ಈ ವರ್ಷದ ಸ್ವಾತಂತ್ರ್ಯೋತ್ಸವವು ಡಾ.ಬಿ.ಆರ್. ಅಂಬೇಡ್ಕರ್ ಅವರ ಜೀವನ, ಕೊಡುಗೆ, ಹಾಗೂ ಭಾರತ ಸಂವಿಧಾನದ ನಿರ್ಮಾಣದ ಕುರಿತಾದ ವಿಷಯಗಳನ್ನು ಆಧಾರವಾಗಿಟ್ಟುಕೊಂಡು ಆಯೋಜಿಸಲಾಗುತ್ತಿದ್ದು, ಇದರ ಅಂಗವಾಗಿ ಆಗಸ್ಟ್ 8ರಿಂದ 19ರವರೆಗೆ ಲಾಲ್ ಬಾಗ್ ಬೋಟಾನಿಕಲ್ ಗಾರ್ಡನ್, ಬೆಂಗಳೂರು ಇಲ್ಲಿ ಫಲಪುಷ್ಪ ಪ್ರದರ್ಶನ ನಡೆಯಲಿದೆ.
ಪ್ರದರ್ಶನದ ವಿಶೇಷತೆಗಳು:
* ಡಾ. ಅಂಬೇಡ್ಕರ್ ಅವರ ಜೀವನದ ಪ್ರಮುಖ ಘಟನೆಗಳ ಮೂರ್ತಿಗಳು ಮತ್ತು ನೋಟಗಳು.
* ಸಂವಿಧಾನ ಕುರಿತ ಪಠ್ಯ, ಚಿತ್ರಗಳು, ಹಾಗೂ ಮಾಹಿತಿ ಫಲಕಗಳು.
* ಅಂಬೇಡ್ಕರ್ ಅವರ ವಿಚಾರಧಾರೆಯನ್ನು ಪ್ರತಿಬಿಂಬಿಸುವ ಚಿನ್ನದ ಸ್ಮರಣಿಕೆ.
* ವಿವಿಧ ಬಗೆಯ ಹೂಗಳು, ಸಸ್ಯಗಳು, ಮತ್ತು ಔಷಧೀಯ ಗಿಡಗಳ ಪ್ರದರ್ಶನ.
ಪ್ರವೇಶದ ಟಿಕೆಟ್ ದರಗಳು:
ವಯಸ್ಕರು: ₹80 (ಸಾಮಾನ್ಯ ದಿನಗಳಲ್ಲಿ), ₹100 (ರಜೆ ದಿನಗಳಲ್ಲಿ)
ಮಕ್ಕಳು: ₹30
ಸಮವಸ್ತ್ರ ಧರಿಸಿದ ಶಾಲಾ ವಿದ್ಯಾರ್ಥಿಗಳು: (ಉಚಿತ ಪ್ರವೇಶ)
ಟಿಕೆಟ್ ಸೌಲಭ್ಯಗಳು:
* ಲಾಲ್‌ಬಾಗ್‌ನ ಎಲ್ಲ ಪ್ರವೇಶ ದ್ವಾರಗಳಲ್ಲಿ ಎಲೆಕ್ಟ್ರಾನಿಕ್ ಟಿಕೆಟ್ ಯಂತ್ರಗಳ ವ್ಯವಸ್ಥೆ.
* ಆನ್ ಲೈನ್ ಬುಕ್ಕಿಂಗ್ ಮೂಲಕ ಟಿಕೆಟ್ ಕೊಂಡುಕೊಳ್ಳುವ ವ್ಯವಸ್ಥೆ.
ಪ್ರವೇಶದ ಸಮಯ:
ಪ್ರದರ್ಶನ ದಿನಗಳಲ್ಲಿ ಲಾಲ್ ಬಾಗ್ ಬೆಳಿಗ್ಗೆ 9 ರಿಂದ ಸಂಜೆ 6 ರವರೆಗೆ ಪ್ರವಾಸಿಗರಿಗೆ ಮುಕ್ತವಾಗಿರುತ್ತದೆ.
ಈ ಪ್ರದರ್ಶನವು ಡಾ.ಅಂಬೇಡ್ಕರ್ ಅವರ ವಿಚಾರಧಾರೆಯನ್ನು ಮತ್ತು ಅವರ ದೇಶ ಸೇವೆಯನ್ನು ಮನಸ್ಸಿನಲ್ಲಿ ನಿಲ್ಲಿಸಲು ಒಂದು ಅದ್ಭುತ ಅವಕಾಶ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


