ಬೆಂಗಳೂರು: ರೇಣುಕಾಸ್ವಾಮಿ ಕೇಸ್ ಗೆ ಸಂಬಂಧಿಸಿದಂತೆ ಇಂದು ನಟ ಚಿಕ್ಕಣ್ಣ ಹೇಳಿಕೆ ದಾಖಲು ಮಾಡಲಾಗುತ್ತಿದೆಯಂತೆ
ಹತ್ಯೆಯ ದಿನ ಸ್ಪೋನಿ ಬ್ರೂಕ್ ಪಬ್ ನಲ್ಲಿ ನಟ ದರ್ಶನ್, ಪ್ರದೋಷ್ ಜೊತೆಗೆ ಚಿಕ್ಕಣ್ಣ ಪಾರ್ಟಿಯಲ್ಲಿ ಭಾಗಿಯಾಗಿದ್ದರು.
ನಂತರ ಚಿಕ್ಕಣ್ಣ ತನ್ನ ಮನೆಗೆ ಹೋಗಿದ್ದರು. ಈ ಬಗ್ಗೆ ಪೊಲೀಸರ ಮುಂದೆ ಚಿಕ್ಕಣ್ಣ ಹೇಳಿಕೆ ದಾಖಲು ಮಾಡಿದ್ದರು, ಇದೀಗ ಕೋರ್ಟ್ ನಲ್ಲಿ ಜಡ್ಜ್ ಮುಂದೆ ಚಿಕ್ಕಣ್ಣ ಹೇಳಿಕೆ ದಾಖಲಿಸಲಿದ್ದಾರೆ.
ಆ ದಿನ ಪಾರ್ಟಿ ಮುಗಿಸಿ ಚಿಕ್ಕಣ್ಣ ಸೀದಾ ತನ್ನ ಮನೆಗೆ ತೆರಳಿದ್ದರು. ದರ್ಶನ್ ಜೊತೆಗೆ ಚಿಕ್ಕಣ್ಣ ಶೆಡ್ ಗೆ ಹೋಗಿರಲಿಲ್ಲ. ಹಾಗಾಗಿ ಈ ಕೇಸ್ ನಲ್ಲಿ ಚಿಕ್ಕಣ್ಣ ಅವರ ಪಾತ್ರವಿರಲಿಲ್ಲ ಎನ್ನಲಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


