರರ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ. ಇನ್ನು ದ್ವಿಚಕ್ರ ವಾಹನ ಸವಾರರ ಪರದಾಟ ಹೇಳತೀರದುʼ ಎಂಬುದು ಪ್ರಯಾಣಿಕರ ಅಭಿಪ್ರಾಯ.ಭಾಲ್ಕಿಯಿಂದ ದಿನಕ್ಕೆ ಒಂದು ಸಲ ಬರುವ ಸಾರಿಗೆ ಬಸ್ ಕೂಡ ರಸ್ತೆ ಸಮಸ್ಯೆ ಕಾರಣಕ್ಕೆ ಕೆಲ ದಿನಗಳಿಂದ ಬರುತ್ತಿಲ್ಲ. ಇದರಿಂದ ಶಾಲಾ-ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು, ಸುತ್ತಲಿನ ಗ್ರಾಮಗಳ ರೈತರು, ಪ್ರಯಾಣಿಕರು ಸಕಾಲಕ್ಕೆ ತಲುಪದೇ ಸಮಸ್ಯೆಯಾಗುತ್ತಿದೆ.
ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ರಸ್ತೆ ದುರಸ್ತಿಗೆ ಮುಂದಾಗಬೇಕು ಎಂದು ಬಸನಾಳ ಗ್ರಾಮದ ನಿವಾಸಿ ಸದಾನಂದ ಪಾಟೀಲ್ ಆಗ್ರಹಿಸಿದ್ದಾರೆ.
ವರದಿ: ಅರವಿಂದ ಮಲ್ಲಿಗೆ, ಬೀದರ್
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


