nammatumakuru

    Subscribe to Updates

    Get the latest creative news from FooBar about art, design and business.

    What's Hot

    ಸರಗೂರಿನಲ್ಲಿ ಅಕ್ರಮ ಕೇರಳ ಲಾಟರಿ ದಂಧೆ ಜಾಲ ಪತ್ತೆ: ಇಬ್ಬರು ಆರೋಪಿಗಳ ಬಂಧನ, 1.44 ಲಕ್ಷ ಮೌಲ್ಯದ ಟಿಕೆಟ್ ವಶ

    July 22, 2026

    ಜ್ಞಾನ ಪ್ರಕಾಶ್ ಸ್ವಾಮೀಜಿ ಜನ್ಮದಿನ ಆಚರಣೆ ಅಂಗವಾಗಿ ಮಕ್ಕಳಿಗೆ ನೋಟ್‌ ಬುಕ್ ವಿತರಣೆ

    July 22, 2026

    ಪ.ಪಂ. ಮಾಜಿ ಅಧ್ಯಕ್ಷ ಸರಗೂರು ಶಿವಣ್ಣ ಅವರ 63ನೇ ಜನ್ಮದಿನಾಚರಣೆ

    July 22, 2026
    Facebook Twitter Instagram
    ಟ್ರೆಂಡಿಂಗ್
    • ಸರಗೂರಿನಲ್ಲಿ ಅಕ್ರಮ ಕೇರಳ ಲಾಟರಿ ದಂಧೆ ಜಾಲ ಪತ್ತೆ: ಇಬ್ಬರು ಆರೋಪಿಗಳ ಬಂಧನ, 1.44 ಲಕ್ಷ ಮೌಲ್ಯದ ಟಿಕೆಟ್ ವಶ
    • ಜ್ಞಾನ ಪ್ರಕಾಶ್ ಸ್ವಾಮೀಜಿ ಜನ್ಮದಿನ ಆಚರಣೆ ಅಂಗವಾಗಿ ಮಕ್ಕಳಿಗೆ ನೋಟ್‌ ಬುಕ್ ವಿತರಣೆ
    • ಪ.ಪಂ. ಮಾಜಿ ಅಧ್ಯಕ್ಷ ಸರಗೂರು ಶಿವಣ್ಣ ಅವರ 63ನೇ ಜನ್ಮದಿನಾಚರಣೆ
    • ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ: ಪ್ರವೇಶಾತಿಗೆ ಅರ್ಜಿ ಆಹ್ವಾನ
    • ಗೋನೆಗಾರರು ಕೇರಾ ಸುರಕ್ಷಾ ವಿಮಾ ಯೋಜನೆ ಪ್ರಯೋಜನೆ ಪಡೆಯಲು ತೋಟಗಾರಿಕೆ ಇಲಾಖೆ ಮನವಿ
    • 6ನೇ ತರಗತಿ ಪ್ರವೇಶ ಪರೀಕ್ಷೆಗೆ ಅರ್ಜಿ ಆಹ್ವಾನ
    • ತುಮಕೂರು: ಗಾಂಜಾ ಸಾಗಣೆ: ಅಪರಾಧಿಗೆ 4 ವರ್ಷ ಕಠಿಣ ಶಿಕ್ಷೆ; ದಂಡ
    • ತೋಟಗಾರಿಕಾ ಬೆಳೆಗಳಿಗೆ ವಿಮಾ ಸೌಲಭ್ಯ: ಅವಧಿ ವಿಸ್ತರಣೆ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ವೀರಪ್ಪನ್​ ಗೆ ರಾಜ್​ ಕುಮಾರ್ ಅವರನ್ನು ಅಪಹರಣ ಮಾಡುವಂತೆ ಐಡಿಯಾ ಕೊಟ್ಟಿದ್ದು ಯಾರು?
    ರಾಜ್ಯ ಸುದ್ದಿ August 4, 2024

    ವೀರಪ್ಪನ್​ ಗೆ ರಾಜ್​ ಕುಮಾರ್ ಅವರನ್ನು ಅಪಹರಣ ಮಾಡುವಂತೆ ಐಡಿಯಾ ಕೊಟ್ಟಿದ್ದು ಯಾರು?

    By adminAugust 4, 2024No Comments3 Mins Read
    veerappan rajkumar

    ವೀರಪ್ಪನ್, ರಾಜ್​ಕುಮಾರ್ ಅವರನ್ನು ಅಪಹರಿಸಿ 24 ವರ್ಷಗಳಾದವು. ಅಂದಹಾಗೆ ವೀರಪ್ಪನ್, ರಾಜ್ ​ಕುಮಾರ್ ಅವರನ್ನೇ ಅಪಹರಣ ಮಾಡಿದ್ದು ಏಕೆ? ಮಹಾದಡ್ಡನಾಗಿದ್ದ ವೀರಪ್ಪನ್ ​ಗೆ ರಾಜ್​ ಕುಮಾರ್ ಅವರನ್ನು ಅಪಹರಣ ಮಾಡುವಂತೆ ಐಡಿಯಾ ಕೊಟ್ಟಿದ್ದು ಯಾರು?

    24 ವರ್ಷದ ಹಿಂದೆ ಇದೇ ಭೀಮನ ಅಮವಾಸ್ಯೆ ದಿನವೇ ರಾಜ್​ಕುಮಾರ್ ಅಪಹರಣವಾಗಿತ್ತು. ಅಷ್ಟಕ್ಕೂ ರಾಜ್​ಕುಮಾರ್ ಅವರನ್ನೇ ಅಪಹರಣ ಮಾಡಬೇಕು ಎಂಬ ಐಡಿಯಾ ವೀರಪ್ಪನ್​ಗೆ ಬಂದಿದ್ದು ಹೇಗೆ? ಅಸಲಿಗೆ ವೀರಪ್ಪನ್, ಕಾಡಿನಲ್ಲಿ ಕುಕೃತ್ಯಗಳನ್ನು 1980ರಲ್ಲಿಯೇ ಪ್ರಾರಂಭ ಮಾಡಿದ ಆದರೆ 1990ರ ದಶಕದ ಅಂತ್ಯದ ವೇಳೆಗೆ ಪೊಲೀಸ್, ಅರಣ್ಯ ಇಲಾಖೆಯವರ ಶಿಸ್ತಿನ ಕಾರ್ಯಾಚರಣೆಗಳಿಂದ ಗಂಧದ ಕಳ್ಳಸಾಗಣೆ, ಆನೆದಂತದ ವ್ಯಾಪಾರಗಳು ಕ್ಷೀಣಿಸಿದ್ದವು. ಎಸ್​ಐಟಿ ಅಧಿಕಾರಿ ಕೆ ವಿಜಯ್ ಕುಮಾರ್ ಹೇಳುವಂತೆ 1995 ರಿಂದ ಆಚೆಗೆ ವೀರಪ್ಪನ್ ಬಳಿ ಹಣವೇ ಇರಲಿಲ್ಲವಂತೆ. ತೀರ ಸಣ್ಣ ಪುಟ್ಟ ಹಣಕ್ಕೂ ಕಾಡಿನಲ್ಲಿ ದರೋಡೆಗಳನ್ನು ಮಾಡಲು ಪ್ರಾರಂಭಿಸಿದ್ದನಂತೆ ವೀರಪ್ಪನ್. ಒಂದು ಬಾರಿಯಂತೂ ತನ್ನ ಕೊರಳಲ್ಲಿದ್ದ ಚಿನ್ನದ ಸರವನ್ನೂ ಸಹ ಅಡವಿಟ್ಟು ಹಣ ಪಡೆದಿದ್ದನಂತೆ. ಅದೇ ಸಮದಯಲ್ಲಿ ವೀರಪ್ಪನ್​ ಗೆ ಅಪಹರಣದ ಐಡಿಯಾ ಬಂದಿದ್ದು.

    veerappan rajkumar

    ಯಾರನ್ನೇ ಅಪಹರಿಸಿದರೂ ಹಣ ಸಿಕ್ಕಿಬಿಡುತ್ತದೆ ಎಂಬ ಮೂಡನಂಬಿಕೆಯಲ್ಲಿದ್ದ ವೀರಪ್ಪನ್ ರಾಜ್​ ಕುಮಾರ್ ಅವರನ್ನು ಅಪಹರಿಸುವ ಮುನ್ನ ಕರ್ನಾಟಕದ ಖ್ಯಾತ ವನ್ಯಜೀವಿ ಸಂಶೋಧಕರೂ ಫೊಟೊಗ್ರಾಫರ್ ​ಗಳೂ ಆಗಿರುವ ಕೃಪಾಕರ ಮತ್ತು ಸೇನಾನಿಯನ್ನು ಅಪಹರಣ ಮಾಡಿದ್ದ. ಆದರೆ ಆ ಇಬ್ಬರೂ, ವೀರಪ್ಪನ್ ಗೆ ಚೆನ್ನಾಗಿ ಮನವರಿಕೆ ಮಾಡಿಸಿದ ಬಳಿಕ ಇಬ್ಬರನ್ನೂ ಬಿಟ್ಟು ಕಳಿಸಿದ್ದ. ಅದಾದ ಬಳಿಕ ಫ್ರೊಫೆಸರ್ ಒಬ್ಬನನ್ನು ಕಿಡ್ನ್ಯಾಪ್ ಮಾಡಿದ್ದ. ಆದರೆ ಅದರಿಂದಲೂ ಆತನಿಗೆ ಹಣ ಸಿಗಲಿಲ್ಲ. ಆಗ ವೀರಪ್ಪನ್​ ಗೆ ಅರಿವಾಗಿದ್ದು ದೊಡ್ಡ ವ್ಯಕ್ತಿಗಳನ್ನು ಅಪಹರಿಸಿದರೆ ಮಾತ್ರವೇ ಹಣ ಸಿಗುತ್ತದೆ ಎಂದು.

    ವೀರಪ್ಪನ್ ಮೊದಲಿಗೆ ಅಪಹರಣ ಮಾಡಬೇಕು ಎಂದುಕೊಂಡಿದ್ದು ಖ್ಯಾತ ನಟ ರಜನೀಕಾಂತ್ ಅವರನ್ನು. ರಜನೀಕಾಂತ್ ಅವರನ್ನು ಅಪಹರಿಸಲು ಯೋಜನೆ ಸಹ ನಡೆದಿತ್ತು. ವೀರಪ್ಪನ್ ​ನ ಕೆಲವು ಸಹಚರರು ಚೆನ್ನೈಗೆ ಬಂದು ರಜನೀಕಾಂತ್ ಅವರ ಜೀವನ ಶೈಲಿ, ಓಡಾಟಗಳನ್ನೆಲ್ಲ ವೀಕ್ಷಿಸಿದ್ದರು. ಆದರೆ ಚೆನ್ನೈಗೆ ಹೋಗಿ ಅಪಹರಿಸಿ ಅಲ್ಲಿಂದ ತಮ್ಮ ಕಾಡುಗಳಿಗೆ ರಜನೀಕಾಂತ್ ಅನ್ನು ಕರೆತರುವುದು ಸಾಧ್ಯವಿಲ್ಲದ ಮಾತೆಂದು ಆ ಯೋಜನೆಯನ್ನು ಕೈಬಿಟ್ಟರು.

    ಅದಾದ ಬಳಿಕ ರಾಜಕಾರಣಿ ಸ್ಟಾಲಿನ್ ಅನ್ನು ಅಪಹರಣ ಮಾಡುವ ಯೋಜನೆ ರೂಪಿತವಾಯ್ತು. ಸಿಎಂ ಕರುಣಾನಿಧಿ ಪುತ್ರ ಸ್ಟಾಲಿನ್ ಅನ್ನು ಅಪಹರಣ ಮಾಡಿದರೆ ಒಳ್ಳೆಯ ಹಣ ಸಿಗುತ್ತದೆ ಎಂದು ಲೆಕ್ಕಾಚಾರ ಹಾಕಿಕೊಂಡಿತು ವೀರಪ್ಪನ್ ಗುಂಪು. ಆದರೆ ಇಲ್ಲಿ ಇನ್ನೂ ದೊಡ್ಡ ಸಮಸ್ಯೆ ಎದುರಾಯ್ತು. ಈಗ ತಮಿಳುನಾಡಿನ ಸಿಎಂ ಆಗಿರುವ ಸ್ಟಾಲಿನ್ ಆಗ ಚೆನ್ನೈ ಮುನಿಸಿಪಾಲಿಟಿ ಅಧ್ಯಕ್ಷರಾಗಿದ್ದರು. ಸಿಎಂ ಪುತ್ರ ಸಹ ಆಗಿದ್ದ ಕಾರಣ ಅವರ ಸುತ್ತ ಗನ್​ಮ್ಯಾನ್ ​ಗಳು ಯಾವಾಗಲೂ ಇರುತ್ತಿದ್ದರು. ಅವರನ್ನು ಭೇದಿಸಿ ಸ್ಟಾಲಿನ್ ಅನ್ನು ಅಪಹರಣ ಮಾಡುವುದು ಕಷ್ಟವೆಂಬ ಕಾರಣಕ್ಕೆ ಸ್ಟಾಲಿನ್ ಅನ್ನು ಅಪಹರಿಸುವ ಯೋಜನೆಯನ್ನು ಕೈಬಿಡಲಾಯ್ತು.

    ಆಗ ವೀರಪ್ಪನ್ ತಂಡದಲ್ಲಿದ್ದ ಗಾಜನೂರಿನ ವ್ಯಕ್ತಿಯೇ ಒಬ್ಬ ರಾಜ್​ಕುಮಾರ್ ಅವರನ್ನು ಅಪಹರಿಸುವ ಐಡಿಯಾ ಕೊಟ್ಟ. ಆ ವ್ಯಕ್ತಿ, ರಾಜ್ ​ಕುಮಾರ್ ಅವರ ಗಾಜನೂರಿನ ಮನೆ ಕಟ್ಟುವ ಕಾರ್ಮಿಕನಾಗಿ ಕೆಲಸ ಮಾಡಿದ್ದ ಎನ್ನಲಾಗುತ್ತದೆ. ಆದರೆ ರಾಜ್​ ಕುಮಾರ್ ಹೆಸರು ಕೇಳುತ್ತಿದ್ದಂತೆ ವೀರಪ್ಪನ್​ ಖುಷಿಯಾಗಿಬಿಟ್ಟ. ಅದಾದ ಬಳಿಕ ತನ್ನ ಈ ಯೋಜನೆಯನ್ನು ತನ್ನ ಕೆಲವು ‘ಸಲಹೆಗಾರ’ರೊಟ್ಟಿಗೆ ಚರ್ಚಿಸಿದ. ಅವರಿಂದಲೂ ಯೋಜನೆಗೆ ಅನುಮೋದನೆ ಸಿಕ್ಕಿತು ಮಾತ್ರವಲ್ಲದೆ. ರಾಜ್​ಕುಮಾರ್ ಅಪಹರಣದ ಬಳಿಕ ತಾನೊಬ್ಬ ಹೀರೋ ಆಗಿಬಿಡಬಹುದು ಎಂಬ ಮುಂದಾಲೋಚನೆಯೂ ವೀರಪ್ಪನ್​ ಗೆ ಮೂಡಿತು. ಹಾಗಾಗಿ ರಾಜ್​ಕುಮಾರ್ ಅವರನ್ನು ಅಪಹರಿಸಿದ್ದು ಮಾತ್ರವೇ ಅಲ್ಲದೆ, ಅಪಹರಣದ ಬಳಿಕ ಇಟ್ಟ ಬೇಡಿಕೆಗಳನ್ನು ಸಹ ಬಹಳ ಎಚ್ಚರಿಕೆಯಿಂದ ಮತ್ತು ತನ್ನ ಇಮೇಜನ್ನು ಉತ್ತಮಪಡಿಸಿಕೊಳ್ಳುವ ಬೇಡಿಕೆಗಳನ್ನೇ ಇಟ್ಟಿದ್ದ. 2000ನೇ ಇಸವಿಯ ಜುಲೈ 30 ರಂದು ಗಾಜನೂರಿನ ಮನೆಯಿಂದ ರಾಜ್ ​ಕುಮಾರ್ ಅವರನ್ನು ವೀರಪ್ಪನ್ ಅಪಹರಣ ಮಾಡಿದ. ವಿಶೇಷವೆಂದರೆ ಅಪಹರಣ ನಡೆದ ದಿನ ಗಾಜನೂರಿನಿಂದ ಕೇವಲ 50 ಕಿ.ಮೀ ದೂರದಲ್ಲಿ ವಿಶೇಷ ದಳ ಎಸ್​ ಟಿಎಫ್, ವೀರಪ್ಪನ್ ಬಗ್ಗೆ ವಿಶೇಷ ಸಭೆಯನ್ನು ನಡೆಸಿತ್ತು. ಆದರೆ ಎರಡು ಸರ್ಕಾರಗಳು, ಎರಡು ರಾಜ್ಯಗಳ ಪೊಲೀಸ್ ಪಡೆಗಳ ಕಣ್ಣು ತಪ್ಪಿಸಿ ಆತ ಕರ್ನಾಟಕದ ಮೇರು ನಟನನ್ನು ಅಪಹರಿಸಿದ.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


    Provided by
    Provided by
    admin
    • Website

    Related Posts

    ತುಮಕೂರು: ಬಂಟ್ವಾಳದಲ್ಲಿ ನಡೆದ ಯುವತಿಯ ಭೀಕರ ಹತ್ಯೆಗೆ ಮಹಿಳಾ ಸಾಂಸ್ಕೃತಿಕ ಸಂಘಟನೆ ಖಂಡನೆ

    July 20, 2026

    ಸಂಕಷ್ಟದಲ್ಲೂ ಕೈಬಿಡದ ಸಂಗಾತಿ: ದೇವೇಗೌಡರ 72 ವರ್ಷಗಳ ಪಯಣಕ್ಕೆ ನೆರಲಾಗಿದ್ದ ಚೆನ್ನಮ್ಮ

    July 19, 2026

    ಕೊಡಚಾದ್ರಿ ಪ್ರವಾಸಕ್ಕೆ ಬಂದಿದ್ದ ಬೆಂಗಳೂರಿನ ಯುವಕ ಹೃದಯಾಘಾತದಿಂದ ಸಾವು

    July 18, 2026

    Comments are closed.

    Our Picks

    ನೀಟ್ ಅಕ್ರಮ: ಕಪ್ಪು ಪಟ್ಟಿ ಧರಿಸಿ ಮೌನ ಪ್ರತಿಭಟನೆ: ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹ

    July 21, 2026

    ಕೇಂದ್ರ ಸರ್ಕಾರವು ತಕ್ಷಣವೇ ಸೋನಮ್ ವಾಂಗ್ಚುಕ್ ಜೊತೆ ಚರ್ಚಿಸಲು ಆಗ್ರಹಿಸಿ ರಾಷ್ಟ್ರಪತಿಯವರಿಗೆ ಮನವಿ: ತುಮಕೂರಿನಲ್ಲಿ ಆನ್‌ ಲೈನ್ ಸಹಿ ಸಂಗ್ರಹ

    July 18, 2026

    ಪಿಎಂ–ವಿಕಸಿತ್ ಭಾರತ್ ರೋಜ್‌ ಗಾರ್ ಯೋಜನೆಯಡಿ ₹2,400 ಕೋಟಿ ಪ್ರೋತ್ಸಾಹಧನ ವಿತರಣೆ: 15 ಲಕ್ಷ ಉದ್ಯೋಗಾವಕಾಶಗಳ ಸೃಷ್ಟಿ

    June 20, 2026

    ಮಗಳ ಗಂಡನನ್ನೇ ವರಿಸಿದ ಅತ್ತೆ: ಕದ್ದುಮುಚ್ಚಿ ಶುರುವಾದ ಪ್ರೀತಿಗೆ ಬಿತ್ತು ಮದುವೆ ಮುದ್ರೆ!

    June 8, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಜಿಲ್ಲಾ ಸುದ್ದಿ

    ಸರಗೂರಿನಲ್ಲಿ ಅಕ್ರಮ ಕೇರಳ ಲಾಟರಿ ದಂಧೆ ಜಾಲ ಪತ್ತೆ: ಇಬ್ಬರು ಆರೋಪಿಗಳ ಬಂಧನ, 1.44 ಲಕ್ಷ ಮೌಲ್ಯದ ಟಿಕೆಟ್ ವಶ

    July 22, 2026

    ವರದಿ:ಹಾದನೂರು ಚಂದ್ರ ಸರಗೂರು: ಪಟ್ಟಣದಲ್ಲಿ ಅಕ್ರಮವಾಗಿ ಕೇರಳ ರಾಜ್ಯದ ಲಾಟರಿ ಟಿಕೆಟ್‌ಗಳನ್ನು ತಂದು ಮಾರಾಟ ಮಾಡುತ್ತಿದ್ದ ದಂಧೆಯನ್ನು ಭೇದಿಸಿರುವ ಸರಗೂರು…

    ಜ್ಞಾನ ಪ್ರಕಾಶ್ ಸ್ವಾಮೀಜಿ ಜನ್ಮದಿನ ಆಚರಣೆ ಅಂಗವಾಗಿ ಮಕ್ಕಳಿಗೆ ನೋಟ್‌ ಬುಕ್ ವಿತರಣೆ

    July 22, 2026

    ಪ.ಪಂ. ಮಾಜಿ ಅಧ್ಯಕ್ಷ ಸರಗೂರು ಶಿವಣ್ಣ ಅವರ 63ನೇ ಜನ್ಮದಿನಾಚರಣೆ

    July 22, 2026

    ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ: ಪ್ರವೇಶಾತಿಗೆ ಅರ್ಜಿ ಆಹ್ವಾನ

    July 22, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.