ಮುಂಬೈ: ಬಿಜೆಪಿಯು ರಾಜಕೀಯ ಪಕ್ಷಗಳನ್ನು ಒಡೆಯುವ ಮೂಲಕ ಪವರ್ ಜಿಹಾದ್ ನಡೆಸುತ್ತಿದೆ ಎಂದು ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಆರೋಪಿಸಿದ್ದಾರೆ.
ಪುಣೆಯಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಠಾಕ್ರೆ, ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ತನ್ನನ್ನು ಔರಂಗಜೇಬ್ ಅಭಿಮಾನಿಗ ಸಂಘದ ಮುಖ್ಯಸ್ಥ ಎಂದು ಕರೆದಿದ್ದಾರೆ. ಅಮಿತ್ ಷಾ ಅವರು ಪಾಣಿಪತ್ ಯುದ್ಧದಲ್ಲಿ ಮರಾಠರನ್ನು ಸೋಲಿಸಿದ ಆಫ್ಘನ್ ದೊರೆ ಅಹ್ಮದ್ ಷಾ ಅಬ್ದಾಲಿಯ ರಾಜಕೀಯ ವಂಶಸ್ಥರು ಎಂದು ತಿರುಗೇಟು ನೀಡಿದರು.
ನಾವು ನಮ್ಮ ಹಿಂದುತ್ವವನ್ನು ವಿವರಿಸಿದ ನಂತರ ಮುಸ್ಲಿಮರು ನಮ್ಮೊಂದಿಗಿದ್ದರೆ, ನಾವು (ಬಿಜೆಪಿ ಪ್ರಕಾರ) ಔರಂಗಜೇಬ್ ಅಭಿಮಾನಿಗಳ ಸಂಘ. ಹಾಗಾದರೆ ರಾಜಕೀಯ ಪಕ್ಷಗಳನ್ನು ಒಡೆದು ನೀವು ಮಾಡುತ್ತಿರುವುದು ಪವರ್ ಜಿಹಾದ್. ಯಾರ ಮನೆಯನ್ನು ಸುಡಬಾರದು ಎಂದು ಹೇಳಿಕೊಟ್ಟ ಛತ್ರಪತಿ ಶಿವಾಜಿ ಮಹಾರಾಜರನ್ನು ಆದರ್ಶವಾಗಿ ಪರಿಗಣಿಸುತ್ತೇವೆ. ಚಂದ್ರಬಾಬು ನಾಯ್ಡು, ನಿತೀಶ್ ಕುಮಾರ್ ಅವರಂತಹವರು ಹಿಂದುತ್ವವಾದಿಗಳೇ ಎಂಬುದನ್ನು ಬಿಜೆಪಿ ಹೇಳಬೇಕು?ಎಂದು ವ್ಯಂಗ್ಯ ಮಾಡಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296