ಬೆಂಗಳೂರು: ರಸ್ತೆಯಲ್ಲಿ ಕಸ ಎಸೆದದ್ದನ್ನು ಪ್ರಶ್ನಿಸಿದ ಮನೆ ಮಾಲಿಕನನ್ನು ಬಾಡಿಗೆದಾರ ಮಚ್ಚಿನಿಂದ ಹೊಡೆದು ಹತ್ಯೆ ಮಾಡಿರುವ ಘಟನೆ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಸಿದ್ದಪ್ಪ(70) ಕೊಲೆಯಾದವರು. ತುಮಕೂರು ಜಿಲ್ಲೆ ಶಿರಾ ಮೂಲದ ಪುನೀತ್(24) ಹತ್ಯೆ ನಡೆಸಿದ ಆರೋಪಿಯಾಗಿದ್ದಾನೆ.
ಸಿದ್ದಪ್ಪ ಅವರು ಹಿಮಾಲಯ ಡ್ರಗ್ಸ್ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದರು. ಬಳಿಕ ಮಾದನಾಯಕನಹಳ್ಳಿಯಲ್ಲಿ ಮನೆ ಕಟ್ಟಿಕೊಂಡು ಕೆಲವು ಮನೆಗಳನ್ನು ಬಾಡಿಗೆಗೆ ನೀಡುತ್ತಿದ್ದರು. ಈ ಮನೆಯನ್ನು ಪುನೀತ್ ಮತ್ತು ಆತನ ತಾಯಿ ಬಾಡಿಗೆಗೆ ಪಡೆದುಕೊಂಡಿದ್ದರು ಎನ್ನಲಾಗಿದೆ.
ಘಟನೆ ನಡೆದ ದಿನ ಸಿದ್ದಪ್ಪ ವಾಕಿಂಗ್ ಹೋಗಿ ಬರುತ್ತಿದ್ದರು. ಈ ವೇಳೆ ಪುನೀತ್ ಕಸ ತುಂಬಿದ್ದ ಕವರ್ ನ್ನು ರಸ್ತೆಯಲ್ಲೇ ಎಸೆದಿದ್ದು, ಗುಟ್ಕಾ ತಿಂದು ರಸ್ತೆಯಲ್ಲೇ ಉಗಿದಿದ್ದ. ಇದನ್ನು ನೋಡಿ ಕೋಪಗೊಂಡ ಸಿದ್ದಪ್ಪ ಆತನಿಗೆ ಬೈದಿದ್ದರು.
ಇದರಿಂದ ಆಕ್ರೋಶ ವ್ಯಕ್ತಪಡಿಸಿದ ಸಿದ್ದಪ್ಪ ಮನೆಗೆ ಹೋಗಿ ಮಚ್ಚು ತಂದಿದ್ದು, ಸಿದ್ದಪ್ಪ ಅವರ ಕತ್ತಿಗೆ ಮಚ್ಚಿನಿಂದ ಹೊಡೆದು ಸ್ಥಳದಿಂದ ಪರಾರಿಯಾಗಿದ್ದಾನೆ. ಆದರೆ, ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


