ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ & ಗ್ಯಾಂಗ್ ಜೈಲುಪಾಲಾಗಿದೆ. ಇನ್ನು ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿರುವ ಪೊಲೀಸರು ಮಹತ್ವದ ಸಾಕ್ಷ್ಯಗಳ ಸಂಗ್ರಹಕ್ಕೆ ಮುಂದಾಗಿದ್ದಾರೆ. ದರ್ಶನ್‌ನ್ನು ಹೊರತರಲು ಪತ್ನಿ ವಿಜಯಲಕ್ಷ್ಮಿ ಹಾಗೂ ಕುಟುಂಬಸ್ಥರು ಇನ್ನಿಲ್ಲದ ಪಯತ್ನಗಳನ್ನು ಮಾಡುತ್ತಿದ್ದಾರೆ. ಇದೀಗ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಸ್ಫೋಟಕ ಹೇಳಿಕೆಯೊಂದನ್ನು ನೀಡಿದ್ದಾರೆ.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಜೈಲುಪಾಲಾಗಿ ಒಂದೂವರೇ ತಿಂಗಳು ಕಳೆದಿದ್ದು, ಚಾರ್ಜ್‌ಶೀಟ್ ಕೂಡ ಸಲ್ಲಿಕೆಯಾಗಿಲ್ಲ. ಆದರೆ ದರ್ಶನ್‌ಗೆ ಜಾಮೀನು ಸಿಗುತ್ತಾ.. ಇಲ್ಲವಾ? ಅನ್ನುವುದು ಇದೀಗ ತುಂಬಾ ಪ್ರಮುಖವಾಗಿದ್ದು, ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಆಗುತ್ತಲೇ ಇದೆ.
ಹಿರಿಯ ಪೊಲೀಸ್ (ನಿವೃತ್ತ ಪೊಲೀಸ್) ಅಧಿಕಾರಿ ಲೋಕೇಶ್ವರ್ ಎಂಬುವವರು ಹೇಳುವ ಪ್ರಕಾರ, “ಈ ಪ್ರಕರಣ ಒಂದು ವಿಶೇಷ ಪ್ರಕರಣ ಆಗಿದೆ. ಆದ್ದರಿಂದ ದರ್ಶನ್‌ಗೆ ಜಾಮೀನು ಸಿಗುವುದು ತುಂಬಾ ಕಷ್ಟ,” ಎಂದು ಹೇಳಿದ್ದಾರೆ. ಇನ್ನು ಈಗಾಲೇ ಪ್ರಕರಣದ ಪ್ರಮುಖ ಸಾಕ್ಷಿಗಳನ್ನು ಪೊಲೀಸರು ಕೆಲಹಾಕಿದ್ದು, ಇವುಗಳು ಬಲಿಷ್ಠವಾಗಿವೆ. ಟೆಕ್ನಿಕಲ್ ಎವಿಡೆನ್ಸ್ ಕೂಡ ಪ್ರಬಲವಾಗಿವೆ ಎನ್ನಲಾಗುತ್ತಿದೆ.
ನಟ ದರ್ಶನ್ ಈ ಮನೆ ಊಟದ ವಿಷಯಕ್ಕೆಲ್ಲ ಜಾಮೀನು ಅರ್ಜಿ ಸಲ್ಲಿಕೆ ಮಾಡಬಾರದು, ಅದು ಒಂದು ರೀತಿಯಲ್ಲಿ ಪ್ರಕರಣಕ್ಕೆ ಹಿನ್ನಡೆ ಆದಂತೆ ಆಗುತ್ತದೆ. ದರ್ಶನ್ ಹೊರಬರುವುದಕ್ಕೆ ಒಂದು ದಾರಿಯಿದೆ, ದರ್ಶನ್ ಜೈಲಿನೊಳಗೆ ಯಾವ ರೀತಿ ನಡೆದುಕೊಳ್ತಾರೆ ಅನ್ನೋದರ ಮೇಲೆ ಸ್ವಲ್ಪ ಬೇಗ ಜಾಮೀನು ಸಿಗಬಹುದು ಎಂದು ಹೇಳಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


