ಔರಾದ್: ಕ್ರೂಸರ್ ಗೆ ದಾರಿಕೊಡಲು ಹೋದ ವೇಳೆ ನಿಯಂತ್ರಣ ತಪ್ಪಿದ ಕಲ್ಯಾಣ ಕನಾ೯ಟಕ ಸಾರಿಗೆ ನಿಗಮದ ಬಸ್ ರಸ್ತೆ ಬದಿಯ ಚರಂಡಿಗೆ ಇಳಿದ ಘಟನೆ ವಡಗಾಂವ (ದೇ) -ಬೇಲೂರ ನಡುವೆ ನಡೆದಿದೆ.
ಬೀದರ್ ನಿಂದ ಔರಾದ ತಾಲೂಕಿನ ಕರಂಜಿ ಕಡೆಗೆ ತೆರಳಿತ್ತಿದ್ದ ವೇಳೆ ಕಿರಿದಾದ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಘಟನೆ ವೇಳೆ 32 ಪ್ರಯಾಣಿಕರು ಬಸ್ ನಲ್ಲಿದ್ದರು. ಯಾರಿಗೂ ಪ್ರಾಣಪಾಯವಾಗಿಲ್ಲ ಎಂದು ಚಾಲಕ ಎಡಿಸನ್ ತಿಳಿಸಿದ್ದಾರೆ.
ಘಟನೆಯ ನಂತರ ಬಸ್ ರಸ್ತೆ ಮೇಲೆತ್ತಿ ಪ್ರಯಾಣಿಕರನ್ನು ಸುರಕ್ಷಿತವಾಗಿ ಆಯಾ ಗ್ರಾಮಗಳಿಗೆ ತಲುಪಿಸಲಾಯಿತು.
ಬೀದರ ಘಟಕ 1ರ ಔರಾದ ತಾಲೂಕಿನಲ್ಲಿ ಸಂಚರಿಸುವ ಬಹುತೇಕ ಬಸ್ ಗಳು ಗುಜರಿ. ಹಾಕುವ ಸ್ಥಿತಿಗೆ ಬಂದಿವೆ. ನಿತ್ಯ ಪ್ರಯಾಣಿಕರು ಸಮಸ್ಯೆ ಎದುರಿಸುವಂತಾಗಿದೆ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಎಚ್ಚೆತ್ತುಕೊಂಡು ಹೊಸ ಹೊಸ ಗಳನ್ನು ಓಡಿಸಬೇಕು ಎಂದು ವಡಗಾಂವ ಗ್ರಾಮಸ್ಥರು ಆಗ್ರಹಿಸಿ ದ್ದಾರೆ.
ವರದಿ: ಅರವಿಂದ ಮಲ್ಲಿಗೆ, ಬೀದರ್
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


