ಕರ್ನಾಟಕ ಅರಣ್ಯ ಇಲಾಖೆಯ ವ್ಯಾಪ್ತಿಯಲ್ಲಿರುವ ಆಯ್ದ ಪ್ರಕೃತಿ ಸೊಬಗಿನ ತಾಣಗಳನ್ನು ಗುರುತಿಸಿ, ಪ್ರಕೃತಿ ಪ್ರಿಯರು ಹಾಗೂ ಸಾಹಸ ಚಾರಣಿಗರ ಅನುಕೂಲಕ್ಕೆಂದು ರಾಜ್ಯ ಸರ್ಕಾರ ಪರಿಸರ ಪ್ರವಾಸೋದ್ಯಮ ಮಂಡಳಿಯನ್ನು ನಿರ್ಮಿಸಿ, ಅದರಡಿ 20ಕ್ಕೂ ಹೆಚ್ಚು ಅಚ್ಚುಮೆಚ್ಚಿನ ಚಾರಣ ಸ್ಥಳಗಳನ್ನು ಮಂಡಳಿಯ ನಿರ್ವಹಣೆಗೆ ಸೂಚಿಸಿತ್ತು.
ಚಾರಣಿಗರಿಂದ ಹಣ ಪಡೆದು ಇಲಾಖೆಗೆ ಹಣ ಪಾವತಿಸದ ಆರೋಪ ಎಂದು ವರದಿಯಾಗಿತ್ತು. ಇದರಿಂದ ಎಚ್ಚೆತ್ತ ಅರಣ್ಯ ಇಲಾಖೆ (Forest Department) ತಡವಾಗಿ ಕ್ರಮ ಕೈಗೊಂಡಿದೆ. ಇದರಿಂದ ಸ್ವತಃ ಅರಣ್ಯ ಇಲಾಖೆಯಿಂದಲೇ ಆನ್ ಲೈನ್ ಟಿಕೆಟ್ ಬುಕ್ಕಿಂಗ್ ಮಾಡಿಕೊಂಡು ನಿರ್ವಹಣೆ ಮಾಡಲು ಮುಂದಾಗಿದೆ.
ಚಾರಣ ಪ್ರಿಯರಿಗೆ ಇಲ್ಲಿದೆ ಕಹಿ ಸುದ್ದಿ
ಚಾರಣದ ಟಿಕೆಟ್ ಬುಕಿಂಗ್ ಇಕೋ ಟೂರಿಸಂ ಮಾಡುತ್ತಿತ್ತು. ಇದೀಗ ಇಕೋ ಟೂರಿಸಂ ಬದಲು ಅರಣ್ಯ ಇಲಾಖೆ ಚಾರಣ ನಿರ್ವಹಣೆ ಮಾಡಲು ಮುಂದಾಗಿದೆ. ಇದರಿಂದ ಸೂಕ್ತ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಆಗಸ್ಟ್1, 2024 ರಿಂದ ತಾತ್ಕಾಲಿಕವಾಗಿ ಚಾರಣ ತಡೆಹಿಡಿಯಲಾಗಿದೆ ಎಂದು ಚಿಕ್ಕಬಳ್ಳಾಪುರ ಉಪಅರಣ್ಯ ಸಂರಕ್ಷಣಾಧಿಕಾರಿ ರಮೇಶ್ ತಿಳಿಸಿದ್ದಾರೆ.
ಪ್ರಕೃತಿ ಸೊಬಗು ಹಾಗೂ ಚಾರಣಕ್ಕೆ ಖ್ಯಾತಿಯಾಗಿರುವ ಸ್ಕಂದಗಿರಿ(Skandagiri), ಕೈವಾರಬೆಟ್ಟ(Kaiwara Hills), ಮಾಕಳಿದುರ್ಗ(Makalidurga), ಅಂತರಗಂಗೆ(Antaragange), ಸಾವನದುರ್ಗ(Savandurga), ಬಿದರುಕಟ್ಟೆ(Bidarukatte), ರಾಮದೇವರಬೆಟ್ಟ(Ramadevara Hills), ಚಿನಾಗ್‌ಬೆಟ್ಟ(Chinag Hills), ಸಿದ್ದರಬೆಟ್ಟ(siddarabetta) ಸೇರಿದಂತೆ ರಾಜ್ಯಾದ್ಯಂತ ಇರುವ 21ಕ್ಕೂ ಹೆಚ್ಚು ಚಾರಣ ಸ್ಥಳಗಳಿಗೆ ರಾಜ್ಯ ಅರಣ್ಯ ಇಲಾಖೆ(Karnataka Forest Department) ತಾತ್ಕಾಲಿಕವಾಗಿ ನಿರ್ಬಂಧ ವಿಧಿಸಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


