ಭಾರತದಲ್ಲಿ ರಮ್ ಮದ್ಯವನ್ನು ಬಡವರ ಮದ್ಯ ಎಂದೇ ಕರೆಯುತ್ತಾರೆ. ಇಲ್ಲೊಂದು ಬೆಲ್ಲದ ರಮ್ ಕುಡಿಯಲು ಸಿದ್ಧವಾಗಿದೆ. ಭಾರತದಲ್ಲಿ ಹಲವು ಬ್ರ್ಯಾಂಡ್ ರಮ್‌ಗಳಿವೆ. ಇದೀಗ ಭಾರತ ತನ್ನದೇ ಆದ ವಿಶೇಷ ರಮ್ ತಯಾರಿಸಿದೆ. ಇದು ನಮ್ಮ ಮೈಸೂರಿನ ನಂಜನಗೂಡಿನಲ್ಲಿ ಉತ್ಪಾದನೆಯಾಗಿದೆ ಅನ್ನೋದು ಮತ್ತೊಂದು ವಿಶೇಷ. ಬರೋಬ್ಬರಿ 8 ವರ್ಷಗಳ ಸತತ ಪರಿಶ್ರಮದ ಮೂಲಕ ಇದೀಗ ಕನ್ನಡ ಹೆಸರಿನ ಅಂತಾರಾಷ್ಟ್ರೀಯ ಬ್ರ್ಯಾಂಡ್ ಹುಲಿ ರಮ್ ಬಿಡುಗಡೆಗೆ ಸಜ್ಜಾಗಿದೆ.
ಇದೇ ಮೊದಲ ಭಾರಿಗೆ ಭಾರತ ಬೆಲ್ಲದ ಡಿಸ್ಟಿಲ್ಲರ್ ಮೂಲಕ ಈ ಮದ್ಯ ತಯಾರಿಸಲಾಗಿದೆ. ನಂಜನಗೂಡಿನಲ್ಲಿ ಈ ವಿಶೇಷ ಮದ್ಯ ತಯಾರಾಗಿದೆ. ಆಗಸ್ಟ್ 15ರಂದು ಈ ಮದ್ಯ ದೇಶಾದ್ಯಂತ ಮಾರುಕಟ್ಟೆಗೆ ಪ್ರವೇಶಿಸಲಿದೆ. ಈ ಕುರಿತು ಅರುಣ್ ಅರಸ್ ಹಾಗೂ ಚಂದ್ರಾ ಎಸ್ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಹುಲಿ ರಮ್ ಭಾರತದಲ್ಲಿ ಉತ್ಪಾದನೆಯಾದ ರಮ್. ಇದು ಹುಲಿ ಕನ್ನಡ ಪದ. ಭಾರತದಲ್ಲಿ ಮೊದಲ ಬಾರಿಗೆ ತಯಾರಾದ ಮೈಕ್ರೋ ಡಿಸ್ಟಲರಿಯಲ್ಲಿ ತಯಾರಿಸಿದ ವಿಶ್ವದರ್ಜೆಯ ಬೆಲ್ಲದ ರಮ್ ಇದಾಗಿದೆ. ನಮ್ಮ ಪೂರ್ವಜರು ಆನಂದಿಸಿ ಸವಿದ ವಿಶೇಷ ಮದ್ಯವನ್ನು ಕಳೆದ 8 ವರ್ಷಗಳ ಸತತ ಪರಿಶ್ರಮದ ಮೂಲಕ ಹೊರತರಲಾಗಿದೆ ಎಂದು ಅರುಣ್ ಅರಸ್ ಸೋಶಿಯಲ್ ಮೀಡಯಾದಲ್ಲಿ ಹಂಚಿಕೊಂಡಿದ್ದಾರೆ.
ಹುಲಿ ರಮ್ ಒಂದು ಬಾಟಲಿ ಬೆಲೆ 2,300 ರೂಪಾಯಿ. ಬಿಡುಗಡೆಯ ಆರಂಭಿಕ ಹಂತದಲ್ಲಿ 2,000 ಬಾಟಲ್‌ಗಳು ಬೆಂಗಳೂರಿನ ಮಳಿಗೆಗಳಿಗೆ ಪೂರೈಸಲಾಗುತ್ತಿದೆ. ಬಳಿಕ ಹಂತ ಹಂತವಾಗಿ ಎಲ್ಲಾ ಭಾಗಕ್ಕೆ ವಿಸ್ತರಣೆಯಾಗಲಿದೆ. ದೇಶ ವಿದೇಶಗಳಲ್ಲೂ ಈ ಮದ್ಯ ಲಭ್ಯವಾಗಲಿದೆ.
ವಿಶೇಷ ಸೂಚನೆ: ಮದ್ಯಪಾನ ಆರೋಗ್ಯಕ್ಕೆ ಹಾನಿಕರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


